ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ಪತ್ರೆ ನಿರ್ಲಕ್ಷ್ಯದಿಂದ ಕೋಮಾದಲ್ಲಿರುವ ಪತ್ನಿ ಉಳಿಸಲು ಟೆಕ್ಕಿಯ ಹೋರಾಟ

|
Google Oneindia Kannada News

ಬೆಂಗಳೂರು, ಜನವರಿ 24: ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಒಳಗಾಗಿ ಕೋಮಾ ಸೇರಿರುವ ಪತ್ನಿಯನ್ನು ಉಳಿಸಿಕೊಳ್ಳಲು ಟೆಕ್ಕಿ ಹೋರಾಟ ನಡೆಸುತ್ತಿದ್ದಾರೆ.

ಇವರ ಹೋರಾಟ ಸಮಾಜದ ನಡುವೆ ಅಲ್ಲ ಆಸ್ಪತ್ರೆ ಮತ್ತು ಅವರ ನಡುವೆ, ಅಷ್ಟಕ್ಕೂ ಅವರ ಪತ್ನಿಗೆ ಏನಾಗಿತ್ತು ಎನ್ನುವುದನ್ನು ಮುಂದೆ ಓದಿ..

ಕಳೆದ ಐದು ವರ್ಷಗಳ ಹಿಂದೆ ಅಂದರೆ 2015ರ ಜನವರಿ 3 ರಂದು ನಡೆದ ಘಟನೆ ಇದಾಗಿದೆ. ಟೆಕ್ಕಿ ರಿಜೇಶ್ ನಾಯರ್ ಪತ್ನಿ ಪೂನಂಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಟೆಕ್ಕಿಯೊಬ್ಬರು ದಿನಕ್ಕೆ 8 ಗಂಟೆ ಸ್ನಾನ ಮಾಡ್ತಾರೆ : ಏನಿದು ಸಮಸ್ಯೆ? ಟೆಕ್ಕಿಯೊಬ್ಬರು ದಿನಕ್ಕೆ 8 ಗಂಟೆ ಸ್ನಾನ ಮಾಡ್ತಾರೆ : ಏನಿದು ಸಮಸ್ಯೆ?

ಹೊಟ್ಟೆ ನೋವಿಗೆ ಏನೇನೋ ಕಾರಣಕೊಟ್ಟು ಕೊನೆಗೆ ಆಪರೇಷನ್ ಕೂಡ ಮಾಡಿದ್ದರು. ಮೋಷನ್ ತೊಂದರೆ ಎಂದೆಲ್ಲಾ ಸಬೂಬು ಹೇಳಿದ್ದರು.

Techie Struggle For 5 Years To Save His Wife In A Coma

ಆಸ್ಪತ್ರೆಗೆ ಪೂನಂ ಬರುತ್ತಿದ್ದಂತೆ ಚೆಕ್ ಮಾಡಿದ್ದ ವೈದ್ಯರು ಹೊಟ್ಟೆ ನೋವಿಗೆ ಏನೇನೋ ಕಾರಣ ಎಂದು ಹೇಳಿ ಕೊನೆಗೆ ಮೋಷನ್​ನಲ್ಲಿ ಸಮಸ್ಯೆಯಾಗಿದೆ ಎಂದಿದ್ದರು. ಕೊನೆಗೆ 3.5 ಲಕ್ಷ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದರು.

ಕೊನೆಗೂ ಆಪರೇಷನ್ ನಡೆದಿತ್ತು. ಆದರೆ ಸ್ವಲ್ಪ ಸಮಯ ಆಕೆ ಚೆನ್ನಾಗಿಯೇ ಇದ್ದಳು.ಆದರೆ ಆಕ್ಸಿಜನ್ ಸಪ್ಲೈ ಕಟ್ ಆಗಿದ್ದ ಕಾರಣ ಆಕೆಗೆ ಉಸಿರಾಟ ತೊಂದರೆ ಉಮಟಾಗಿ ಕೊನೆಗೆ ಎರಡು ತಿಂಗಳು ಕೋಮಾದಲ್ಲಿ ಇರುವಂತಾಯಿತು ಎಂದು ರಿಜೇಶ್ ತಿಳಿಸಿದ್ದಾರೆ.

ಮನೆಯಲ್ಲಿದ್ದ ವಸ್ತುಗಳು, ಆಸ್ತಿ ಎಲ್ಲವನ್ನೂ ಪೂನಂಗೋಷ್ಕರ ಮಾರಾಟ ಮಾಡಿದ್ದರು. ಪೂನಂ ಆರೋಗ್ಯದಲ್ಲಿ ಚೇತರಿಕೆ ಕಾಣಲೇ ಇಲ್ಲ. ಮತ್ತೊಂದು ಆಸ್ಪತ್ರೆ ವೈದ್ಯರ ಬಳಿ ಸೆಕೆಂಡ್ ಒಪೀನಿಯನ್ ಪಡೆದಾಗ ವೈದ್ಯರ ಎಡವಟ್ಟಿನಿಂದ ಪೂನಂ ಬ್ರೈನ್ ಡ್ಯಾಮೇಜ್ ಆಗಿದೆ ಎನ್ನುವುದು ಬಹಿರಂಗಗೊಂಡಿದೆ.

ಆಕೆ ಕೋಮಾದಿಂದ ಹೊರಬರುವಷ್ಟರಲ್ಲಿ ಆಸ್ಪತ್ರೆಗೆ 86 ಲಕ್ಷ ಹಣ ಬಿಲ್ ಪಾವತಿ ಮಾಡಿಯಾಗಿತ್ತು. 25 ಲಕ್ಷ ಕೈಯಿಂದ ಹಾಕಿದ್ದ ರಿಜೇಶ್​ಗೆ ಇನ್ಷುರೆನ್ಸ್​ನಿಂದ 62 ಲಕ್ಷ ರೂ. ಸಿಕ್ಕಿತ್ತು.
2015 ರಿಂದ 2019ರವರೆಗೆ 4 ಕೋಟಿ ರೂ.ಗೂ ಹೆಚ್ಚಿನ ಬಿಲ್‌ ಆಗಿದೆ. ಈಗಲೂ ನ್ಯಾಯಕ್ಕಾಗಿ, ತನ್ನ ಹೆಂಡತಿಯ ಆರೋಗ್ಯ ಸುಧಾರಿಸಲಿ ಅಂತ ಪ್ರತಿನಿತ್ಯ ರಿಜೇಶ್ ಅಲೆಯುತ್ತಿದ್ದಾರೆ. ಎಲ್ಲವನ್ನು ಮಾರಿಕೊಂಡಿರೋ ರಿಜೇಶ್ ಒಂದು ಹೊತ್ತು ಊಟಕ್ಕಾಗಿ ಪರದಾಡುತ್ತಿದ್ದಾರೆ.

ಲಕ್ಷ-ಲಕ್ಷ ಬಿಲ್ ಕಟ್ಟಿಸಿಕೊಂಡ ಆಸ್ಪತ್ರೆ ಕೊನೆಗೆ ಇನ್ನು ಇಲ್ಲಿರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದರು. ಕೊನೆಗೆ ಪೊಲೀಸರಿಗೆ ದೂರು ಕೊಟ್ಟಿದ್ದರು. ಏನೂ ಪ್ರಯೋಜನವಾಗಿರಲಿಲ್ಲ.

ಕಳೆದ ಮೂನಾಲ್ಕು ವರ್ಷಗಳಿಂದ ಓಲ್ಡ್ ಏರ್​ಪೋರ್ಟ್​ ರಸ್ತೆಯ ಖಾಸಗಿ ಆಸ್ಪತ್ರೆಯ 2ನೇ ಮಹಡಿಯ ಐಸಿಯುನಲ್ಲಿ ಪೂನಂಗೆ ಚಿಕಿತ್ಸೆ ಕೊಡಲಾಗುತ್ತಿದೆ. 86 ಲಕ್ಷ ಬಿಲ್ ಕಟ್ಟಿದ ಮೇಲೆ ಸೋತ ಗಂಡ ರಿಜೇಶ್ ಇನ್ನು ಮುಂದೆ ಹಣ ಕಟ್ಟಲು ಸಾಧ್ಯವಿಲ್ಲ ಎಂದಿದ್ದರು.

English summary
Techie is fighting to save his wife from a coma after being hospitalized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X