ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವಿರುದ್ಧ ಹೋರಾಡಲು ಕರ್ನಾಟಕ ಸರ್ಕಾರದಿಂದ ಭರ್ಜರಿ ಸಿದ್ಧತೆ

|
Google Oneindia Kannada News

ಬೆಂಗಳೂರು, ಜೂನ್ 27: ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಸಂಜೆಯೊಳಗಾಗಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಕನಿಷ್ಟ ಹತ್ತು ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

Recommended Video

ನ್ಯಾಯ ಕೊಡಿಸಬೇಕಾದ ಅವರೇ ಅನ್ಯಾಯ ಮಾಡುತ್ತಿದ್ದಾರೆ | Davangere | Lady pleads for Justice | Oneindia Kannada

ಬೆಂಗಳೂರು ನಗರದಾದ್ಯಂತ ಚಿಕಿತ್ಸೆಗೆ ಅಗತ್ಯವಿರುವ ಸಕಾ೯ರಿ ಮತ್ತು ಖಾಸಗಿ ಪ್ರದೇಶಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು ಸೋಮವಾರ ಸಂಜೆ ವೇಳೆಗೆ ಖಚಿತ ಮಾಹಿತಿ ಲಭ್ಯವಾಗಲಿದೆ. ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಿಖರ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಶನಿವಾರ ವಿಡಿಯೋ ಸಂವಾದ ನಡೆಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ತಿಳಿಸಿದರು.

ಈ ವಿಡಿಯೋ ಸಂವಾದದಲ್ಲಿ ಅಪರ ಮುಖ್ಯ ಕಾಯ೯ದಶಿ೯ ಜಾವೇದ್‌ ಅಖ್ತರ್‌, ಬಿಡಿಎ ಆಯುಕ್ತ ಡಾ. ಎಂ. ಮಹದೇವ್‌, ವೈದ್ಯಕೀಯ ಶಿಕ್ಷಣ ಇಲಾಖೆ ಕಾಯ೯ದಶಿ೯ ಟಿ.ಕೆ. ಅನಿಲ್‌ ಕುಮಾರ್‌, ರೇರಾ ಕಾಯ೯ದಶಿ೯ ಲತಾಕುಮಾರಿ, ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ್‌, ವೈದ್ಯಕೀಯ ಶಿಕ್ಷಣ ಇಲಾಖೆ ನಿದೇ೯ಶಕ ಡಾ. ಗಿರೀಶ್‌ ಮತ್ತು ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಗುಡ್ ನ್ಯೂಸ್ :ದೇಶದಲ್ಲಿ 58% ಕ್ಕಿಂತ ಹೆಚ್ಚಾಗಿದೆ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣಗುಡ್ ನ್ಯೂಸ್ :ದೇಶದಲ್ಲಿ 58% ಕ್ಕಿಂತ ಹೆಚ್ಚಾಗಿದೆ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ

'ಕೊರೋನಾ ಇತರೆ ಸೋಂಕುಗಳಂತೆ ಭಯಪಡುವ ವ್ಯಾದಿ ಅಲ್ಲ. ಸೂಕ್ತ ಚಿಕಿತ್ಸೆ ಮೂಲಕ ರೋಗದ ವಿರುದ್ಧ ಗೆಲುವು ಸಾಧಿಸಬಹುದು. ಹಿರಿಯರಿಗೆ ಸೋಂಕು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆದರೆ ಸುಧಾರಿಸಿಕೊಳ್ಳುತ್ತಾರೆ. ಹೀಗಾಗಿ ಮುನ್ನೇಚ್ಚರಿಕೆ ವಹಿಸುವ ಅಗತ್ಯವಿದೆ' ಡಾ ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಕೊರೊನಾ ಹೋರಾಟಕ್ಕೆ ಯಾವ ರೀತಿ ಸಿದ್ಧತೆ ನಡೆಯುತ್ತಿದೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ. ಮುಂದೆ ಓದಿ....

ಕೊರೊನಾ ಕೇರ್‌ ಸೆಂಟರ್‌ಗಳ ಸಿದ್ಧತೆ

ಕೊರೊನಾ ಕೇರ್‌ ಸೆಂಟರ್‌ಗಳ ಸಿದ್ಧತೆ

ಸಕಾ೯ರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲದೆ, ಬಿಡಿಎ, ವಸತಿ ಇಲಾಖೆ ಮತ್ತು ಖಾಸಗಿ ನಿಮಾ೯ಣ ಸಂಸ್ಥೆಗಳು ನಿಮಿ೯ಸಿರುವ ವಸತಿ ಸಮುಚ್ಚಯಗಳು, ಸಕಾ೯ರಿ ಮತ್ತು ಖಾಸಗಿ ಕ್ರೀಡಾ ಸಂಕಿಣ೯ಗಳು, ಕ್ರೀಡಾಂಗಣಗಳು, ಹಾಸ್ಟೆಲ್‌ಗಳು ಮತ್ತು ಬೃಹತ್‌ ವಾಣಿಜ್ಯ ಸಮುಚ್ಛಯಗಳನ್ನು ಕೋವಿಡ್‌ ಚಿಕಿತ್ಸೆ ಉದ್ದೇಶಕ್ಕೆ ಬಳಸಿಕೊಳ್ಳಲು ನಿಧ೯ರಿಸಲಾಗಿದೆ. ಇವುಗಳನ್ನು ಸೌಲಭ್ಯಗಳ ಆಧಾರದ ಮೇಲೆ ಕೋವಿಡ್‌ ಚಿಕಿತ್ಸಾ ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಸೆಂಟರ್‌ಗಳಾಗಿ ಪರಿವತಿ೯ಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ವಿಂಗಡಿಸಿ ಚಿಕಿತ್ಸೆ ನೀಡಲಾಗುವುದು

ವಿಂಗಡಿಸಿ ಚಿಕಿತ್ಸೆ ನೀಡಲಾಗುವುದು

ವೆಂಟಿಲೇಟರ್‌, ಹೈ ಪ್ಲೊ ಆಕ್ಸಿಜನ್ ಮತ್ತು ಇತರೆ ಅಗತ್ಯ ಸೌಲಭ್ಯಗಳಿರುವ ಕಡೆ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವತಿ೯ಸಲಾಗುವುದು. ನಗರದಲ್ಲಿ ಕಳೆದ ಒಂದು ವಾರದಿಂದ ಈಚೆಗೆ ಕೊರೊನಾ ಸೋಂಕಿತರ ಪೈಕಿ ಶೇಕಡಾ ಮುವತ್ತರಿಂದ ಐವತ್ತರವರೆಗೆ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸೋಂಕಿತರ ಲಕ್ಷಣ ಆಧರಿಸಿ ಲಘು ಮಧ್ಯಮ ಮತ್ತು ತೀವ್ರ ಸ್ವರೂಪ ಎಂದು ವಿಂಗಡಿಸಿ ಚಿಕಿತ್ಸೆ ನೀಡಲು ನಿಧ೯ರಿಸಲಾಗಿದೆ. ಇದಕ್ಕಾಗಿ ಚಿಕಿತ್ಸಾ ವಿಧಾನದ ವಿಧಿ-ವಿಧಾನಗಳನ್ನು ಅಂತಿಮಗೊಳಿಸಲು ತಜ್ಞರಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ 50 ರಷ್ಟು ಹಾಸಿಗೆ

ಖಾಸಗಿ ಆಸ್ಪತ್ರೆಗಳಲ್ಲಿ 50 ರಷ್ಟು ಹಾಸಿಗೆ

ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ ಐವತ್ತರಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಬಿಟ್ಟುಕೊಡಲು ಸೂಚನೆ ನೀಡಲಾಗಿದೆ. ಮಾಲೀಕರ ಜತೆ ಸೋಮವಾರ ಮಾತುಕತೆ ನಡೆಸಲಾಗುವುದು. ಅವರಿಗೆ ನಿಗದಿತ ದರ ನೀಡಲಾಗುವುದು. ಆ ಕುರಿತು ಅವರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗುವುದು. ಹಾಗೆಯೇ ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳನ್ನು ಬಹುತೇಕ ಪೂಣ೯ ಪ್ರಮಾಣದಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

"ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಚಿಕಿತ್ಸೆ ದರ ಶಾಕ್ ಆಗುವಂತಿದೆ"

ಬಿಡಿಎ ಬಳಿ 1700 ಫ್ಲಾಟ್‌ಗಳಿವೆ

ಬಿಡಿಎ ಬಳಿ 1700 ಫ್ಲಾಟ್‌ಗಳಿವೆ

ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಹೆಚ್ಚಿನ ಸೌಲಭ್ಯ ಅಗತ್ಯವಿಲ್ಲ. ಹೀಗಾಗಿ ಬಿಡಿಎ, ವಸತಿ ಇಲಾಖೆ ನಿಮಿ೯ಸಿ ಸಿದ್ಧಗೊಂಡಿರುವ ಬಹುಮಹಡಿ ವಸತಿ ಸಮುಚ್ಛಯಗಳನ್ನು ಬಳಸಲಾಗುವುದು. ಬಿಡಿಎ ಬಳಿ 1700 ಫ್ಲಾಟ್‌ಗಳಿವೆ. ಅವುಗಳಲ್ಲಿ ಬಳಕೆಗೆ ಲಭ್ಯವಿರುವ ನಿಖರ ಸಂಖ್ಯೆಯನ್ನು ಸೋಮವಾರ ತಿಳಿಸುವುದಾಗಿ ಆಯುಕ್ತ ಮಹದೇವ್ ತಿಳಿಸಿದ್ದಾರೆ. ಅದರ ಜತೆ ವಸತಿ ಇಲಾಖೆ, ರೇರಾದಲ್ಲಿ ನೋಂದಣಿಯಾಗಿರುವ ಖಾಸಗಿ ವಲಯದ ಮೂರು ಸಾವಿರ ಪ್ರಾಜೆಕ್ಟ್‌ಗಳಲ್ಲಿ ಲಭ್ಯವಾಗುವ ವಸತಿ ಸಮುಚ್ಛಯದ ವಿವರಗಳು ಲಭ್ಯವಾಗಲಿವೆ. ಎಲ್ಲವನ್ನೂ ಅಧಿಕಾರಿಗಳು ಖುದ್ದು ಪರಿಶೀಲಿಸಿ ಅಂತಿಮ ನಿಧಾ೯ರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕ್ರೀಡಾ ಇಲಾಖೆ ಹಾಸ್ಟೆಲ್ ಬಗ್ಗೆ ವಿವರ

ಕ್ರೀಡಾ ಇಲಾಖೆ ಹಾಸ್ಟೆಲ್ ಬಗ್ಗೆ ವಿವರ

ಇದರ ಜತೆಗೆ ಕ್ರೀಡಾ ಇಲಾಖೆ ಮತ್ತು ಖಾಸಗಿ ಅವರ ಒಡೆತನದಲ್ಲಿರುವ ಕ್ರೀಡಾಂಗಣ, ಕ್ರೀಡಾ ಸಮುಚ್ಛಯಗಳು, ಹಾಸ್ಟೆಲ್‌ಗಳು ಮತ್ತು ಬೃಹತ್‌ ವಾಣಿಜ್ಯ ಸಮುಚ್ಛಯಗಳ ಮಾಹಿತಿ ಕೂಡ ಕಲೆ ಹಾಕಲಾಗುತ್ತಿದೆ. ಒಟ್ಟಾರೆ ಕನಿಷ್ಟ ಹತ್ತು ಸಾವಿರ ಹಾಸಿಗೆಗಳ ಸೌಲಭ್ಯವನ್ನು ಸಿದ್ಧಗೊಳಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾಯ೯ ನಿವ೯ಹಿಸುತ್ತಿದ್ದಾರೆ. ತಾವು ಕೂಡ ಅದನ್ನು ಉಸ್ತುವಾರಿ ನೋಡುತ್ತಿರುವುದಾಗಿ ಹೇಳಿದರು.

ಊಟ – ಶುಚಿತ್ವದ ಬಗ್ಗೆ ಗಮನ

ಊಟ – ಶುಚಿತ್ವದ ಬಗ್ಗೆ ಗಮನ

ಹೀಗೆ ಗುರುತಿಸಿದ ಪ್ರದೇಶಗಳಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳನ್ನು ಖಾಸಗಿ ನೆರವಿನಲ್ಲಿ ಅಭಿವೃದ್ಧಿಪಡಿಸಲಾಗುವುದು. ಉಳಿದಂತೆ ಸ್ವಚ್ಛತೆಗೆ ನಗರದಲ್ಲಿರುವ ನೂರಾರು ಖಾಸಗಿ ಕಂಪನಿಗಳ ನೆರವನ್ನೂ ಪಡೆಯಲಾಗುವುದು. ಸುರಕ್ಷತೆಗೆ ರಾಜ್ಯ ಮೀಸಲು ಪೋಲೀಸ್‌, ನಗರ ಸಶಸ್ತ್ರ ಮೀಸಲು ಪಡೆಗಳಲ್ಲದೆ, ಗೃಹ ರಕ್ಷಕ ದಳ, ಎನ್‌ಸಿಸಿ ಕೆಡೆಟ್‌ಗಳಲ್ಲದೆ, ನಗರದಲ್ಲಿ ಕೇಂದ್ರ ಹೊಂದಿರುವ ಅರೆ ಮಿಲಿಟರಿ ಪಡೆಗಳ ನೆರವು ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಭಯ ಬೇಡ, ಮುನ್ನೇಚ್ಚರಿಕೆ ಅಗತ್ಯ…

ಭಯ ಬೇಡ, ಮುನ್ನೇಚ್ಚರಿಕೆ ಅಗತ್ಯ…

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11005 ಇದ್ದರೆ ಗುಣಮುಖರಾಗುತ್ತಿರುವ ಸಂಖ್ಯೆ 6916ರಷ್ಟಿದೆ. ಸಕ್ರೀಯ ಪ್ರಕರಣಗಳು 3905 ಇವೆ. ಇದುವರೆಗೆ 181 ಮಂದಿ ಕೊವಿಡ್‌ ಸಂಬಂಧ ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಮರಣ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ರಾಜ್ಯದ ಮರಣ ಪ್ರಮಾಣ ಶೇಕಡಾ ಐದರಷ್ಟು ಕಡಿಮೆಯಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಸೋಂಕಿತರಾಗುವವರಲ್ಲಿ ಅಧ೯ದಷ್ಟು ಮಂದಿಗೆ ರೋಗ ಲಕ್ಷಣ ಕಾಣಿಸುತ್ತಿದೆ. ಹವಾಮಾನ ಬದಲಾವಣೆ ಇದಕ್ಕೆ ಕಾರಣವಿರಬಹುದು. ರೋಗದಿಂದ ಸಾವಿಗೀಡಾಗುವ ಪ್ರಮಾಣ ಇತರೆ ಸೋಂಕುಗಳಿಗೆ ಹೋಲಿಸಿದರೆ ಕಡಿಮೆ. ಹೀಗಾಗಿ ಜನತೆ ಭಯ ಪಡುವ ಅಗತ್ಯವಿಲ್ಲ. ಆದರೆ ಮುನ್ನೇಚ್ಚರಿಕೆ ಕ್ರಮ ತೆಗೆದುಕೊಳ್ಳುವ ಅವಶ್ಯವಿದೆ. ಸಕಾ೯ರ ಪ್ರಮಾಣಿಕವಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಂತದಲ್ಲಿ ಜನರ ಸಹಕಾರ ಅಗತ್ಯವಿದೆ ಎಂದು ಸಚಿವ ಸುಧಾಕರ್‌ ಮನವಿ ಮಾಡಿದರು.

English summary
Medical Education Minister Dr Sudhakar said that steps will be taken to provide ten thousand bed facility in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X