ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹೇಂದ್ರ ಸಿಂಗ್ ಧೋನಿಗೆ ಕೇಳಬಾರದ 10 ಪ್ರಶ್ನೆಗಳು!

By Kiran B Hegde
|
Google Oneindia Kannada News

ಬೆಂಗಳೂರು, ಡಿ. 31: ಟೆಸ್ಟ್ ಕ್ರಿಕೆಟ್‌ನಿಂದ ಮಹೇಂದ್ರಸಿಂಗ್ ಧೋನಿ ನಿವೃತ್ತಿ. ಇದೊಂದು ರಹಸ್ಯವೇ, ಸರಿಯೇ, ತಪ್ಪೇ, ಅಚ್ಚರಿಯೇ, ಆಘಾತವೇ ಏನು? ಅಥವಾ ಇವೆಲ್ಲವುಗಳ ಸಮ್ಮಿಳಿತವೇ? ಗೊತ್ತಿಲ್ಲ.

ಭಾರತ ಇದುವರೆಗೆ ಕಂಡ ಅತ್ಯಂತ ಯಶಸ್ವಿ ನಾಯಕನ ನಿವೃತ್ತಿಯ ಹಿಂದಿನ ಕಾರಣ ಯಾರಿಗೂ ಅರ್ಥವೇ ಆಗಲಿಲ್ಲ. ಈ ನಿರ್ಧಾರ ಧೋನಿ ಅಭಿಮಾನಿಗಳಿಗೆ ಆಘಾತ ತಂದಿದ್ದರೆ, ಟೆಸ್ಟ್ ಸೋಲಿಗೆ ನಾಯಕನೇ ಕಾರಣ ಎಂದೆಲ್ಲ ಆರೋಪಿಸಿದವರು ಸಂತಸಪಟ್ಟಿದ್ದಾರೆ. [ಟೆಸ್ಟ್ ಕ್ರಿಕೆಟ್ ಗೆ ಧೋನಿ ವಿದಾಯ]

ಸಾಮಾಜಿಕ ಜಾಲತಾಣದಲ್ಲಿ ಧೋನಿ ಪರ ಹಾಗೂ ವಿರುದ್ಧ ಅಭಿಪ್ರಾಯಗಳೆರಡೂ ವ್ಯಕ್ತವಾಗಿವೆ. ಆದರೆ, ಟೆಸ್ಟ್ ಸರಣಿ ಪೂರ್ಣಗೊಳ್ಳುವ ಮೊದಲೇ ಧೋನಿ ನಿವೃತ್ತಿ ಘೋಷಿಸಿದ್ದು ತಂಡದ ಇತರ ಆಟಗಾರರು ಹಾಗೂ ಬಿಸಿಸಿಐ ಆಡಳಿತಾಧಿಕಾರಿಗಳಿಗೆ ಆಘಾತ ತಂದಿದೆ.

ಇದರ ಜೊತೆಗೆ ಧೋನಿ ನಿವೃತ್ತಿ ಅನೇಕ ಶಂಕೆಗಳನ್ನೂ ಹುಟ್ಟುಹಾಕಿದೆ. ಕೇವಲ 33 ವರ್ಷ ವಯಸ್ಸಿನ ತಂಡದ ನಾಯಕ ನಿವೃತ್ತಿ ಘೋಷಿಸಿದ್ದಕ್ಕೆ ಕಾರಣವೇನೆಂಬುದರ ಕುರಿತು ಚರ್ಚೆ ಆರಂಭವಾಗಿದೆ.

dhoni

ಆಗಿದ್ದೇನು? : ಮಹೇಂದ್ರ ಸಿಂಗ್ ಧೋನಿ ತಮ್ಮ ನಿವೃತ್ತಿಯ ನಿರ್ಧಾರವನ್ನು ಬಿಬಿಸಿಐಗೆ ತಿಳಿಸಿದರು. ಅವರು ಮಾಧ್ಯಮಗಳಿಗೆ ಪ್ರಕಟಣೆ ನೀಡಿ ವಿಷಯ ಅರುಹಿದರು.

ಧೋನಿ ಅವರು ಏಕದಿನ ಪಂದ್ಯಗಳ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಟೆಸ್ಟ್‌ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ, ಧೋನಿ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನುಳಿಯಲು ನಿರ್ಧರಿಸಿದರು. [ಧೋನಿ ನಿವೃತ್ತಿ : ಯಾರು, ಏನು ಟ್ವೀಟ್ ಮಾಡಿದರು?]

'ಕ್ಯಾಪ್ಟನ್ ಕೂಲ್' ಖ್ಯಾತಿಯ ಧೋನಿ ಈಗ ಮೆಲ್ಬೋರ್ನ್ ಟೆಸ್ಟ್ ಆಡದೆ ಮನೆಗೆ ವಾಪಸ್ಸಾಗಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ 2-0 ಅಂಕಗಳಿಂದ ಮುಂದಿದೆ. ಮೂರನೇ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡ ಕಾರಣ ಸರಣಿ ಆತಿಥೇಯರ ಕೈವಶವಾಗಿದೆ.

ವಿಷಯ ಏನೇ ಇದ್ದರೂ ಈವರೆಗೆ ನಾಯಕನಾಗಿ 90 ಪಂದ್ಯಗಳನ್ನು ಆಡಿರುವ ಧೋನಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂಬುದರಲ್ಲಿ ಅನುಮಾನವಿಲ್ಲ.

dhoni

ಆದರೆ, ಧೋನಿಗೆ ಕೇಳಬಾರದಂತಹ 10 ಪ್ರಶ್ನೆಗಳು ಇಲ್ಲಿವೆ...
1) ಸರಣಿಯ ಮಧ್ಯೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇಕೆ?
2) ಭಾರತ ಇನ್ನು ಕನಿಷ್ಠ ಆರು ತಿಂಗಳ ಕಾಲ ಟೆಸ್ಟ್ ಪಂದ್ಯ ಆಡುವುದಿಲ್ಲ. ಹಾಗಿದ್ದಾಗ ನಿವೃತ್ತಿಗೆ ಆತುರ ತೋರಿದ್ದೇಕೆ?
3) ಟೆಸ್ಟ್ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಬಿಟ್ಟುಕೊಡುವಂತೆ ಒತ್ತಡವಿತ್ತೇ?
4) ಕೊಹ್ಲಿ ನಾಯಕತ್ವದಡಿ ಆಡಲು ನಿಮಗೆ ಇಷ್ಟವಿರಲಿಲ್ಲವೇ? [ಧೋನಿ ನಿವೃತ್ತಿ ಘೋಷಣೆಗೆ ಅಸಲಿ ಕಾರಣವೇನು?]
5) ಸರಣಿಯೊಂದರ ಗೆಲುವಿಗೆ ಅಗತ್ಯವಾದಷ್ಟು ಟೆಸ್ಟ್ ಪಂದ್ಯಗಳು ಇಲ್ಲದಿದ್ದಾಗ ನಿವೃತ್ತಿ ಘೋಷಿಸಿದ್ದು ಎಷ್ಟು ಸರಿ? ಸಿಡ್ನಿಯಲ್ಲಿ ನಡೆಯಲಿರುವ ಟೆಸ್ಟ್ ಗೆದ್ದು ಗೌರವ ಉಳಿಸಿಕೊಳ್ಳುವ ವಿಶ್ವಾಸ ಉಳಿಯಲಿಲ್ಲವೇ?
6) ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತು ವಿವಾದಗಳು ನಿಮ್ಮನ್ನು ಕಾಡಿದವೇ? ಅಥವಾ ಹಿತಾಸಕ್ತಿಯ ಸಂಘರ್ಷಕ್ಕೆ ನೀವು ಬಲಿಯಾದಿರಾ?
7) ಕೊಹ್ಲಿ ನಾಯಕನಾಗುವುದರ ಕುರಿತು ನಿಮ್ಮ ಅಭಿಪ್ರಾಯವೇನು? ನಿಮ್ಮ ಸ್ಥಾನ ತುಂಬಲು ಅವರು ಸರಿಯಾದ ವ್ಯಕ್ತಿ ಎಂದು ನಿಮಗೆ ಅನ್ನಿಸುತ್ತದೆಯೇ?
8) ಬ್ರಿಸ್ಬೇನ್ ಟೆಸ್ಟ್‌ ಸಂದರ್ಭ ಡ್ರೆಸ್ಸಿಂಗ್ ರೂಂನಲ್ಲಿ ನಡೆಯಿತು ಎನ್ನಲಾದ ಜಗಳವನ್ನು ಬಹಿರಂಗಗೊಳಿಸಿದ್ದರಿಂದ ತಂಡದ ಇತರ ಸದಸ್ಯರು ಹಾಗೂ ನಿಮ್ಮ ಮಧ್ಯೆ ಬಿರುಕು ಮೂಡಿತೇ?
9) ಟೆಸ್ಟ್ ನಾಯಕತ್ವವನ್ನು ನಿಮ್ಮ ಬದಲು ವಿರಾಟ್ ಕೊಹ್ಲಿಗೆ ವಹಿಸಲು ತಂಡದ ನಿರ್ದೇಶಕ ರವಿ ಶಾಸ್ತ್ರಿ ಹೆಚ್ಚು ಒಲವು ಹೊಂದಿದ್ದರೇ?
10) ನಿವೃತ್ತಿ ಕುರಿತು ನೀವು ನೇರ ಹೇಳಿಕೆ ನೀಡದಿರುವುದಕ್ಕೆ ಕಾರಣವೇನು? ಈ ಪ್ರಶ್ನೆಗೆ ಉತ್ತರ ನೀಡುತ್ತೀರಾ ಅಥವಾ ಈ ಕುರಿತು ಪುಸ್ತಕ ಬರೆದು ತಿಳಿಸುತ್ತೀರಾ?

English summary
Mystery. Right. Wrong. Surprise. Shock. Respect. What is it? Maybe all put together. Nobody knows, because it is about MS Dhoni, arguably India's greatest captain ever. What prompted Dhoni to arrive at this decision is not yet known. Fans have every right to know from their favorite cricketer about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X