ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶದಲ್ಲಿದ್ದುಕೊಂಡೇ ಬೆಂಗಳೂರು ಮನೆಗೆ ನುಗ್ಗಿದ ಕಳ್ಳನನ್ನು ಹಿಡಿದ ಟೆಕ್ಕಿ

|
Google Oneindia Kannada News

ಬೆಂಗಳೂರು, ಜೂನ್ 16: ಮನೆಯಲ್ಲಿ ಕಳ್ಳ ಬಂದರೂ ಎಲ್ಲವನ್ನೂ ದೋಚಿಕೊಂಡು ಹೋದರೂ ಗೊತ್ತೇ ಆಗುವುದಿಲ್ಲ. ಹಾಗಿರುವಾಗ ವಿದೇಶದಲ್ಲಿದ್ದುಕೊಂಡೇ ಎಂಜಿನಿಯರ್ ಒಬ್ಬರು ಕಳ್ಳನನ್ನು ಹಿಡಿದಿದ್ದಾರೆ.

ಎಂಜಿನಿಯರ್ ಅಮೆರಿಕದಲ್ಲಿ ಕುಳಿತೇ ಬೆಂಗಳೂರಿನ ತನ್ನ ಮನೆಗೆ ನುಗ್ಗಿದ್ದ ಕಳ್ಳನನ್ನು ಪೊಲೀಸರ ಬಲೆಗೆ ಬೀಳಿಸಿದ್ದಾರೆ.ತಡರಾತ್ರಿ 3.25ರಲ್ಲಿ ನಾಗವಾರದ ಮಾನ್ಯತಾ ಟೆಕ್‌ಪಾರ್ಕ್ ರಸ್ತೆಯ ಸಿವಿಲ್ ಎಂಜಿನಿಯರ್ ಪಾರ್ಥಸಾರಥಿ ಮನೆಯಲ್ಲಿ ನಡೆದಿರುವ ಇಂಟರೆಸ್ಟಿಂಗ್ ಘಟನೆ ಇದು.

ಟೆರೇಸ್‌ನಿಂದ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದವನ ಸೆರೆ ಟೆರೇಸ್‌ನಿಂದ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದವನ ಸೆರೆ

ಪಾರ್ಥಸಾರಥಿ ಅವರ ಇಬ್ಬರು ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಪತ್ರನ ಮನೆಗೆ ಕೆಲ ದಿನಗಳ ಹಿಂದೆ ಹೋಗಿದ್ದರು. ಇದಕ್ಕೂ ಮೊದಲು ಮನೆಯಲ್ಲಿ ಮೋಷನ್ ಸೆನ್ಸರ್ ಮತ್ತು ಸಿಸಿ ಕ್ಯಾಮರಾ ಅಳವಡಿಸಿದ್ದರು.

Techie succeeded to catch the thief by sitting in US

ಬೆಳಗಿನ ಜಾವ ಅಪರಿಚಿತ ಚಲನವಲನ ಪತ್ತೆ ಮಾಡಿದ ಮೋಷನ್ ಸೆನ್ಸರ್ ಪಾರ್ಥಸಾರಥಿ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ತಕ್ಷಣ ಎಚ್ಚೆತ್ತ ಅವರು ಬೆಂಗಳೂರಿನ ತಮ್ಮ ಮನೆ ಸಿಸಿ ಕ್ಯಾಮರಾವನ್ನು ರಿಮೋಟ್ ಆಕ್ಸಿಸ್ ಮಾಡಿ ವೀಕ್ಷಣೆ ಮಾಡಿದಾಗ ಇಬ್ಬರು ಅಪರಿಚಿತರು ಮನೆ ಒಳಗೆ ಪ್ರವೇಶಿಸಿ ಕಳ್ಳತನಕ್ಕೆ ಇಳಿದಿರುವುದು ಪತ್ತೆಯಾಗಿದೆ.

ಪಾರ್ಥಸಾರಥಿ ಕಳೆದ ಬಾರಿ ಸಿಂಗಾಪುರಕ್ಕೆ ಹೋಗಿದ್ದಾಗಲೂ ಮನೆಯಲ್ಲಿ ಕಳ್ಳತನವಾಗಿತ್ತು. ಆಗ ಅವರು ಅಷ್ಟು ಸ್ಮಾರ್ಟ್ ಆಗಿರಲಿಲ್ಲ. ಸಿಂಗಾಪುರ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಮರಳಿ ಬರಬೇಕಾಗಿತ್ತು.

English summary
Techie helped the police to catch the theft by red handed by sitting in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X