• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯಿಂದ 86 ಹಾಸಿಗೆಗಳ ಐಸಿಯು ಘಟಕ ಕೊಡುಗೆ

|

ಬೆಂಗಳೂರು, ಮೇ 8: ಜಾಗತಿಕ ಮನ್ನಣೆಯ ಬಹುರಾಷ್ಟ್ರೀಯ ಕಂಪನಿಯಾಗಿರುವ ಅಮೆರಿಕದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿ, ಕರ್ನಾಟಕ ಸರ್ಕಾರಕ್ಕೆ ಸುಮಾರು 3 ಕೋಟಿ ರೂ.ಗಳ 86 ಹಾಸಿಗೆಗಳ ಮಾಡ್ಯುಲರ್ ಐಸಿಯು ಘಟಕದ ಕೊಡುಗೆ ನೀಡಿದೆ.

ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಹಿರಿಯ ಅಧಿಕಾರಿಗಳ ನಿಯೋಗ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಅವರ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಭೇಟಿ ಮಾಡಿ ಈ ಉಪಕ್ರಮವನ್ನು ಘೋಷಿಸಿತು.

ಕೊರೊನಾ ಮಾರ್ಗಸೂಚಿ ಗಾಳಿಗೆ ತೂರಿ ವ್ಯಕ್ತಿಯ ಅಂತ್ಯ ಸಂಸ್ಕಾರ, ಬಳಿಕ ನಡೆದಿದ್ದೇ ಬೇರೆ ಕೊರೊನಾ ಮಾರ್ಗಸೂಚಿ ಗಾಳಿಗೆ ತೂರಿ ವ್ಯಕ್ತಿಯ ಅಂತ್ಯ ಸಂಸ್ಕಾರ, ಬಳಿಕ ನಡೆದಿದ್ದೇ ಬೇರೆ

ಈ ಸಂದರ್ಭದಲ್ಲಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯ ಉಪಕ್ರಮವನ್ನು ಶ್ಲಾಘಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, "ಸರ್ಕಾರದೊಂದಿಗೆ ಖಾಸಗಿ ಉದ್ಯಮ ವಲಯವೂ ಕೈಜೋಡಿಸಿ, ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ಆರೋಗ್ಯ ಸೇವೆ ಒದಗಿಸುವುದು ನಮ್ಮ ಉದ್ದೇಶ. ಆರೋಗ್ಯ ಮೂಲಸೌಕರ್ಯವನ್ನು ಇನ್ನೂ ವೇಗವಾಗಿ ಅಭಿವೃದ್ಧಿಪಡಿಸಲು ಕಾರ್ಪೊರೇಟ್ ಕಂಪನಿಗಳು, ಕೈಗಾರಿಕಾ ವಲಯ ಸಿಎಸ್ಆರ್ ಅನುದಾನವನ್ನು ಬಳಸಿ ತಮಗೆ ಸಾಧ್ಯವಿರುವ ರೀತಿಯಲ್ಲಿ ಜನರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯು 86 ತುರ್ತು ಚಿಕಿತ್ಸಾ ಮಾಡ್ಯುಲರ್ ಐಸಿಯು ಹಾಸಿಗೆ ನೀಡಿರುವುದನ್ನು ಶ್ಲಾಘಿಸುತ್ತೇನೆ ಮತ್ತು ಕಂಪನಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಕಂಪನಿ ಅಧ್ಯಕ್ಷರು ಹಾಗೂ ಎಂಡಿ ಸಂತೋಷ್ ಕುಮಾರ್ ಮಾತನಾಡಿ, "1985ರಲ್ಲಿ ಬೆಂಗಳೂರಿಗೆ ಬಂದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಗೆ ಬೆಂಗಳೂರು ಮತ್ತು ಕರ್ನಾಟಕ ಮನೆಯಾಗಿದೆ. ರಾಜ್ಯ ಕೋವಿಡ್ ಸಾಂಕ್ರಾಮಿಕ ಎದುರಿಸುತ್ತಿರುವಾಗ ನಮ್ಮ ಕಡೆಯಿಂದ ನೆರವಾಗಲು ಇದೊಂದು ಸಣ್ಣ ಪ್ರಯತ್ನ. ಈ ಅವಕಾಶವನ್ನು ನೀಡಿದ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ' ಎಂದು ತಿಳಿಸಿದರು.

ಕೋವಿಡ್ 19: ಮೇ 08 ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ? ಕೋವಿಡ್ 19: ಮೇ 08 ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?

ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಕ್ರಿಯ ಸಹಕಾರಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿ, ಈ ಉಪಕ್ರಮ ಐಸಿಯು ಹಾಸಿಗೆಗಳ ಲಭ್ಯತೆಯನ್ನು ಹೆಚ್ಚಿಸುವ ಜೊತೆಗೆ ಕೋವಿಡ್ ಸೋಂಕಿತರಿಗೆ ಸಮಯೋಚಿತ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮದ ಭಾಗವಾಗಿ, (ಸಿಎಸ್ಆರ್) ಈ 86 ಐಸಿಯು ಹಾಸಿಗೆಗಳನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ (ಆರ್.ಜಿ.ಐ.ಸಿ.ಡಿ) ಸ್ಥಾಪಿಸಲಾಗುತ್ತಿದ್ದು, ಇದು 3-4 ವಾರಗಳಲ್ಲಿ ಸಿದ್ಧವಾಗಲಿದೆ.

ಏಪ್ರಿಲ್ 30ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, 8 ಬಿಬಿಎಂಪಿ ವಲಯಗಳಲ್ಲಿ ತಲಾ 500 ಐಸಿಯು ಹಾಸಿಗೆಗಳನ್ನು ಸ್ಥಾಪಿಸಲು ನೋಡಲ್ ಅಧಿಕಾರಿಯನ್ನಾಗಿ ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ (ಐಪಿಎಸ್) ಅವರನ್ನು ನೇಮಕ ಮಾಡಿದ್ದರು. ಇದಕ್ಕೆ ಪೂರಕವಾಗಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ವತಿಯಿಂದ ಈ ಸೌಲಭ್ಯ ಸರ್ಕಾರಕ್ಕೆ ನೀಡಲಾಗುತ್ತಿದೆ.

ನಿಯೋಗದಲ್ಲಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ರಾಜೇಶ್ ಖುಷ್, ಕಾನೂನು ನಿರ್ದೇಶಕ (ಏಷ್ಯಾ) ಗೌರವ್ ಜಬುಲೀ, ಹಣಕಾಸು ಮತ್ತು ಕಾರ್ಯಾಚರಣೆಗಳ ನಿರ್ದೇಶಕರಾದ ಶೆತುಲ್ ಠಕ್ರಾರ್, ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಮತ್ತು ನೋಡಲ್ ಅಧಿಕಾರಿ ಡಾ.ಪಿ.ಎಸ್.ಹರ್ಷ ಉಪಸ್ಥಿತರಿದ್ದರು.

   ಭಾರತ ಟೆಸ್ಟ್ ತಂಡ ಸೇರಿಕೊಂಡ 3 ಕನ್ನಡಿಗರು | Oneindia Kannada

   ಈ ಕೋವಿಡ್ ಸಮರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ಉತ್ಸುಕರಾಗಿರುವ ಖಾಸಗಿ ಉದ್ಯಮ ವಲಯ nodalicubbmp@gmail.com ಈಮೇಲ್ ನಲ್ಲಿ ಸರ್ಕಾರದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ನೋಡಲ್ ಅಧಿಕಾರಿ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

   English summary
   Texas Instruments contributes 86 bed modular ICU units worth about Rs 3 crores to Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X