ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಧಾನಿಯಲ್ಲಿದ್ದಾರಾ ಉಗ್ರ ಬೆಂಬಲಿಗರು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಕರ್ನಾಟಕ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಶಂಕಿತ ಉಗ್ರ ಸಂಘಟನೆಯ ಬೆಂಬಲಿಗರು ಅಡಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆತಂಕ ವ್ಯಕ್ತಪಡಿಸಿದೆ. ಅವರನ್ನು ಬಂಧಿಸಲು ಸ್ಥಳೀಯ ಪೊಲೀಸರ ಜೊತೆ ಬಲೆ ಬೀಸಿದೆ.

ಬೆಂಗಳೂರಿನ ಜನ ಯಾವಾಗ ಏನಾಗುತ್ತದೋ ಎಂಬ ಸ್ಥಿತಿಯಲ್ಲಿ ದಿನನಿತ್ಯ ಜೀವನ ಸಾಗಿಸುತ್ತಿದ್ದಾರೆ. ಆಗಾಗ ನಗರದಲ್ಲಿ ಬಾಂಬ್ ಬೆದರಿಕೆ, ಉಗ್ರರ ಬಂಧನದಂತಹ ಸುದ್ದಿಗಳು ಕಿವಿಗೆ ಬೀಳುತ್ತುರುತ್ತವೆ. ಈಗ ಮತ್ತೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಉಗ್ರರ ಕರಿನೆರಳು ಬಿದ್ದಿದೆ.

ಎನ್‌ಆರ್‌ಸಿಗೆ ಅರ್ಹರಲ್ಲದವರೆಲ್ಲರೂ ದೇಶದಿಂದ ಹೊರಕ್ಕೆ: ಅಮಿತ್ ಶಾಎನ್‌ಆರ್‌ಸಿಗೆ ಅರ್ಹರಲ್ಲದವರೆಲ್ಲರೂ ದೇಶದಿಂದ ಹೊರಕ್ಕೆ: ಅಮಿತ್ ಶಾ

ಅಗಸ್ಟ್ 2018 ರಂದು ರಾಮನಗರದಲ್ಲಿ ಜೆಎಂಬಿ ಉಗ್ರ ಸಂಘಟನೆಯ ಶಂಕಿತ ಉಗ್ರ ಮುನೀರ್ ಶೇಖ್ ಅಲಿಯಾಸ್ ಬೋಮ್ ಮಿಯಾನ್ ನನ್ನು ಎನ್ಐಎ ಬಂಧಿಸಿತ್ತು. ಅವನನ್ನು ವಿಚಾರಣೆ ಮಾಡಿದಾಗ ಹಲವು ಮಾಹಿತಿಗಳನ್ನು ಬಾಯಿ ಬಿಟ್ಟಿದ್ದ.

Terrorist Supporters Is There In Bengaluru?

ಅವನು ಕೊಟ್ಟ ಮಾಹಿತಿಯನ್ನಾಧರಿಸಿ ಒಂದೂವರೆ ವರ್ಷದಿಂದ ಹಲವರಿಗೆ ಎನ್ಐಎ ಅಧಿಕಾರಿಗಳು ಬಲೆ ಬೀಸಿದ್ದರು. ಡಿಸೆಂಬರ್ 16 ರಂದು ಪಶ್ಚಿಮ ಬಂಗಾಳದಲ್ಲಿ ಶಂಕಿತ ಉಗ್ರ ಮೊಸ್ರಾಫ್ ಹುಸೇನ್ ಎಂಬಾತನನ್ನು ಬಂಧಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮುನೀರ್, ಅಲ್ಲಿ ಜೈಲಿನಿಂದ ತಪ್ಪಿಸಿಕೊಂಡು 2011 ರಲ್ಲಿ ಪಶ್ಚಿಮ ಬಂಗಾಳಕ್ಕೆ ಓಡಿ ಬಂದಿದ್ದ. ನಂತರ 2013 ರ ಜುಲೈ 07 ರಂದು ಬಿಹಾರದ ಬೋಧ್ ಗಯಾದಲ್ಲಿ ಬಾಂಬ್ ಸ್ಪೋಟಿಸಿ, ಅಲ್ಲಿಂದ ಕರ್ನಾಟಕಕ್ಕೆ ಬಂದು ನೆಲೆಸಿದ್ದ.

ಲಷ್ಕರ್ ಉಗ್ರನಿಗೆ ಜೀವಾವಧಿ ಶಿಕ್ಷೆ ನೀಡಿದ ಕರ್ನಾಟಕ ಹೈಕೋರ್ಟ್‌ಲಷ್ಕರ್ ಉಗ್ರನಿಗೆ ಜೀವಾವಧಿ ಶಿಕ್ಷೆ ನೀಡಿದ ಕರ್ನಾಟಕ ಹೈಕೋರ್ಟ್‌

ಕಳೆದ ನಾಲ್ಕೈದು ವರ್ಷಗಳಿಂದ ಜೆಎಂಬಿ ಉಗ್ರ ಸಂಘಟನೆಯನ್ನು ಬಲಗೊಳಿಸಲು ಬೆಂಗಳೂರು ಮತ್ತು ಸುತ್ತಮುತ್ತಲಿನಲ್ಲಿರುವ ಸಹಚರರನ್ನು ಸೇರಿಸಿಕೊಂಡು ಡಕಾಯಿತಿ ನಡೆಸುತ್ತಾ, ಹಣವನನ್ನು ಹೊಂದಿಸುತ್ತಿದ್ದ.

ಬೆಂಗಳೂರು ನಗರ ಹೊರವಲಯದ ಸೋಲದೇವನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿದ್ದು, ಸ್ಪೋಟಕ ವಸ್ತುಗಳನ್ನು ಸಿದ್ದಪಡಿಸುತ್ತಿದ್ದ. ಅವಗಳನ್ನು ದೇಶದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡುತ್ತಿದ್ದುದು ಆತನ ವಿಚಾರಣೆಯಿಂದ ಮಾಹಿತಿ ಹೊರಗೆ ಬಂದಿತ್ತು.

ಇಂದಿಗೂ ಆತನ ಸಹಚರರು ಬೆಂಗಳೂರು ಹಾಗೂ ಹೊರವಲಯದ ಪ್ರದೇಶಗಳಲ್ಲಿ ಇರುವ ಶಂಕೆ ಎನ್ಐಎ ಅಧಿಕಾರಿಗಳಿಗಿದೆ. ಇದನ್ನು ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಕೆಲವು ಬಂಧಿತರ ಮೊಬೈಲ್ ನಂಬರ್ ಕರೆಗಳ ವಿವರ ಪಡೆದು ಒಂದೊಂದಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

English summary
The National Investigation Agency (INA) has expressed concern over supporters of Jamaat-ul-Mujahideen Bangladesh (JMB) suspected Terror organization hiding in Silicon City, Bangalore, the capital of Karnataka. A trap with local police to arrest Them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X