ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಅಭಿಮಾನಿಗಳಲ್ಲಿ ಕಿಡಿ ಹಚ್ಚಿಸಿದ ತೇಜಸ್ವಿ ಸೂರ್ಯ ಟ್ವೀಟ್

|
Google Oneindia Kannada News

Recommended Video

ಇವರನ್ನು MP ಮಾಡಿದ್ದಕ್ಕೂ ಸಾರ್ಥಕ ಆಯ್ತು..?

ಬೆಂಗಳೂರು, ಆಗಸ್ಟ್ 19: ಹಿಂದಿ ಬ್ಯಾನರ್‌ ತೆರವುಗೊಳಿಸಿದ ಪ್ರಕರಣದಲ್ಲಿ ಕನ್ನಡಿಗರನ್ನು ರೌಡಿಗಳೆಂದು ಕರೆದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಜೈನ ದೇವಸ್ಥಾನವೊಂದರಲ್ಲಿ ಹಾಕಿದ್ದ ಹಿಂದಿ ಬ್ಯಾನರ್ ತೆರವುಗೊಳಿಸಿದ್ದಕ್ಕೆ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಈ ಬ್ಯಾನರ್ ತೆರವುಗೊಳಿಸಿದವರು ಕೆಲವರು ರೌಡಿಗಳು ಎಂದೂ ಆರೋಪಿಸಿದ್ದರು. ಬೆಂಗಳೂರಿನಲ್ಲಿ ಉರ್ದು ಭಾಷೆಯಲ್ಲಿ ಬಳಕೆ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಹಿಂದಿ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದಾರೆ ಎಂಬ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದರು.

ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಬಗ್ಗೆ ಸಂಸದ ತೇಜಸ್ವಿ ಆತಂಕ ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಬಗ್ಗೆ ಸಂಸದ ತೇಜಸ್ವಿ ಆತಂಕ

ರಾಜ್ಯದಲ್ಲಿ ಇರುವ ಅಕ್ರಮ ವಲಸಿಗರ ಹಾವಳಿ ವಿರುದ್ಧ ಕಳೆದ ತಿಂಗಳು ಸ್ವತಃ ತೇಜಸ್ವಿ ಸೂರ್ಯ ಮಾತನಾಡಿದ್ದರು. ಆದರೆ, ಕನ್ನಡ ಆಡಳಿತ ಭಾಷೆಯಾಗಿರುವ ರಾಜ್ಯದಲ್ಲಿ ಕನ್ನಡದಲ್ಲಿ ವ್ಯವಹರಿಸಲು ಒಪ್ಪದ, ಕನ್ನಡ ಫಲಕಗಳನ್ನು ಹಾಕದ ಪರಭಾಷಿಕರ ವಿರುದ್ಧ ತಮ್ಮದೇ ರಾಜ್ಯದ ಭಾಷಾಭಿಮಾನಿಗಳ ವಿರುದ್ಧ ಅವರು ವಾಗ್ದಾಳಿ ನಡೆಸಿರುವುದು ಅನೇಕರಲ್ಲಿ ಕಿಡಿ ಹಚ್ಚಿಸಿದೆ.

ಕನ್ನಡ ಪ್ರೇಮಿಗಳಿಗೆ ಅಪಚಾರ- ತೇಜಸ್ವಿ

ಕನ್ನಡ ಪ್ರೇಮಿಗಳಿಗೆ ಅಪಚಾರ- ತೇಜಸ್ವಿ

ಬೆಂಗಳೂರಿನ ಕೆಲವು ರೌಡಿಗಳು ದೇವಸ್ಥಾನವೊಂದರಲ್ಲಿ ಹಿಂದಿ ಬ್ಯಾನರ್ ವಿಚಾರದಲ್ಲಿ ನಮ್ಮ ಜೈನ ಸಹೋದರರ ಮೇಲೆ ದಾಳಿ ನಡೆಸಿರುವುದು ತೀವ್ರ ನೋವುಂಟುಮಾಡಿದೆ. ಆದರೆ, ಅವರು ಬೆಂಗಳೂರಿನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸುವುದಿಲ್ಲ. ಕರ್ನಾಟಕಕ್ಕೆ ಕಾಣಿಕೆ ಸಲ್ಲಿಸಿರುವ ಶಾಂತಿಪ್ರಿಯ ಜೈನರ ಮೇಲೆ ಹಲ್ಲೆ ನಡೆಸಿರುವುದು ಕನ್ನಡದ ನೈಜ ಪ್ರೇಮಿಗಳು ಮತ್ತು ಕಾರ್ಯಕರ್ತರಿಗೆ ಅಪಚಾರ ಮಾಡಿದಂತೆ ಎಂದು ತೇಜಸ್ವಿ ಹೇಳಿದ್ದಾರೆ.

ಬ್ಯಾಂಕಿಂಗ್ ಪರೀಕ್ಷೆ ಸ್ಥಳೀಯ ಭಾಷೆಗೆ ಆದ್ಯತೆ: ನಿರ್ಮಲಾ ಸೀತಾರಾಮನ್ಬ್ಯಾಂಕಿಂಗ್ ಪರೀಕ್ಷೆ ಸ್ಥಳೀಯ ಭಾಷೆಗೆ ಆದ್ಯತೆ: ನಿರ್ಮಲಾ ಸೀತಾರಾಮನ್

ಯುವ ಜೈನರು ಸಂಸ್ಕೃತಿ ತಿಳಿದುಕೊಳ್ಳಬೇಕು

ಯುವ ಜೈನರು ಸಂಸ್ಕೃತಿ ತಿಳಿದುಕೊಳ್ಳಬೇಕು

ಕನ್ನಡ ಸಾಹಿತ್ಯದ ಮೂವರು ರತ್ನಗಳು, ಮಹಾನ್ ಕವಿಗಳಾದ ಪಂಪ, ಪೊನ್ನ ಮತ್ತು ರನ್ನ ಅವರು ರತ್ನತ್ರಯರು ಎಂದೇ ಪ್ರಸಿದ್ಧರಾದವರು. ಕನ್ನಡ ಸಾಹಿತ್ಯದ ಆರಂಭವೇ ಜೈನಯುಗವಾಗಿತ್ತು. ಹೀಗಾಗಿ ರಾಜ್ಯದಲ್ಲಿರುವ ಯುವ ಜೈನರು ಈ ಇತಿಹಾಸವನ್ನು ತಿಳಿದುಕೊಳ್ಳಬೇಕು ಮತ್ತು ತಮ್ಮ ಸಂವಹನಗಳಲ್ಲಿ ಕನ್ನಡ ಬಳಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ಕೇಳಿಕೊಂಡಿದ್ದಾರೆ.

ಹಿಂದಿ ಬ್ಯಾನರ್, ಕನ್ನಡಿಗರ ಬಂಧನ; ಏನಿದು ವಿವಾದ?ಹಿಂದಿ ಬ್ಯಾನರ್, ಕನ್ನಡಿಗರ ಬಂಧನ; ಏನಿದು ವಿವಾದ?

ಅವರು ಮಾಡುತ್ತಿರುವುದು ವ್ಯಾಪಾರ, ಸಂಸ್ಕೃತಿಯನ್ನಲ್ಲ

ಅವರು ಮಾಡುತ್ತಿರುವುದು ವ್ಯಾಪಾರ, ಸಂಸ್ಕೃತಿಯನ್ನಲ್ಲ

ಮೊದಲು ಕರ್ನಾಟಕದಲ್ಲಿರುವ ಪರಭಾಷಿಕರಿಗೆ ಕನ್ನಡದಲ್ಲಿ ವ್ಯವಹರಿಸಲು ಹೇಳಿ. ಅವರು ಹರಿದಿರುವುದು ಹಿಂದಿಯಲ್ಲಿ ಹಾಕಿರುವ ಬ್ಯಾನರ್‌ಅನ್ನು ಮಾತ್ರ. ಜೈನರ ದೇವಾಲಯಕ್ಕೆ ಅಥವಾ ಅವರ ಧಾರ್ಮಿಕ ನಂಬಿಕೆಗೆ ಹಾನಿ ಮಾಡಿಲ್ಲ. ಕರ್ನಾಟಕದಲ್ಲಿ ಇರುವ ಅವರಿಗೆ ಕನ್ನಡದಲ್ಲಿ ಬ್ಯಾನರ್ ಹಾಕಲು ಏನು ಕಷ್ಟ. ಕನ್ನಡಿಗರು ತಮ್ಮ ನೆಲದಲ್ಲಿ ಬೇರೆ ಭಾಷಿಕರ ಭಾಷಾ ದೌರ್ಜನ್ಯವನ್ನು ಏಕೆ ಸಹಿಸಿಕೊಳ್ಳಬೇಕು. ಇಲ್ಲಿ ಹಿಂದಿ ಫಲಕಗಳನ್ನು ಬಳಸುತ್ತಿರುವವರು ಪಂಪ, ರನ್ನ ಅಥವಾ ಪೊನ್ನರಂತೆ ಕನ್ನಡಿಗರಾಗಿ ಕನ್ನಡಕ್ಕೆ ಕೊಡುಗೆ ನೀಡಿದವರಲ್ಲ. ತಮ್ಮ ವ್ಯಾಪಾರಕ್ಕಾಗಿ ಬೇರೆ ರಾಜ್ಯದಿಂದ ಇಲ್ಲಿಗೆ ವಲಸೆ ಬಂದು ವ್ಯವಹಾರ ನಡೆಸುತ್ತಿರುವವರು. ಅವರು ಇಲ್ಲಿ ನಡೆಸುತ್ತಿರುವುದು ವ್ಯಾಪಾರವನ್ನೇ ಹೊರತು ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ನೀಡುವ ಕೆಲಸವನ್ನಲ್ಲ ಎಂದು ತೇಜಸ್ವಿ ಸೂರ್ಯ ಹಾಗೂ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವವರ ವಿರುದ್ಧ ಟ್ವೀಟ್ ಮಾಡಲಾಗಿದೆ.

ಮೊದಲು ಕನ್ನಡಿಗರಿಗೆ ಗೌರವ ನೀಡಲಿ

ಮೊದಲು ಕನ್ನಡಿಗರಿಗೆ ಗೌರವ ನೀಡಲಿ

ರಾಜ್ಯದಲ್ಲಿ ಬೇರೆ ಭಾಷೆಯಲ್ಲಿ ವ್ಯವಹರಿಸುವ ಮತ್ತು ಫಲಕಗಳನ್ನು ಹಾಕುವವರ ಮೇಲೆ ದೌರ್ಜನ್ಯ ಎಸಗಿ ಕನ್ನಡದಲ್ಲಿ ವ್ಯವಹರಿಸುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಕನ್ನಡಪರ ಧ್ವನಿ ಎತ್ತುವವರು, ನಮ್ಮ ರಾಜ್ಯದಲ್ಲಿ ವಾಸಿಸುತ್ತಿದ್ದರೂ ಇಲ್ಲಿನ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡುತ್ತಿಲ್ಲ. ಅದನ್ನು ಪ್ರಶ್ನಿಸಿದರೆ ನಮ್ಮ ಮೇಲೆಯೇ ದಬ್ಬಾಳಿಕೆ ನಡೆಸಲು ಬರುತ್ತಾರೆ. ಹೀಗಾಗಿ ಬಲಪ್ರಯೋಗ ಅನಿವಾರ್ಯ ಎನ್ನುತ್ತಿದ್ದಾರೆ. ಅಲ್ಲದೆ, ಹಿಂದಿ ಹೇರಿಕೆಯನ್ನು ತಾವು ವಿರೋಧಿಸುತ್ತಿದ್ದರೆ, ತಮ್ಮನ್ನು ಗೂಂಡಾಗಳೆಂದು ಕರೆಯುವ ಮೂಲಕ ಬೇರೆ ಭಾಷಿಕರ ದಬ್ಬಾಳಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಸಿದ್ದಾರೆ.

ಇಂತಹ ಕಿಡಿಗೇಡಿಗಳನ್ನು ನಂಬಬೇಡಿ

ಇಂತಹ ಕಿಡಿಗೇಡಿಗಳನ್ನು ನಂಬಬೇಡಿ

ಕಿಡಿಗೇಡಿಗಳೆಲ್ಲಾ ಸಂಸದರಾದರೆ ಏನಾಗುತ್ತೆ ಎಂಬುದಕ್ಕೆ ತೇಜಸ್ವಿ ಸೂರ್ಯ ಸಾಕ್ಷಿ. ಯಾರೋ ಹಿಂದಿಯಲ್ಲಿ ಬೋರ್ಡು ಹಾಕಿಕೊಂಡಿದ್ದನ್ನು ಇನ್ಯಾರೋ ಹರಿದಂತೆ. ಈ ಮಹಾಶಯ ಇಂತಹ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ರೀತಿ ನೋಡಿ. ಇವರ ಟ್ವೀಟ್ ಎರಡು ಅರ್ಥಗಳನ್ನು ಹೊರಡಿಸುತ್ತದೆ. 1. ಜೈನರೆಲ್ಲಾ ಹಿಂದಿ ಭಾಷಿಕರು ಅಂತ, 2. ಕನ್ನಡಪರ ಹೋರಾಟಗಾರರು ಜೈನ ವಿರೋಧಿಗಳು ಅಂತ. ದಯವಿಟ್ಟು ಇಂತಹ ಕಿಡಿಗೇಡಿಗಳನ್ನು ನಂಬಬೇಡಿ. ಎಲ್ಲದಕ್ಕೂ ಧರ್ಮವನ್ನು ಎಳೆತಂದು ಬೆಂಕಿ ಹಚ್ಚುವುದು, ಗಲಭೆ ಹತ್ತಿಸುವುದು ಇವರುಗಳು ಲಾಗಾಯ್ತಿನಿಂದಲೂ ಮಾಡಿಕೊಂಡು ಬಂದಿರುವ ಚೇಷ್ಟೆಯೇ ಆಗಿದೆ. ಜೈನರೇ ಆಗಿರಲಿ ಇನ್ಯಾವುದೇ ಧರ್ಮದವರೇ ಆಗಿರಲಿ. ಕರ್ನಾಟಕದಲ್ಲಿ ಇದ್ದುಕೊಂಡು ವ್ಯಾಪಾರ/ವ್ಯವಹಾರ ಮಾಡುತ್ತಿದ್ದರೆ ಕನ್ನಡ ಕಲಿಯಲಿ, ಕನ್ನಡಿಗರಿಗೆ ಗೌರವ ಕೊಡಲಿ ಎಂದು ದರ್ಶನ್ ಜೈನ್ ಎಂಬುವವರು ತೇಜಸ್ವಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

English summary
BJP MP Tejasvi Surya condemned an attack against Hindi banner in Bengaluru. Kannada Activists expressed angriness on Tejasvi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X