ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದವರೇ ಫೋಟೋ ಹಾಕಿಕೊಳ್ತಿದ್ದಾರೆ: ತೇಜಸ್ವಿ

|
Google Oneindia Kannada News

ಬೆಂಗಳೂರು, ಮೇ 20: ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದವರೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆ ತೆಗೆದುಕೊಂಡಿರುವ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

Recommended Video

Tejasvi Surya ಕಾಂಗ್ರೆಸ್ ನಾಯಕರಿಗೆ ಟಾಂಗ್ | Oneindia Kannada

ಮೊದಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಸರ್ಕಾರ ಪ್ರಚಾರ ಮಾಡುತ್ತಿರುವಾಗ ವಿರೋಧಿಸಿ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದ ಎಲ್ಲರೂ ಇದೀಗ ಲಸಿಕೆ ಪಡೆದು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಬೆಡ್ ಬ್ಲಾಕಿಂಗ್ ದಂಧೆ ಗೊಂದಲ, ಆರೋಪದ ಬಗ್ಗೆ ತೇಜಸ್ವಿ ಸೂರ್ಯ ಸ್ಪಷ್ಟನೆ ಬೆಡ್ ಬ್ಲಾಕಿಂಗ್ ದಂಧೆ ಗೊಂದಲ, ಆರೋಪದ ಬಗ್ಗೆ ತೇಜಸ್ವಿ ಸೂರ್ಯ ಸ್ಪಷ್ಟನೆ

ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆಯನ್ನು ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದರು, ಬಳಿಕ ನೂರಾರು ಮಂದಿಗೆ ಸುಲಭವಾಗಿ ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯಲು ಸಹಕಾರಿಯಾಯಿತು.

 ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶಭರಿತ ನುಡಿ

ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶಭರಿತ ನುಡಿ

ಕಳೆದ ಒಂದಷ್ಟು ದಿನಗಳಿಂದ ಕಾಂಗ್ರೆಸ್ ಪಕ್ಷದ ಕೆಲವರು ರಾಜ್ಯ, ಕೇಂದ್ರ ಸರ್ಕಾರ ಸತ್ತಿದೆ, ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶಭರಿತವಾಗಿ ಮಾತನಾಡುತ್ತಿದ್ದರು. ನಮ್ಮ 25 ಸಂಸದರು ಸೇರಿ ಏನು ಮಾಡಿದ್ದಾರೆ ಎಂದು ನಾವು ತಿಳಿಸುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದರು.

 ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು

ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು

ಕೊರೊನಾ ಎರಡನೇ ಅಲೆ ಪ್ರಾರಂಭವಾಗುವ ಮೊದಲು ಮಾರ್ಚ್ 17ರಂದು ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಸೂಚನೆ ನೀಡಿದ್ದರು, ಪ್ರತಿ ಹಂತದಲ್ಲೂ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು, ಸರ್ಕಾರ ನಿದ್ದೆ ಮಾಡುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಕೋವಿಡ್ ವಾರ್‌ ರೂಮ್‌: 17 ಮಂದಿ ಮುಸ್ಲಿಂ ನೌಕರರ ಮರುನೇಮಕ?ಕೋವಿಡ್ ವಾರ್‌ ರೂಮ್‌: 17 ಮಂದಿ ಮುಸ್ಲಿಂ ನೌಕರರ ಮರುನೇಮಕ?

 ಕೊರೊನಾ ಅಲೆ ವಿರುದ್ಧ ಹೋರಾಡಲು ಲಸಿಕೆ ಅಸ್ತ್ರ

ಕೊರೊನಾ ಅಲೆ ವಿರುದ್ಧ ಹೋರಾಡಲು ಲಸಿಕೆ ಅಸ್ತ್ರ

ಕೊರೊನಾ ವಿರುದ್ಧ ಹೋರಾಡಲು ನಮಗೆ ಇದ್ದಿದ್ದು ಲಸಿಕೆಯ ಅಸ್ತ್ರ, ಮೊದಲನೆಯ ಅಲೆಯಲ್ಲಿ ವೈದ್ಯರು ನರ್ಸ್‌ಗಳಿಗೆ ಲಸಿಕೆ ಇರಲಿಲ್ಲ, ಲಸಿಕೆ ಆರಂಭದಿಂದ ಹಿಡಿದು ಎಕ್ಸಿಕ್ಯೂಷನ್ ಹಂತದವರೆಗೂ ಭಾರತ ಬಿಟ್ಟರೆ ಬೇರೆ ದೇಶಗಳ ಕೈಲಿ ಇರಲಿಲ್ಲ ಎಂದರು.

 ರಾಜ್ಯಗಳಿಗೆ ಲಸಿಕೆ ಖರೀದಿಗೆ ಅನುಮತಿ

ರಾಜ್ಯಗಳಿಗೆ ಲಸಿಕೆ ಖರೀದಿಗೆ ಅನುಮತಿ

ಎರಡನೇ ಹಂತದಲ್ಲಿ ಲಸಿಕೆ ಖರೀದಿಗೆ ರಾಜ್ಯಗಳಿಗೆ ಅನುಮತಿ ನೀಡಿ ಎಂದು ಹೇಳಿದ್ದರು, ಬಿಜೆಪಿ ಲಸಿಕೆ ಎಂದು ಸಾಕಷ್ಟು ಮಂದಿ ಕಾಂಗ್ರೆಸ್ ನಾಯಕರು ಅಪ ಪ್ರಚಾರ ಮಾಡಿದ್ದರು, ಇದೀಗ ಅವರೇ ಲಸಿಕೆಯನ್ನು ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಪೋಸ್ಟ್‌ಮಾಡುತ್ತಿದ್ದಾರೆ ಎಂದರು.

ಕ್ಷಮೆಯಾಚನೆ ಸುದ್ದಿ ಅಲ್ಲಗೆಳೆದ ಸಂಸದ ತೇಜಸ್ವಿ ಸೂರ್ಯಕ್ಷಮೆಯಾಚನೆ ಸುದ್ದಿ ಅಲ್ಲಗೆಳೆದ ಸಂಸದ ತೇಜಸ್ವಿ ಸೂರ್ಯ

English summary
Mp Tejasvi Surya Statement On Congress Leaders Who Are Posted Vaccination Photos On Social Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X