ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಂಥಾಲಯದಲ್ಲಿ ಕಚೇರಿ ತೆರೆದು ಆಕ್ರೋಶಕ್ಕೆ ಗುರಿಯಾದ ತೇಜಸ್ವಿ ಸೂರ್ಯ

|
Google Oneindia Kannada News

Recommended Video

ಮತ್ತೊಮ್ಮೆ ಸಾರ್ವಜನಿಕರ ಕೋಪಕ್ಕೆ ಗುರಿಯಾದ ಜೇಜಸ್ವಿ ಸೂರ್ಯ. | Tejasvi Surya | Oneindia Kannada

ಬೆಂಗಳೂರು, ಸೆಪ್ಟೆಂಬರ್ 19 : ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಚೇರಿ ಆರಂಭದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ದಿ. ಅನಂತ್ ಕುಮಾರ್ ಬಳಕೆ ಮಾಡುತ್ತಿದ್ದ ಕಚೇರಿಯನ್ನು ಬಳಸಲು ಅವರು ನಿರಾಕರಿಸಿದ್ದರು.

ಗ್ರಂಥಾಲಯವಿದ್ದ ಜಾಗದಲ್ಲಿ ತೇಜಸ್ವಿ ಸೂರ್ಯ ತಮ್ಮ ನೂತನ ಕಚೇರಿಯನ್ನು ಆರಂಭ ಮಾಡಲಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಂಸದರ ಕಚೇರಿಗೆ ಸ್ಥಳವನ್ನು ತೆರವುಗೊಳಿಸಲು ಆದೇಶವನ್ನು ಹೊರಡಿಸಿದೆ.

ಅನಂತ್ ಕುಮಾರ್ ಕಚೇರಿ ಬೇಡ ಎಂದ ಸಂಸದ ತೇಜಸ್ವಿ ಸೂರ್ಯಅನಂತ್ ಕುಮಾರ್ ಕಚೇರಿ ಬೇಡ ಎಂದ ಸಂಸದ ತೇಜಸ್ವಿ ಸೂರ್ಯ

ಬಿಬಿಎಂಪಿಯ 168ನೇ ವಾರ್ಡ್‌ನಲ್ಲಿ ಸಂಸದರ ಕಚೇರಿ ಆರಂಭವಾಗಲಿದೆ. ಈ ಮೊದಲು ಬಿಬಿಎಂಪಿ ಸೌತ್ ಎಂಡ್ ವೃತ್ತದಲ್ಲಿ ಸಂಸದರಿಗೆ ಕಚೇರಿ ನಿಗದಿ ಮಾಡಿತ್ತು. ದಿ. ಅನಂತ್ ಕುಮಾರ್ ಅದೇ ಕಚೇರಿ ಬಳಕೆ ಮಾಡುತ್ತಿದ್ದರು.

ಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ 2019ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿ ಸಂಸದರಾದಾಗ ಬಳಿಕ ಬಿಬಿಎಂಪಿಗೆ ಪತ್ರ ಬರೆದಿದ್ದರು. ಅನಂತ್ ಕುಮಾರ್ ಬಳಸುತ್ತಿದ್ದ ಕಚೇರಿ ಬೇಡ ಬೇರೆ ಕಡೆ ವ್ಯವಸ್ಥೆ ಮಾಡಲು ಕೋರಿದ್ದರು.

ತೇಜಸ್ವಿಸೂರ್ಯ - ಲೋಕಸಭೆಗೆ ಆಯ್ಕೆಯಾದ ಕಿರಿಯ ವಯಸ್ಸಿನ ಸಂಸದತೇಜಸ್ವಿಸೂರ್ಯ - ಲೋಕಸಭೆಗೆ ಆಯ್ಕೆಯಾದ ಕಿರಿಯ ವಯಸ್ಸಿನ ಸಂಸದ

ಎಲ್ಲಿದೆ ಸಂಸದರ ನೂತನ ಕಚೇರಿ

ಎಲ್ಲಿದೆ ಸಂಸದರ ನೂತನ ಕಚೇರಿ

ತೇಜಸ್ವಿ ಸೂರ್ಯ ನೂತನ ಕಚೇರಿ ನಂ 44, 11ನೇ ಮುಖ್ಯ ರಸ್ತೆ, 39ನೇ ಬಿ ಅಡ್ಡ ರಸ್ತೆ, ಜಯನಗರ 5ನೇ ಬ್ಲಾಕ್‌, ಪು. ತಿ. ನ. ಪಾರ್ಕ್ ಎದುರು, ಪಟ್ಟಾಭಿರಾಮನಗರದಲ್ಲಿ ಆರಂಭವಾಗಲಿದೆ. ಈ ಜಾಗ ವಾರ್ಡ್‌ ನಂ 168ರ ವ್ಯಾಪ್ತಿಯಲ್ಲಿ ಬರುತ್ತದೆ.

ಇ- ಗ್ರಂಥಾಲಯದ ಜಾಗ

ಇ- ಗ್ರಂಥಾಲಯದ ಜಾಗ

ತೇಜಸ್ವಿ ಸೂರ್ಯ ಕಚೇರಿ ನಿರ್ಮಾಣಗೊಳ್ಳುತ್ತಿರುವ ಜಾಗ ಇ-ಗ್ರಂಥಾಲಕ್ಕೆ ಸೇರಿದ್ದು. ಜಯನಗರದ ಶಾಸಕರಾಗಿದ್ದ ದಿ. ಬಿ. ಎನ್. ವಿಜಯಕುಮಾರ್ ಮತ್ತು ಬೆಂಗಳೂರು ದಕ್ಷಿಣದ ಸಂಸದರಾಗಿದ್ದ ದಿ. ಅನಂತ್ ಕುಮಾರ್ ಇ-ಗ್ರಂಥಾಲಯವನ್ನು ಉದ್ಘಾಟನೆ ಮಾಡಿದ್ದರು.

ಮಕ್ಕಳು ಪಾಠ ಕಲಿಯುವ ಸ್ಥಳ

ಮಕ್ಕಳು ಪಾಠ ಕಲಿಯುವ ಸ್ಥಳ

ಬೆಂಗಳೂರಿನಲ್ಲಿ ಅದರಲ್ಲೂ ಜಯನಗರದಲ್ಲಿ ಇರುವುದು ಕೆಲವು ಗ್ರಂಥಾಲಯಗಳು ಮಾತ್ರ. ಕೆಲವು ಸಂಘ ಸಂಸ್ಥೆಗಳು ಸುತ್ತಮುತ್ತಲಿನ ಬಡ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಟ್ಯೂಷನ್ ಮಾಡಲು ಈ ಕಟ್ಟಡವನ್ನು ಉಪಯೋಗಿಸುತ್ತಿದ್ದವು. ಐಎಎಸ್/ಐಪಿಎಸ್/ಕೆಎಎಸ್ ಪರೀಕ್ಷೆಗೆ ಸಿದ್ಧರಾಗುವ ಅಭ್ಯರ್ಥಿಗಳಿಗೆ ಈ ಗ್ರಂಥಾಲಯ ಉಪಯೋಗವಾಗುತ್ತಿತ್ತು.

ಪಾರ್ಕಿಂಗ್ ಸಮಸ್ಯೆ ಇದೆ

ಪಾರ್ಕಿಂಗ್ ಸಮಸ್ಯೆ ಇದೆ

11ನೇ ಮುಖ್ಯ ರಸ್ತೆಯಲ್ಲಿ ಈಗಾಗಲೇ ವಾಹನಗಳ ಪಾರ್ಕಿಂಗ್ ಸಮಸ್ಯೆ ಇದೆ. ಸಂಸದರ ಕಚೇರಿಯೂ ಆರಂಭವಾದರೆ ಜನರ ಬಳಕೆ ಹೆಚ್ಚಾಗಲಿದ್ದು, ವಾಹನಗಳ ಪಾರ್ಕಿಂಗ್‌ಗೆ ಜನರು ಪರದಾಡಬೇಕಾಗುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ಕಚೇರಿ ಜಾಗ ಚೆನ್ನಾಗಿತ್ತು

ಕಚೇರಿ ಜಾಗ ಚೆನ್ನಾಗಿತ್ತು

ಸೌತ್ ಎಂಡ್ ವೃತ್ತದಲ್ಲಿ ಅನಂತ್ ಕುಮಾರ್ ಬಳಕೆ ಮಾಡುತ್ತಿದ್ದ ಕಚೇರಿ ಚೆನ್ನಾಗಿತ್ತು. ಹತ್ತಿರ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸೌಕರ್ಯವಿತ್ತು. ತೇಜಸ್ವಿ ಸೂರ್ಯ ಆ ಕಚೇರಿಯನ್ನು ಬಳಕೆ ಮಾಡಬಹುದಿತ್ತು ಎಂಬುದು ಜನರ ಅಭಿಪ್ರಾಯವಾಗಿದೆ.

English summary
Bangalore South BJP MP Tejasvi Surya taken up library space for his MP office. He did not use late MP Anant Kumar office which is in South end circle office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X