ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮತ್ತೆ ತಗ್ಗುತ್ತಿದೆ ತಾಪಮಾನ, ತೀವ್ರ ಚಳಿ ಸಾಧ್ಯತೆ

|
Google Oneindia Kannada News

ಬೆಂಗಳೂರು, ಜನವರಿ 10: ಬೆಂಗಳೂರಲ್ಲಿ ಮತ್ತೆ ತಾಪಮಾನದಲ್ಲಿ ಇಳಿಕೆಯಾಗುತ್ತಿದೆ. 11 ಡಿಗ್ರಿ ಸೆಲ್ಸಿಯಸ್‌ಗೆ ಬಂದು ತಲುಪಿದ್ದ ತಾಪಮಾನ ಕ್ರಮೇಣವಾಗಿ 14 ಡಿಗ್ರಿಗೆ ಏರಿಕೆಯಾಗಿತ್ತು. ಇದೀಗ ಮತ್ತೆ 13 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು ಮತ್ತೆ ತೀವ್ರ ಚಳಿ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ

ಉತ್ತರ ಭಾರತದಲ್ಲಿ ಬೀಸುತ್ತಿರುವ ಶೀತ ಮಾರುತ ಮತ್ತೆ ಪ್ರಬಲಗೊಂಡಿದ್ದು ಪರಿಣಾಮವಾಗಿ ನಗರದಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಉತ್ತರ ಭಾರತ ರಾಜ್ಯಗಳಲ್ಲಿ ಶೀತಮಾರುತ ಜೋರಾಗಿ ಬೀಸುತ್ತಿದೆ ಇದರ ಪರಿಣಾಮ ಕರ್ನಾಟಕದ ಮೇಲೂ ಆಗಿದೆ.

ರಾಜ್ಯದಲ್ಲಿ ಕೊರೆಯುವ ಚಳಿ, ಆಗುಂಬೆಯಲ್ಲಿ 7.9 ಕನಿಷ್ಠ ತಾಪಮಾನ ರಾಜ್ಯದಲ್ಲಿ ಕೊರೆಯುವ ಚಳಿ, ಆಗುಂಬೆಯಲ್ಲಿ 7.9 ಕನಿಷ್ಠ ತಾಪಮಾನ

Temperature decreasing once again in Bengaluru

ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಗರಿಷ್ಠ 29.2 ಡಿಗ್ರಿ ಸೆಲ್ಸಿಯಸ್ , ಕನಿಷ್ಠ 13 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರದಲ್ಲಿ ಗರಿಷ್ಠ 30.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 14.5 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 29.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 13.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ 6.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

English summary
Cold waves are increasing i North India, so state of Karataka witnessing low temperature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X