• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇದಕ್ಕಿಂತ ಶ್ರದ್ಧಾಂಜಲಿ ಬೇರೇನಿದೆ? ಹೆಮ್ಮೆ ಮೂಡಿಸಿದ ತೇಜಸ್ವಿನಿ ನಡೆ

|
   ಇದಕ್ಕಿಂತ ಶ್ರದ್ಧಾಂಜಲಿ ಬೇರೇನಿದೆ? ಹೆಮ್ಮೆ ಮೂಡಿಸಿದ ತೇಜಸ್ವಿನಿ ನಡೆ | Oneindia Kannada

   ಬೆಂಗಳೂರು, ನವೆಂಬರ್ 19: ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಇನ್ನಿಲ್ಲವಾಗಿ ವಾರವೂ ಕಳೆದಿಲ್ಲ. ಆರದೆ ಆಗಲೇ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಪ್ರತಿ ಭಾನುವಾರ ನಡೆಸುವ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಮೂಲಕ ಪತಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

   ನ.18 ರಂದು ಭಾನುವಾರ 151 ನೇ ಹಸಿರು ಭಾನುವಾರ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗಿಡವನ್ನು ನೆಟ್ಟು, ಅದಕ್ಕೆ ನೀರೆರೆದು ಪತಿಯ ಸಾವಿನ ದುಃಖದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದರು ತೇಜಸ್ವಿನಿ ಅನಂತ್ ಕುಮಾರ್.

   ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿ ಅಭ್ಯರ್ಥಿ?!

   ಕಳೆದ ಸೋಮವಾರ, ನ.12 ರಂದು ವಿಧಿವಶರಾದ ಅನಂತ್ ಕುಮಾರ್ ಅವರ ಅಗಲಿಕೆಯ ನೋವು ಮನಸ್ಸಿನಲ್ಲಿದ್ದರೂ, ಅದ್ಯಾವುದನ್ನೂ ತೋರಿಸಿಕೊಳ್ಳದೆ, ಕರ್ತವ್ಯ ಪ್ರಜ್ಞೆ ಮೆರೆಯುವುದೇ ಪತಿಗೆ ನೀಡುವ ಬಹುದೊಡ್ಡ ಶೃದ್ಧಾಂಜಲಿ ಎಂದು ತೇಜಸ್ವಿನಿ ಅನಂತ್ ಕುಮಾರ್ ಭಾವಿಸಿದ್ದಂತಿತ್ತು.

   ಬೆಂಗಳೂರಿನ ಬಗ್ಗೆ ಕುಟುಂಬದ ಅನನ್ಯ ಕಾಳಜಿ

   ಪತಿ ಅನಂತ್ ಕುಮಾರ್ ಅವರು ನಿಧನರಾಗಿ ಆರು ದಿನಗಳಾಗಿವೆ ಅಷ್ಟೇ. ಆದರೆ ಅವರ ಪತ್ನಿ ತೇಜಸ್ವಿನಿ ಅವರು 151 ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬೆಂಗಳೂರಿನ ಅಭಿವೃದ್ಧಿಗೆ ಈ ಕುಟುಂಬ ಇರಿಸಿಕೊಂಡ ಕಾಳಜಿಗೆ ಇದು ಸಾಕ್ಷಿ ಎಂದಿದ್ದಾರೆ ಕಿರಣ್ ಕುಮಾರ್ ಎಸ್.

   ಅನಂತ್ ಕುಮಾರ್ ಇಲ್ಲದ ಬೆಂಗಳೂರು ದಕ್ಷಿಣಕ್ಕೆ ಉತ್ತರಾಧಿಕಾರಿ ಯಾರು?

   ಹ್ಯಾಟ್ಸ್ ಆಫ್

   ತೇಜಸ್ವಿನಿ ಅವರ ಕರ್ತವ್ಯ ಪ್ರಜ್ಞೆಗೆ ಹ್ಯಾಟ್ಸ್ ಆಫ್. ಪತಿ ನಿಧನರಾಗಿ ಒಂದು ವಾರವಾಗಿಲ್ಲ, ಆಗಲೇ ಹಸಿರು ಭಾನುವಾರಕ್ಕೆ ಕೈಜೋಡಿಸಿದ್ದಾರೆ ಅವರು ಎಂದಿದ್ದಾರೆ ಲಾವೀನ್ ಎಸ್ ಕೆ.

   ನಿಧನ ನಂತರವೂ ಟ್ವಿಟ್ಟರ್‌ನಲ್ಲಿ ಮುಗಿಬಿದ್ದ 'ಅನಂತ'ಅಭಿಮಾನಿಗ

   ಇದೇ ನಿಜವಾದ ಶ್ರದ್ಧಾಂಜಲಿ

   ಅನಂತವನದಲ್ಲಿ ಸಸಿ ನೆಡುವ ಮೂಲಕ ಪತಿಗೆ ಶ್ರದ್ಧಾಂಜಲಿ ಅರ್ಪಿಸಿದರು ತೇಜಸ್ವಿನಿ ಅನಂತ್ ಕುಮಾರ್. ಇದೇ ನಿಜವಾದ ಶ್ರದ್ಧಾಂಜಲಿ ಎಂದಿದ್ದಾರೆ ಶ್ರೀಕಾಂತ್ ಪ್ರಸಾದ್

   ನ.12 ರಂದು ಇಹಲೋಕ ತ್ಯಜಿಸಿದ ಅನಂತ್ ಕುಮಾರ್

   ನ.12 ರಂದು ಇಹಲೋಕ ತ್ಯಜಿಸಿದ ಅನಂತ್ ಕುಮಾರ್

   ಬಿಜೆಪಿ ಮುಖಂಡ ಕೇಂದ್ರ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು ಶ್ವಾಸ ಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನ.12 ರಂದು ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಅವರು ವಿಧಿವಶರಾದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಕೇಂದ್ರದ ಹಲವು ಸಚಿವರು ಅವರ ಅಂತಿಮ ದರ್ಶನ ಪಡೆದರು. ಹಸನ್ಮುಖಿ, ಮಾನವೀಯ ಅಂತಃಕರಣದ ಅನಂತ್ ಕುಮಾರ್ ಅವರ ಅಗಲಿಕೆಗೆ ಇಡೀ ರಾಷ್ಟ್ರದ ನಾಯಕರೂ ಪಕ್ಷ ಭೇದ ಮರೆತು ಮರುಗಿದ್ದರು.

   English summary
   Just 6 days ago Ananth Kumar passed away. But his wife Tejaswini Ananth Kumar continuing his dream project of Green Sunday uninterrupted. This family's commitment to environment and food-for-the-needy is outstanding
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X