ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಸರ್ಕಾರದ ಕ್ರಮಕ್ಕೆ ತೇಜಸ್ವಿನಿ ಅನಂತ್‌ಕುಮಾರ್ ಆಕ್ಷೇಪ

|
Google Oneindia Kannada News

ಬೆಂಗಳೂರು, ಆಗಸ್ಟ್ 3: ಮಧ್ಯಾಹ್ನ ಶಾಲೆಗಳಲ್ಲಿ ನೀಡುವ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಕ್ರಮಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಪೌಷ್ಟಿಕತೆಯನ್ನು ಪರಿಹರಿಸುವಲ್ಲಿ ಮೊಟ್ಟೆಗಳು ಪ್ರಮುಖವಾಗಿವೆ ಎಂದು ಇತ್ತೀಚೆಗೆ ನಿಯೋಜಿಸಿದ ವರದಿಯ ಅಂಶಗಳ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ ತೇಜಸ್ವಿನಿ, ಅಪೌಷ್ಟಿಕತೆಯನ್ನು ಪರಿಹರಿಸಲು ಮೊಟ್ಟೆಗಳನ್ನು ಸೇರಿಸುವುದು ಸೋಮಾರಿ ನೀತಿಯ ಕ್ರಮವಾಗಿದೆ. ಒಂದು ವೇಳೆ ಮೊಟ್ಟೆ ನೀಡಲೇಬೇಕೆಂದಿದ್ದರೆ ವಿದ್ಯಾರ್ಥಿಗಳಿಗೆ ಮನೆಗೆ ಕೊಂಡೊಯ್ಯುವ ಪಡಿತರವಾಗಿ ನೀಡಬೇಕು ಎಂದು ಶಿಫಾರಸು ಮಾಡಿದರು.

"ನಮ್ಮ ಅಸಮಾನ ಸಮಾಜದಲ್ಲಿ, ಮಗುವನ್ನು ಸಮಾನವಾಗಿ ಪರಿಗಣಿಸುವ ಕೆಲವು ಸ್ಥಳಗಳಿವೆ. ಅಂತಹ ಸ್ಥಳಗಳಲ್ಲಿ ಸರ್ಕಾರಿ ಶಾಲೆಯೂ ಒಂದು. ಅದಕ್ಕಾಗಿಯೇ ಶಾಲೆಗಳು ಸಮವಸ್ತ್ರವನ್ನು ಹೊಂದಿದ್ದು, ಮಗುವಿನ ಸಾಮಾಜಿಕ ಗುರುತುಗಳು ಅವರ ಶಿಕ್ಷಣದ ಮೇಲೆ ಪರಿಣಾಮ ಬೀರುವುದಿಲ್ಲ. ಅದೇ ರೀತಿ ವಿದ್ಯಾರ್ಥಿಗಳಿಗೆ ನೀಡುವ ಆಹಾರವು ರಾಜಕೀಯಕ್ಕೆ ಕಾರಣವಾಗಬಾರದು ಮತ್ತು ಎಲ್ಲಾ ವಿದ್ಯಾರ್ಥಿಗಳು ಅದನ್ನು ಸೇವಿಸುವಂತಿರಬೇಕು" ಎಂದು ಅವರು ಹೇಳಿದರು.

ಶಾಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ಸೇರಿಸಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿದ ನಂತರ, ಅವರ ಹೇಳಿಕೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 ಅಪೌಷ್ಠಿಕತೆ ನಿವಾರಣೆ ಮಾಡಲು ಹಲವು ಕ್ರಮಗಳಿವೆ

ಅಪೌಷ್ಠಿಕತೆ ನಿವಾರಣೆ ಮಾಡಲು ಹಲವು ಕ್ರಮಗಳಿವೆ

"ನಮ್ಮ ಕರ್ನಾಟಕ ಸರ್ಕಾರವು ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ನೀಡಲು ಏಕೆ ನಿರ್ಧರಿಸಿದೆ? ಇವು ಪೌಷ್ಟಿಕಾಂಶದ ಏಕೈಕ ಮೂಲವಲ್ಲ. ಸಸ್ಯಾಹಾರಿಗಳಾಗಿರುವ ಅನೇಕ ವಿದ್ಯಾರ್ಥಿಗಳಿಗೆ ಇದು ಹೊರಗಿಡುತ್ತದೆ. ಪ್ರತಿ ವಿದ್ಯಾರ್ಥಿಗೆ ಸಮಾನ ಅವಕಾಶ ಇರುವಂತೆ ನಮ್ಮ ನೀತಿಗಳನ್ನು ವಿನ್ಯಾಸಗೊಳಿಸಲಾಗುವುದು," ಎಂದು ಅವರು ಸೋಮವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಮೊಟ್ಟೆಯಿಂದ ಮಾತ್ರ ಅಪೌಷ್ಟಿಕತೆ ನಿವಾರಣೆ ಸಾಧ್ಯ ಎಂದು ಭಾವಿಸುವುದು ತಪ್ಪು ಎಂದ ಅವರು, ರಾಜ್ಯ ಸರ್ಕಾರ ಉದ್ದಿನಬೇಳೆ, ಮೊಳಕೆಕಾಳು ಮತ್ತಿತರ ಸ್ವದೇಶಿ ಉತ್ಪನ್ನಗಳನ್ನು ಸೇರಿಸುವಂತೆ ಸಲಹೆ ನೀಡಿದರು.

 ಮೊಟ್ಟೆಯಿಂದ ಆರೋಗ್ಯ ಸಮಸ್ಯೆ ಎಂದ ಎನ್‌ಇಪಿ

ಮೊಟ್ಟೆಯಿಂದ ಆರೋಗ್ಯ ಸಮಸ್ಯೆ ಎಂದ ಎನ್‌ಇಪಿ

ಕರ್ನಾಟಕದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಮಿತಿಯು ಮೊಟ್ಟೆಗಳನ್ನು ತಿನ್ನುವುದರಿಂದ 'ಜೀವನಶೈಲಿ ಅಸ್ವಸ್ಥತೆ' ಮತ್ತು ಮಧುಮೇಹಕ್ಕೆ ಕಾರಣವಾಗುವ 'ಕೆಟ್ಟ ಪರಿಣಾಮಗಳ' ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆರಂಭಿಕ ಋತುಬಂಧ, ಪ್ರಾಥಮಿಕ ಬಂಜೆತನ ಇನ್ನಿತರ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಹೇಳಿತ್ತು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ (ಗದಗ) ನಡೆಸಿದ ಅಧ್ಯಯನ ಮತ್ತು ಅದರ ಸಂಶೋಧನೆಗಳ ವರದಿಯನ್ನು ಜುಲೈನಲ್ಲಿ ಬಿಡುಗಡೆ ಮಾಡಿದ್ದು, ಮಕ್ಕಳಲ್ಲಿ ಅತಿಯಾದ ಅಪೌಷ್ಟಿಕತೆ ಹೋಗಲಾಡಿಸಲು 1-8 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಕಡಲೆ ಮಿಠಾಯಿ (ಚಿಕ್ಕಿ) ಒದಗಿಸುವ ಪ್ರಸ್ತಾವನೆ ಸಲ್ಲಿಸಿದೆ.

 ಅದಮ್ಯ ಚೇತನ ಸಂಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ

ಅದಮ್ಯ ಚೇತನ ಸಂಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ

ತೇಜಸ್ವಿನಿ ಅವರು ನವೆಂಬರ್ 2018 ರಲ್ಲಿ ನಿಧನರಾದ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ದಿವಂಗತ ಅನಂತ್ ಕುಮಾರ್ ಅವರ ಪತ್ನಿ. ಅನಂತ್ ಕುಮಾರ್ ನಿಧನರಾದಾಗ, ಅವರ ಪತ್ನಿ ತೇಜಸ್ವಿನಿ ಅವರನ್ನು ಬೆಂಗಳೂರು ದಕ್ಷಿಣದಿಂದ ಲೋಕಸಭೆಗೆ ಕಣಕ್ಕೆ ಇಳಿಸಬೇಕಿತ್ತು. ಬಿ.ಎಸ್. ಯಡಿಯೂರಪ್ಪ ಅವರಂತಹ ನಾಯಕರ ಬೆಂಬಲವೂ ಇತ್ತು.
ಬಿಜೆಪಿಯ ಕೇಂದ್ರ ನಾಯಕತ್ವವು ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಲು ಆಯ್ಕೆ ಮಾಡಿತು, ಯಡಿಯೂರಪ್ಪ ಅವರು ತೇಜಸ್ವಿನಿ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಿದರು.

ತೇಜಸ್ವಿನಿ ಮತ್ತು ಅವರ ದಿವಂಗತ ಪತಿ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅದಮ್ಯ ಚೇತನ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಅದಮ್ಯ ಚೇತನ ಕಳೆದ ಎರಡು ದಶಕಗಳಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 200,000 ಶಾಲಾ ಮಕ್ಕಳಿಗೆ ಸೇವೆ ಸಲ್ಲಿಸುತ್ತಿದೆ ಎಂದು ತೇಜಸ್ವಿನಿ ಹೇಳಿಕೊಂಡಿದ್ದಾರೆ.

 ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ?

ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ?

2023 ರಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು ಕಾಂಗ್ರೆಸ್ ಸೋಲಿಸಲು ತಂತ್ರ ಮಾಡುತ್ತಿರುವ ಸಂದರ್ಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ಜಯನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಬಹುದು ಎಂಬ ಊಹಾಪೋಹಗಳು ಹರಡಿವೆ.

ಜಯನಗರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಶಾಸಕರಾಗಿದ್ದ ಬಿಎನ್ ವಿಜಯಕುಮಾರ್ ಅವರ ಹಠಾತ್ ನಿಧನದ ನಂತರ 2018 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸೌಮ್ಯಾ ರೆಡ್ಡಿ ಗೆಲುವು ಸಾಧಿಸಿದ್ದರು.

English summary
Bharatiya Janata Party's Karnataka vice president Tejaswini Ananthkumar on Tuesday slammed the state government Over giving eggs in mid day meals in schools. Also She siad that, The food given to students shouldn’t be a political statement and should be such that all students can consume it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X