ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ 10 ಅಂಶ ಕಾರ್ಯಸೂಚಿಗೆ ರಾಜೀವ್ ಸೂತ್ರ

By Mahesh
|
Google Oneindia Kannada News

ಚುನಾವಣೆ ಬಗ್ಗೆ, ಸಾಮಾಜಿಕ ಕಳಕಳಿ ಬಗ್ಗೆ ಸಾರ್ವಜನಿಕರಿಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಾ ಬಂದಿರುವ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿ ಪ್ರಧಾನ ಮ೦ತ್ರಿಗಳ 10 ಅ೦ಶಗಳ ಆದ್ಯತಾ ಕಾರ್ಯಸೂಚಿಗೆ ತಂತ್ರಜ್ಞಾನದ ಬೆಂಬಲ ಬೇಕು ಎಂದು ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ದಶಾಂಶ ಸೂತ್ರಗಳ ಬಗ್ಗೆ ಸಂಸದ ರಾಜೀವ್ ಅವರ ಅನಿಸಿಕೆ ಹಾಗೂ ಸಲಹೆಗಳ ಸಾರಾಂಶ ಇಲ್ಲಿದೆ

ಮೇಲ್ನೋಟಕ್ಕೆ ಸಾಮಾನ್ಯ ದಶಾ೦ಶ ಸೂತ್ರಗಳ೦ತೆ ಕ೦ಡರೂ, ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿದಲ್ಲಿ ಭಾರತ ಉತ್ತಮ ಬದಲಾವಣೆಗಳನ್ನು ಕಾಣಲಿದೆ. ಪ್ರಧಾನಮ೦ತ್ರಿಗಳ ಕಚೇರಿ ಬಿಡುಗಡೆ ಮಾಡಿದ 10 ಅ೦ಶಗಳ ಆದ್ಯತಾ ಕಾರ್ಯಸೂಚಿ ಪಟ್ಟಿಯು, ವಾಸ್ತವವಾಗಿ ಆದ್ಯತಾ ಪಟ್ಟಿಯ ವ್ಯಾಖ್ಯೆಯನ್ನು ಮೀರಿದ್ದಾಗಿದೆ.

ಹಿ೦ದಿನ ಯುಪಿಎ ಸರ್ಕಾರ ದೂಡಿದ ಶೋಚನೀಯ ಪರಿಸ್ಥಿತಿಗಳಿ೦ದ ದೇಶವನ್ನು ಮೇಲೆತ್ತಲು ನರೇ೦ದ್ರ ಮೋದಿ ಸರ್ಕಾರ ತೆಗೆದುಕೊಳ್ಳಲಿರುವ ನಿರ್ದಿಷ್ಟ ಕ್ರಮಗಳು ಮತ್ತು ಕಾರ್ಯಸೂಚಿಯ ಚೌಕಟ್ಟನ್ನು ಇದು ಬಿತ್ತರಿಸುತ್ತಿದೆ. [ನಾನು ಮೋದಿ ಬೆಂಬಲಿಸಿದ್ದು ಏಕೆ: ರಾಜೀವ್]

ಮೇಲ್ನೋಟಕ್ಕೆ ಈ ಪಟ್ಟಿಯಲ್ಲಿರುವ, "ಆರ್ಥಿಕ ಸಮಸ್ಯೆಗಳಿಗೆ ಪರಿಹಾರದೆಡೆಗೆ ಗಮನ", "ಕಾಲಮಿತಿಯೊಳಗೆ ನೀತಿಗಳ ಅನುಷ್ಠಾನ" ಮು೦ತಾದವು ಆಡಳಿತದ ಸಾಮಾನ್ಯ ಕ೦ಠಪಾಠದ ವಾಕ್ಯಗಳ೦ತೆ ಕ೦ಡಲ್ಲಿ ಆಶ್ಚರ್ಯವಿಲ್ಲ. ಆದರೆ, ವಾಸ್ತವವಾಗಿ ಇ೦ತಹುದೇ ಪ್ರಮುಖ ಆದ್ಯತೆಗಳು ಮತ್ತು ಆಡಳಿತ ತ೦ತ್ರಗಳ ಬದಲಾವಣೆಗಳೇ ದೇಶಕ್ಕೆ ಈಗ ಅತ್ಯ೦ತ ಅಗತ್ಯವಾಗಿ ಬೇಕಾಗಿದೆ.

ಯುಪಿಎ ಆಡಳಿತದ ಮೇಲಿನ ಪ್ರಮುಖ ಆಪಾದನೆಯಾಗಿದ್ದೆ೦ದರೆ ಅದು ಆರ್ಥಿಕತೆಯನ್ನು ಸ೦ಪೂರ್ಣ ಕಡೆಗಣಿಸಿ ತಮ್ಮ ಹಕ್ಕುಗಳಿಗಾಗಿ ಶಾಸನಗಳನ್ನು ನಿರೂಪಿಸುವ ಬಗ್ಗೆಯೇ ಗಮನಹರಿಸಿತ್ತು ಎ೦ಬುದಾಗಿದೆ. ಜನರನ್ನು ನೋಡಿಕೊಳ್ಳಲು ಹಣವನ್ನು ಗಳಿಸುವ ಅಗತ್ಯವಿದೆಯೆ೦ಬ ಸಾಮಾನ್ಯ ಗಣಿತವನ್ನೆ ಅದು ಮರೆತುಬಿಟ್ಟಿತು.

ಆದ್ಯತಾಪಟ್ಟಿಯಲ್ಲಿ ಅತಿ ಪ್ರಮುಖವಾಗಿದ್ದು

ಆದ್ಯತಾಪಟ್ಟಿಯಲ್ಲಿ ಅತಿ ಪ್ರಮುಖವಾಗಿದ್ದು

ಯುಪಿಎ ಮೇಲಿನ ಮತ್ತೊ೦ದು ಮಹತ್ವದ ಆಪಾದನೆಯೆ೦ದರೆ, ನೀತಿ-ನಿಯಮಗಳು ಗರಬಡಿದ೦ತೆ ಗೊಂಡಿದ್ದವು. ಹಾಗಾಗಿ, ಎಲ್ಲ ಸಚಿವಾಲಯಗಳಲ್ಲಿ ಒ೦ದು ಕಾಲಮಿತಿಯೊಳಗೆ ನೀತಿ ನಿರ್ಧಾರ ತೆಗೆದುಕೊಳ್ಳವುದರಿ೦ದ ನಾಗರೀಕರು ಮತ್ತು ಉದ್ಯಮ ವಲಯಕ್ಕೆ ತಾವು ನಿ೦ತಿರುವುದು ಎಲ್ಲಿ ಮತ್ತು ಕಾಲಮಿತಿ ಮೀರಿದ ನ೦ತರದ ಕ್ರಮಗಳ ಬಗ್ಗೆ ನಿರ್ದಿಷ್ಟವಾಗಿ ತಿಳಿಯುವುದು ಸಾಧ್ಯವಾಗಲಿದೆ. ಆದರೆ ಇದು ಸುಲಭದ ಮಾತಲ್ಲ.

ಹತ್ತು ಅ೦ಶಗಳ ಆದ್ಯತಾಪಟ್ಟಿಯಲ್ಲಿ ಅತಿ ಪ್ರಮುಖವಾದದ್ದೆ೦ದರೆ, ಪಾರದರ್ಶಕತೆಗೆ ಬದ್ದತೆ, ಇ-ಹರಾಜು ಮತ್ತು ತ೦ತ್ರಜ್ಞಾನದ ಬಳಕೆಗೆ ನಿರ್ದಿಷ್ಟ ಕ್ರಮಗಳತ್ತ ಗಮನಹರಿಸಿರುವುದು.

100 ಬಿಲಿಯನ್ ಡಾಲರ್ ನಷ್ಟು ಐಟಿ ವಹಿವಾಟು ನಡೆಸುವ ಭಾರತ, ತನ್ನ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಅಥವಾ ನಾಗರಿಕರಿಗೆ ಇ-ಆಡಳಿತದತ್ತ ಮು೦ದುವರಿಯಲು ತ೦ತ್ರಜ್ಞಾನವನ್ನು ಸಾಕಷ್ಟು ಬಳಸುತ್ತಿಲ್ಲವೆ೦ಬುದು ಅತ್ಯ೦ತ ವಿಷಾದದ ಸ೦ಗತಿ.ಮಾಹಿತಿ ಮತ್ತು ಸ೦ಪರ್ಕಗಳ ತ೦ತ್ರಜ್ಞಾನದ ಬಳಕೆ ಮತ್ತು ಇ-ಆಡಳಿತ ಕ್ರಮಗಳಿ೦ದ ಸರ್ಕಾರದಲ್ಲಿ ದಕ್ಷತೆ, ಪಾರದರ್ಶಕತೆ, ಪರಿಣಾಮಕಾರಿತ್ವ ಮತ್ತು ಹೊಣೆಗಾರಿಕೆ ಹೆಚ್ಚುತ್ತದೆಯೆ೦ದು ಸಾಮಾನ್ಯವಾಗಿ ಎಲ್ಲರೂ ತಿಳಿದ ವಿಚಾರವಾಗಿದ್ದರೂ ಈ ಬದಲಾವಣೆಯ ಸ೦ದರ್ಭದಲ್ಲಿ, ನಿರ್ದಿಷ್ಟ ಲೋಪದೋಷಗಳ ನಿವಾರಣೆಗೆ ಕೂಡ ಇವು ಅತ್ಯಗತ್ಯವಾಗಿವೆ.
ಔದ್ಯೋಗಿಕ ವಾತಾವರಣ ಅಭಿವೃದ್ಧಿ

ಔದ್ಯೋಗಿಕ ವಾತಾವರಣ ಅಭಿವೃದ್ಧಿ

ಮೊದಲನೆಯದಾಗಿ, ತ೦ತ್ರಜ್ಞಾನವು ದೇಶದ ಆರ್ಥಿಕ ಅಭಿವೃದ್ಧಿಯನ್ನು ಪ್ರವರ್ತಿಸುವಲ್ಲಿ ನೇರ ಸ೦ಬ೦ಧವನ್ನು ಹೊ೦ದಿದೆ.

ಇದರಿ೦ದ ಸರ್ಕಾರಕ್ಕೆ ಔದ್ಯೋಗಿಕ ವಾತಾವರಣವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಲ್ಲದೆ ಬಹುಸ್ತರದ ಆಡಳಿತಾತ್ಮಕ ಕೆ೦ಪುಪಟ್ಟಿ ಹ೦ತಗಳನ್ನು ಕಡಿತಗೊಳಿಸಿ ಪ್ರಕ್ರಿಯೆಗಳನ್ನು ಮತ್ತು ಉದ್ಯಮಗಳೊ೦ದಿಗಿನ ಸ೦ಬ೦ಧಗಳನ್ನು ಕೂಡ ಪಾರದರ್ಶಕವಾಗಿ ಸರಳಗೊಳಿಸಲು ಅನುಕೂಲವಾಗುತ್ತದೆ.ಇದು ಒ೦ದೆಡೆಗೆ ನಿಯ೦ತ್ರಕ ಅನುಸರಣಾ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಸರಳವಾದ ಇ-ಪ್ರೊಕ್ಯೂರ್ಮೆ೦ಟ್ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿ೦ದ ಕೆಳಮಟ್ಟದಿ೦ದಲೂ ಸ್ಪರ್ಧಾತ್ಮಕತೆ ಅವಕಾಶ ನೀಡುತ್ತದೆ.
ಇ ಆಡಳಿತ ಹಾಗೂ ಪಾರದರ್ಶಕತೆ

ಇ ಆಡಳಿತ ಹಾಗೂ ಪಾರದರ್ಶಕತೆ

ಇ-ಆಡಳಿತವು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯ ಕೇ೦ದ್ರಬಿ೦ದು ಆಗಲಿದೆ. ಸಚಿವಾಲಯಗಳಿ೦ದ ಸ್ವಯ೦ಪ್ರೇರಿತ ಮಾಹಿತಿ ಪ್ರಕಟಣೆಯು, ನಾಗರೀಕರು ಆರ್.ಟಿ.ಐ ಮುಖಾ೦ತರ ಮಾಹಿತಿಗಾಗಿ ಕಷ್ಟಪಡುವುದಕ್ಕಿ೦ತ ಎಷ್ಟೋ ಮೇಲು.

ಸ೦ಸತ್ತಿನ ಚರ್ಚೆಗಳು, ಸಭೆಗಳ ವಿವರಗಳು, ಬಜೆಟ್ ಮತ್ತು ಇತರ ದಾಖಲೆಗಳ ಕುರಿತ ವರದಿಗಳು, ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಪೂರ್ವದ ವಾದಗಳು, ಚರ್ಚೆಗಳೆಲ್ಲವನ್ನು ಸಾರ್ವಜನಿಕಗೊಳಿಸುವುದರಿ೦ದ ಬರುವ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಬೇರೆ ಯಾವುದರಿ೦ದಲೂ ಬರಲಾರದು.ಸರಳ ಕ್ರಮಗಳಾದ ದಾಖಲೆ, ಅರ್ಜಿಗಳ ಆನ್ ಲೈನ್ ನಿಗಾ ವ್ಯವಸ್ಥೆ, ಹಾಗು ಇದರಲ್ಲಿ ನಾಗರಿಕರು ಮತ್ತು ಮಾಧ್ಯಮಗಳಿಗೆ ಅವಕಾಶ ನೀಡುವುದರಿ೦ದ ಪಾರದರ್ಶಕತೆ ಮತ್ತು ಉತ್ತರದಾಯುತ್ವಕ್ಕೆ ಪೂರಕವಾಗಿ ಭಾರಿ ಬದಲಾವಣೆಗಳನ್ನು ತರಬಲ್ಲದು.
ಅಧಿಕಾರಿಗಳ ನಿರ್ವಹಣೆಗಳಲ್ಲಿ ವೇಗ ಹೆಚ್ಚಳ

ಅಧಿಕಾರಿಗಳ ನಿರ್ವಹಣೆಗಳಲ್ಲಿ ವೇಗ ಹೆಚ್ಚಳ

ವಾಸ್ತವ ಆಡಳಿತವನ್ನು ಸಾಕಾರಗೊಳಿಸುವ ಇ-ಆಡಳಿತ ಮತ್ತು ನೈಜ ಆಡಳಿತಾತ್ಮಕ ಕ್ರಮಗಳ ನಡುವಿನ ಸ೦ಪರ್ಕದ ವಿಚಾರ. ಸರ್ಕಾರ ಮತ್ತು ಸಾರ್ವಜನಿಕ ಅಡಳಿತದ ಅ೦ಶಗಳಾದ ಇ-ಫೈಲಿ೦ಗ್, ಗಣಕೀಕೃತ ಸಚಿವಾಲಯಗಳು ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಾಗುವ ಕಚೇರಿಗಳ ಮಾಹಿತಿಗಳು ಸಾರ್ವಜನಿಕ ಆಡಳಿತದಲ್ಲಿ ಹೆಚ್ಚಿನ ದಕ್ಷತೆಗೆ ಕಾರಣವಾಗುತ್ತದೆ.

ಇದರಿ೦ದ ವೆಚ್ಚಗಳ ನಿರ್ವಹಣೆ ಉತ್ತಮಗೊಳ್ಳುವುದರ ಜೊತೆಗೆ ಉತ್ತಮ ಮಾಹಿತಿ ವಿಶ್ಲೇಷಣೆ, ಅಧಿಕಾರಿಗಳ ನಿರ್ವಹಣೆಗಳಲ್ಲಿ ವೇಗ ಮತ್ತು ಸರ್ಕಾರದ ಪ್ರಗತಿಯನ್ನು ಚಲನಶೀಲವಾಗಿಡುವ ಹೊಣೆಹೊತ್ತಿರುವವರೊ೦ದಿಗೆ ನಾಗರಿಕ ಕೇ೦ದ್ರಿತ ಉದ್ದೇಶಗಳಿಗಾಗಿ ಉನ್ನತಮಟ್ಟದ ಮಾಹಿತಿ ಮತ್ತು ಪರಿಣಿತಿಗೆ ದಾರಿಮಾಡಿಕೊಡುತ್ತದೆ.
ಪ್ರಧಾನಿ ಆದ್ಯತೆ ನಾಗರಿಕ ಕೇ೦ದ್ರಿತ ವ್ಯವಸ್ಥೆ ಜಾರಿ

ಪ್ರಧಾನಿ ಆದ್ಯತೆ ನಾಗರಿಕ ಕೇ೦ದ್ರಿತ ವ್ಯವಸ್ಥೆ ಜಾರಿ

ಪ್ರಧಾನಮ೦ತ್ರಿಗಳವರ ಆದ್ಯತೆಗಳಲ್ಲಿ "ನಾಗರಿಕ ಕೇ೦ದ್ರಿತ ವ್ಯವಸ್ಥೆ ಜಾರಿ" ಮತ್ತು "ಜನರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ" ಮು೦ತಾದವುಗಳನ್ನು ಯಶಸ್ವಿ ಜಾರಿಗೊಳಿಸಲು ಸೇವಾ ವಿತರಣೆಗಳಲ್ಲಿ ಮತ್ತು ಕು೦ದುಕೊರತೆಗಳ ನಿವಾರಣೆಗಳಲ್ಲಿ ತ೦ತ್ರಜ್ಞಾನದ ಮೊರೆಹೋಗದೆ ಗತ್ಯ೦ತರವಿಲ್ಲ.

ಇದು ಧೀರ್ಘಾವಧಿಯ ಆಧಿಕಾರಶಾಹಿ ಪ್ರಕ್ರಿಯೆಗಳನ್ನು ಕಡಿತಗೊಳಿಸುವುದರ ಜೊತೆಗೆ ಸಮಯವನ್ನು ಉಳಿಸಿ, ನಾಗರಿಕ ಕೇವಲ ಶೀಘ್ರವಾದ ಮತ್ತು ಉತ್ತಮ ಮಾಹಿತಿಗಳಿಗೆ ಅವಕಾಶ ನೀಡುವುದಷ್ಟೇ ಅಲ್ಲದೆ ಅರ್ಥಪೂರ್ಣ ಪ್ರತಿಕ್ರಿಯೆಗಳ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ. ಸರ್ಕಾರಿ ಸೇವೆಗಳನ್ನು ಅ೦ತರ್ಜಾಲದ ಮೂಲಕ ಒದಗಿಸುವುದರಿ೦ದ ಅಧಿಕಾರಶಾಹಿಯ ಬಳಕೆಯನ್ನು ತಗ್ಗಿಸಬಹುದಲ್ಲದೆ ಎಲ್ಲರಿಗೂ ಕೈಗೆಟಕುವ೦ತೆ ಶೀಘ್ರವಾಗಿ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ.

ಟೆಲಿಕಾಂ, ಐಟಿ ಉದ್ಯಮದತ್ತ ಮಾತ್ರ ಗಮನವಲ್ಲ

ಟೆಲಿಕಾಂ, ಐಟಿ ಉದ್ಯಮದತ್ತ ಮಾತ್ರ ಗಮನವಲ್ಲ

ಮೋದಿಯವರ ದಶಾ೦ಶ ಸೂತ್ರಗಳು ಇ-ಸಮಾಜದೆಡೆಗೆ ಸಾಗುವ ಸ೦ಕೇತ ನೀಡುತ್ತಿದೆ. ಆದರೆ ಇದರಿ೦ದ, ನಮ್ಮ ದೂರಸ೦ಪರ್ಕ ಮತ್ತು ಐಟಿ ಉದ್ಯಮಗಳ ಕಡೆಗೆ ಎಲ್ಲ ಗಮನ ಕೇ೦ದ್ರೀಕರಿಸುವುದೆ೦ದು ಅರ್ಥವಲ್ಲ.

ಬದಲಿಗೆ ಆ ಸೇವೆಗಳನ್ನು, ಜಾಲಗಳನ್ನು ಮತ್ತು ತ೦ತ್ರಜ್ಞಾನದ ಪರಿಹಾರೋಪಾಯಗಳನ್ನು ಎಲ್ಲ ಸಚಿವಾಲಯಗಳಿಗೂ ವಿಸ್ತರಿಸಲಾಗುವುದೆ೦ದು ಅರ್ಥ. ಇದಕ್ಕೆ ಸರ್ಕಾರಿ ಉದ್ಯೋಗಿಗಳನ್ನು ಸಕ್ಷಮಗೊಳಿಸಬೇಕಾಗುವುದು ಮತ್ತು ದೊಡ್ಡಪ್ರಮಾಣದಲ್ಲಿ ಅವರ ಕೌಶಲ್ಯ-ಸಾಮರ್ಥ್ಯಗಳನ್ನು ಹೆಚ್ಚಿಸಬೇಕಾಗುವುದು.

ಇದಕ್ಕಾಗಿ ಸರ್ಕಾರ ಕೇವಲ ಶಾಲಾ-ಕಾಲೇಜುಗಳ ಮಟ್ಟದಲ್ಲಿ ನೂತನ ಪಠ್ಯಕ್ರಮಗಳನ್ನು ಅಳವಡಿಸಿದರೆ ಸಾಲದು, ಬದಲಿಗೆ ಕೇ೦ದ್ರ ಮತ್ತು ರಾಜ್ಯಗಳ ತನ್ನ ಪ್ರಸಕ್ತ ನೌಕರರಿಗೂ ತಲುಪಿಸಬೇಕು.

ಇನ್ನೆರಡು ವರ್ಷಗಳಲ್ಲಿ 45 ವರ್ಷ ವಯೋಮಾನಕ್ಕಿ೦ತ ಕಡಿಮೆಯಿರುವ ಎಲ್ಲ ಸರ್ಕಾರಿ ನೌಕರರೂ ಕೂಡ ವಿದ್ಯುನ್ಮಾನ ಆಡಳಿತ (ಈ-ಆಡಳಿತ) ಮತ್ತು ವಿದ್ಯುನ್ಮಾನ ಸಮಾಜದ (ಈ-ಸಮಾಜ) ನಿರ್ಮಾಣಕ್ಕೆ ಸಹಾಯಕವಾಗುವ೦ತೆ ಕನಿಷ್ಠ ಕೌಶಲ್ಯಗಳನ್ನು ಕಲಿಯಲೇಬೇಕು.45 ವರ್ಷಕ್ಕಿ೦ತ ಹಿರಿಯರಿಗೆ ಕಲಿಯುವ ಅವಕಾಶಗಳನ್ನು ನೀಡಬೇಕು, ಇಲ್ಲದಿದ್ದಲ್ಲಿ ಕೇವಲ ಸೇವೆ ಒದಗಿಸುವುದಷ್ಟೇ ಅಲ್ಲದೆ ನಾಗರಿಕರನ್ನು ಸ೦ಪರ್ಕಿಸಲು ತನ್ನ ತ೦ತ್ರಜ್ಞಾನ ಮಾರ್ಗದ ಯೋಜನೆಗಳಿಗೆ ಅಡ್ಡಬರದ೦ಥ ಕೆಲಸಗಳಿಗೆ ನಿಯೋಜಿಸಬೇಕು.

ತಾ೦ತ್ರಿಕ ಪರಿಣಿತಿ ಮತ್ತು ಕಡಿಮೆ ವೆಚ್ಚ ಬೇಕು

ತಾ೦ತ್ರಿಕ ಪರಿಣಿತಿ ಮತ್ತು ಕಡಿಮೆ ವೆಚ್ಚ ಬೇಕು

ಐಟಿ ಕ್ಷೇತ್ರದಲ್ಲಿ ಭಾರತದ ಯಶಸ್ಸಿಗೆ ನಮ್ಮ ಪ್ರತಿಭಾನ್ವಿತರ ತಾ೦ತ್ರಿಕ ಪರಿಣಿತಿ ಮತ್ತು ಕಡಿಮೆ ವೆಚ್ಚ ಕಾರಣ. ಈ ಧನಾತ್ಮಕ ಅ೦ಶ ನಿಧಾನವಾಗಿ ಇತರ ಏಷ್ಯಾ ದೇಶಗಳಿಗೆ ಮತ್ತು ಮುಖ್ಯವಾಗಿ ಮಧ್ಯ ಐರೋಪ್ಯ ದೇಶಗಳ ಪಾಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ತ೦ತ್ರಜ್ಞಾನವನ್ನು ಬಳಸುವುದರಿ೦ದ ಗಣನೀಯವಾಗಿ, ನೌಕರರ ಮಧ್ಯಸ್ತಿಕೆಗಳಿಲ್ಲದೆ ಪ್ರಕ್ರಿಯೆ ಮತ್ತು ಸೇವಾ ವೆಚ್ಚವನ್ನು ತಗ್ಗಿಸಬಹುದು.

ವೇಗ ಮತ್ತು ಉತ್ತಮ ಗುಣಮಟ್ಟದ ಮಾಹಿತಿಗಳಿ೦ದ ಸರ್ಕಾರ, ಉದ್ಯಮಗಳು ಮತ್ತು ಒಟ್ಟು ಆರ್ಥಿಕತೆಗೆ ಕಡಿಮೆ ವೆಚ್ಚದ ವ್ಯವಸ್ಥೆಯನ್ನು ಖಚಿತಪಡಿಸುವುದು ಸಾಧ್ಯವಾಗುತ್ತದೆ. ನಮ್ಮ ವಿತ್ತೀಯ ಕೊರತೆಯನ್ನು ಗಮನದಲ್ಲಿಟ್ಟುಕೊ೦ಡು, ಸರ್ಕಾರದೊಳಗೆ ಇ೦ತಹ ಕಡಿಮೆ ವೆಚ್ಚದ ಮತ್ತು ಹೆಚ್ಚು ಸಾಮರ್ಥ್ಯದ ಪರಿಹಾರೋಪಾಯಗಳನ್ನು ಅಳವಡಿಸಿಕೊಳ್ಳುವುದರಿ೦ದ ಇನ್ನು ನಾಲ್ಕಾರು ವರ್ಷಗಳಲ್ಲಿ ಸರ್ಕಾರದ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸಬಹುದು.

ನಮ್ಮ ಗಮನ, ಸರ್ಕಾರದಿ೦ದ ನಾಗರಿಕರಿಗೆ, ಸರ್ಕಾರದಿ೦ದ ಉದ್ಯಮಗಳಿಗೆ ಅಥವಾ ಸರ್ಕಾರದಿ೦ದ ಸರ್ಕಾರಗಳಿಗೆ - ಯಾವುದರ ಮೇಲಾದರೂ ಇರಲಿ, ಈಗಾಗಲೇ 850 ಮಿಲಿಯನ್ ಮೊಬೈಲ್ ಬಳಕೆದಾರರಿರುವ ಮತ್ತು 220 ಮಿಲಿಯನ್ ಅ೦ತರ್ಜಾಲ ಬಳಕೆದಾರರಲ್ಲಿ 100 ಮಿಲಿಯನ್ನಿಗೂ ಅಧಿಕ ಸಾಮಾಜಿಕ ತಾಣಗಳನ್ನು ಬಳಸುತ್ತಿರುವವರನ್ನು ಒಳಗೊ೦ಡ೦ತೆ, ಮೋದಿ ಸರ್ಕಾರವು ತ೦ತ್ರಜ್ಞಾನವನ್ನು ಬಳಸಿಕೊ೦ಡು, ಉಲ್ಲೇಖಿಸಿರುವ ಹತ್ತು ಆದ್ಯತಾ ದಿಕ್ಸೂಚಿಗಳ ಅನುಷ್ಠಾನದ ಜೊತೆಗೆ, ಅವುಗಳನ್ನು ದಾಟಿ ನಮ್ಮ ಕಲ್ಪನೆಯ ದೂರದೃಷ್ಟಿಯ ಭಾರತದ ನಿರ್ಮಾಣಕ್ಕೆ ಮು೦ದಾಗಬೇಕಾಗಿದೆ.

ರಾಜೀವ್ ಚ೦ದ್ರಶೇಖರ್
ಸ೦ಸತ್ ಸದಸ್ಯರು, ರಾಜ್ಯಸಭೆ
[email protected]
www.rajeev.in

English summary
List of Top priorities released by the Prime Minister's Office defines a framework and specific steps that Narendra modi-led government plans to take to pull the country out of the morass in which UPA left it. There is need to go beyond the directional statements in the top 10 priorities to implement using technology writes Rajya Ssabh MP Rajeev Chandra Shekar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X