ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಭೀತಿ ಹುಟ್ಟು ಹಾಕಿದ್ದು ಅಂಜುಮನ್ ಸಂಸ್ಥೆ

By ವಿಕಾಸ್ ನಂಜಪ್ಪ
|
Google Oneindia Kannada News

ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಬಾಂಬ್ ಸ್ಫೋಟ ಸಂಭವಿಸಿದೆ. ದಾಳಿಯ ರುವಾರಿಗಳು ಯಾರು ಎಂಬುದು ತಿಳಿಯಲು ಕೆಲ ಕಾಲ ಹಿಡಿಯುತ್ತದೆ. ಅದರೆ, ವಿವಿಧ ಉಗ್ರ ಸಂಘಟನೆಗಳು ಮತ್ತೆ ಮತ್ತೆ ಗಾರ್ಡನ್ ಸಿಟಿಯ ನೆಮ್ಮದಿ ಹಾಳು ಮಾಡುತ್ತಿದ್ದರೂ ಜನತೆಯಾಗಲಿ, ಸರ್ಕಾರವಾಗಲಿ ಎಚ್ಚೆತ್ತುಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಬೆಂಗಳೂರಿನಲ್ಲಿ ಉಗ್ರರ ದಾಳಿ ಭೀತಿ ಆರಂಭವಾಗಿದ್ದು 1999ರಲ್ಲಿ ಎನ್ನಬಹುದು. ರಾಜ್ಯದ ವಿವಿಧ ಚರ್ಚ್ ಗಳ ಮೇಲೆ ನಡೆದ ದಾಳಿಯ ಹೊಣೆಯನ್ನು ದೀನ್ ದಾರ್ ಅಂಜುಮನ್ ಸಂಘಟನೆ ಹೊತ್ತುಕೊಂಡಿತು. ಬೆಂಗಳೂರಿನಲ್ಲಿ ನಡೆದ 5 ಪ್ರಮುಖ ಬಾಂಬ್ ಸ್ಫೋಟದ ಬಗ್ಗೆ ಈಗಾಗಲೇ ನೀವು ಓದಿರುತ್ತೀರಿ. ಈ ಬಗ್ಗೆ ವಿಸ್ತೃತ ವರದಿ ಇಲ್ಲಿದೆ.

Terror in Bengaluru, Deendar Anjuman started it

ದೀನ್ ದಾರ್ ಅಂಜುಮನ್ ಹಾಗೂ ಚರ್ಚ್ ಸ್ಫೋಟಗಳು
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚರ್ಚ್ ಗಳ ಮೇಲೆ ದೀನ್ ದಾರ್ ಅಂಜುಮನ್ ಸಂಘಟನೆ ದಾಳಿ ನಡೆಸಿತ್ತು. 2000ರ ಜೂನ್ 8 ರಂದು ಗುಲ್ಬರ್ಗಾ(ಈಗಿನ ಕಲಬುರಗಿ)ದ ಸಂತ ಆನ್ಸ್ ಚರ್ಚ್ ಸ್ಫೋಟದ ನಂತರ ಬೆಂಗಳೂರಿನ ಜೆಜೆ ನಗರದ ಸಂತ ಪೀಟರ್ ಪಾಲ್ ಚರ್ಚ್ ನಲ್ಲಿ ಸ್ಫೋಟ ನಡೆಸಲಾಗಿತ್ತು.

ಬೆಂಗಳೂರಿನ ಮಾಗಡಿ ರಸ್ತೆ ಬಳಿ ಮತ್ತೊಂದು ಬಾಂಬ್ ಸ್ಫೋಟಕ್ಕೆ ಯತ್ನಿಸುವ ಸಂದರ್ಭದಲ್ಲಿ ಅಂಜುಮನ್ ಸಂಘಟನೆಯ ಸದಸ್ಯರಾದ ಜಾಕೀರ್ ಹಾಗೂ ಸಿದ್ದಿಕಿ ಮೃತಪಟ್ಟಿದ್ದರು.

ಚರ್ಚ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸುಮಾರು 29 ಶಂಕಿತರ ಮೇಲೆ ಚಾರ್ಜ್ ಶೀಟ್ ಹಾಕಲಾಗಿತ್ತು. 22 ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸಲಾಗಿತ್ತು. ಹೈಕೋರ್ಟ್ ಡಿ17, 2014ರಲ್ಲಿ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಲಾಗಿತ್ತು.

Deendar Anjuman started it

ಲಷ್ಕರ್ ಇ ತೋಯ್ಬಾ ಹಾಗೂ ಐಐಎಸ್ ಸಿ ದಾಳಿ
ಡಿ.28, 2005ರಂದು ಲಷ್ಕರ್ ಇ ತೋಯ್ಬಾ ನಿಷೇಧಿತ ಉಗ್ರ ಸಂಘಟನೆಗೆ ಸೇರಿದ ಆತ್ಮಾಹುತಿ ದಳದ ಸದಸ್ಯರು ಐಐಎಸ್ಸಿ ಆವರಣದಲ್ಲಿ ಬೃಹತ್ ಸ್ಫೋಟಕ್ಕೆ ಯತ್ನಿಸಿ ವಿಫಲರಾಗಿದ್ದರು. ಕಡಿಮೆ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿ ಒಬ್ಬ ವಿಜ್ಞಾನಿ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು.

ಈ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತದ ನಗರ ಮೇಲೆ ಪ್ರಮುಖ ಉಗ್ರ ಸಂಘಟನೆಯ ಕಣ್ಣು ಬಿದ್ದಿತ್ತು. ಸಬಾವುದ್ದೀನ್ ಅಹ್ಮದ್ ಹಾಗೂ ಅಬು ಹಂಜಾ ಈ ದಾಳಿಯ ಮಾಸ್ಟರ್ ಮೈಂಡ್ ಎನಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೇಲೆ ಚಾರ್ಚ್ ಶೀಟ್ ಹಾಕಲಾಗಿತ್ತು. ಆರು ಜನರನ್ನು ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. [ಐಐಎಸ್ಸಿ ದಾಳಿ, ಚರ್ಚ್ ಸ್ಟ್ರೀಟ್ ಸ್ಫೋಟ ಕಾಕತಾಳೀಯ]

ಆದರೆ, 26/11 ಮುಂಬೈ ದಾಳಿ,ರಾಂಪುರದ ಸಿಆರ್ ಪಿಎಫ್ ಕ್ಯಾಂಪ್ ದಾಳಿ ಆರೋಪವನ್ನೂ ಹೊತ್ತಿರುವ ಸಬಾವುದ್ದೀನ್ ಅಹ್ಮದ್ ವಿಚಾರಣೆ ಇನ್ನೂ ನಡೆಯುತ್ತಿರುವುದರಿಂದ ಉತ್ತರಪ್ರದೇಶದಿಂದ ಅಹ್ಮದ್ ನನ್ನು ಬೆಂಗಳೂರಿಗೆ ವಿಚಾರಣೆಗೆ ಇನ್ನೂ ಕರೆತರಲಾಗುತ್ತಿಲ್ಲ.

KSCA stadium

2008ರ ಸರಣಿ ಸ್ಫೋಟ, BAD ಆಪರೇಷನ್

2008ರಲ್ಲಿ ಬೆಂಗಳೂರಿನಲ್ಲಿ ಸುಮಾರು 9 ಬಾರಿ ಸರಣಿ ಸ್ಫೋಟಗಳು ಸಂಭವಿಸಿತ್ತು. ಎಲ್ಲವೂ ಕಡಿಮೆ ತೀವ್ರತೆವುಳ್ಳ ಸ್ಫೋಟಗಳಾಗಿದ್ದು ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಪ್ರಾಥಮಿಕ ತನಿಖೆ ನಂತರ ಈ ಸ್ಫೋಟಗಳ ರುವಾರಿ ಹುಜಿ ಸಂಘಟನೆಗೆ ಸೇರಿದ ಕೇರಳ ಮೂಲದ ಟಿ ನಾಸೀರ್ ಎಂದು ತಿಳಿದು ಬಂದಿತು. ಅದರೆ, ನಂತರ ಈತ ಯಾವುದೇ ನಿಷೇಧಿತ ಉಗ್ರ ಸಂಘಟನೆಗೆ ಸೇರಿಲ್ಲ ಎಂದು ಸಾಬೀತಾಯಿತು.

ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ನಾಸರ್ ಮದನಿ ಬಂಧನವೂ ಆಯಿತು. ಮದನಿ ಸೇರಿದಂತೆ 31 ಜನರ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದ್ದು, ತನಿಖೆ ಮುಂದುವರೆದಿದೆ.

Yasin Bhatkal

ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಸ್ಫೋಟಾ ಹಾಗೂ ಐಎಂ ಉಗ್ರರು
ಐಪಿಎಲ್ 2010 ಪಂದ್ಯಾವಳಿ ನಿಗದಿಯಾಗಿದ್ದ ವೇಳೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಾ ಬಾಂಬ್ ಇಟ್ಟು ಇಂಡಿಯನ್ ಮುಜಾಹಿದ್ದೀನ್ ಉಗ್ರರು ಸ್ಫೋಟಿಸಿದ್ದರು. ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಉಗ್ರ ಸಂಘಟನೆ ಐಎಂನ ಮೊದಲ ಪ್ರಮುಖ ದಾಳಿ ಇದಾಗಿತ್ತು.

ಕ್ರೀಡಾಂಗಣ ಸುತ್ತಾ ಬಾಂಬ್ ಇಟ್ಟ ಉಗ್ರ ಯಾಸೀನ್ ಭಟ್ಕಳ ನೇರ ಚಿಕ್ಕಮಗಳೂರಿಗೆ ಹಾರಿದ್ದ. ಕೊನೆಗೆ ಭಾರತ ನೇಪಾಳ ಗಡಿಯಲ್ಲಿ ಮುಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ ಸೆರೆ ಸಿಕ್ಕಿದ್ದ. ರಾಜ್ಯದಲ್ಲಿ ಐಎಂ ಇನ್ನೂ ಸಕ್ರಿಯವಾಗಿದೆ ಎಂದು ಘೋಷಿಸುವುದು ನಮ್ಮ ಉದ್ದೇಶವಾಗಿತ್ತು. ಐಪಿಎಲ್ ಪಂದ್ಯಾವಳಿಯನ್ನು ಟಾರ್ಗೆಟ್ ಮಾಡಲಾಗಿತ್ತು ಎಂದು ಯಾಸೀನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. [ಭಟ್ಕಳನ ಬಾಯ್ಬಿಟ್ಟ ಭಯಾನಕ ಸತ್ಯಗಳು]

ಮೊದಲಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟಕ್ಕೂ ದೀನ್ ದಾರ್ ಸಂಘಟನೆಗೂ ಲಿಂಕ್ ಕಲ್ಪಿಸಲಾಗಿತ್ತು. ಇದಕ್ಕೆ ಪೂರಕವಾಗಿ ಕ್ರೀಡಾಂಗಣದ ಹಲವೆಡೆ 'ಡಿ. ಎ' ಎಂದಿದ್ದ ಕರಪತ್ರ ಅಲ್ಲಲ್ಲಿ ಸಿಕ್ಕಿದ್ದವು.ಅದರೆ, ನಂತರ ಇದು ಐಎಂ ಉಗ್ರರ ಕೃತ್ಯ ಎಂದು ಸಾಬೀತಾಯಿತು.

Malleswaram Blast

ಬಿಜೆಪಿ ಕಚೇರಿ ಬಳಿ ಸ್ಫೋಟ ಹಾಗೂ ಅಲ್ ಉಮಾ:

ಬೆಂಗಳೂರಿನ ಮಲ್ಲೇಶ್ವರದ ಬಳಿ ಇರುವ ಬಿಜೆಪಿ ಕೇಂದ್ರ ಕಚೇರಿ ಸಮೀಪದಲ್ಲೇ ಬಾಂಬ್ ಸ್ಫೋಟ ಸಂಭವಿಸಿತ್ತು. ಏಪ್ರಿಲ್ 17, 2013ರಂದು ನಡೆದ ಈ ದುರ್ಘಟನೆಯ ಹೊಣೆಯನ್ನು ಅಲ್ ಉಮಾ ಸಂಘಟನೆ ಹೊತ್ತುಕೊಂಡಿತ್ತು. ತಮಿಳುನಾಡಿನಿಂದ ಉಗಮಗೊಂಡ ಈ ಸಂಘಟನೆ ಹಿಂದೂಗಳು ಹೆಚ್ಚಾಗಿರುವ ಪ್ರದೇಶವನ್ನು ಆಯ್ಕೆ ಮಾಡಿ ಬಾಂಬ್ ಸ್ಫೋಟ ಮಾಡುತ್ತಾ ಬಂದಿದೆ.[ಬಿಜೆಪಿ ಕಚೇರಿ ಮುಂಭಾಗದಲ್ಲಿ ಸ್ಫೋಟ ]

ಸುಮಾರು 16ಜನ ಗಾಯಗೊಂಡ ಈ ಘಟನೆಗೆ ಸಂಬಂಧಿಸಿದಂತೆ 20 ಜನರ ಮೇಲೆ ಚಾರ್ಜ್ ಶೀಟ್ ಹಾಕಲಾಗಿದ್ದು ಎಲ್ಲರೂ ತಮಿಳುನಾಡು ಮೂಲದವರೇ ಆಗಿದ್ದಾರೆ. ಪ್ರಮುಖ ಆರೋಪಿ 48 ವರ್ಷ ವಯಸ್ಸಿನ ಅಬು ಬಾಕರ್ ಸಿದ್ದಿಕಿ ಎಂದು ಗುರುತಿಸಲಾಗಿದೆ.

ಈ ಎಲ್ಲಾ ಉಗ್ರರ ದಾಳಿಯ ನಂತರ ಈಗ ಚರ್ಚ್ ಸ್ಟ್ರೀಟ್ ದಾಳಿಯ ಬಗ್ಗೆ ತನಿಖೆ ಮುಂದುವರೆದಿದ್ದು, ಕರ್ನಾಟಕ ರಾಜುಅ ಪೊಲೀಸರೇ ತನಿಖೆ ನಡೆಸುವ ಸಾಧ್ಯತೆಗಳಿವೆ. ಎನ್ ಐಎ ಸಹಕಾರ ಪಡೆದುಕೊಳ್ಳುವ ನಿರೀಕ್ಷೆಯೂ ಇದೆ.

English summary
Bengaluru has been attacked yet again and while it may take a while to ascertain who exactly is behind it, here is a list of terrorist groups that have attacked the IT capital of India. The first major tryst that Karnataka and Bengaluru had with terror was the Church blasts of 1999. This attack was carried out by a group called the Deendar Anjuman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X