ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೇಯಸಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಟೆಕ್ಕಿ ಪೊಲೀಸರ ಅತಿಥಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಸಿಹಿ ಅಥವಾ ಕಹಿ ನೆನಪುಗಳು ನೆನಪಾಗಿಯೇ ಇರಲಿ ಅದಕ್ಕೆ ಅಕ್ಷರ ರೂಪ ಬೇಡ.

ಹಳೆಯ ಜೀವನ ಅಥವಾ ಹಳೆಯ ನೆನಪುಗಳನ್ನು ಅಲ್ಲಿಯೇ ಬಿಟ್ಟು ಮುನ್ನಡೆದರೆ ಉತ್ತಮ ಇಲ್ಲವಾದಲ್ಲಿ ಅದು ನಿಮ್ಮ ಇಡೀ ಜೀವನವನ್ನೇ ಹಾಳುಮಾಡಬಹುದು ಎನ್ನುವದಕ್ಕೆ ಈ ಘಟನೆಯೇ ಉದಾಹರಣೆ.

ಇಬ್ಬರು ಟೆಕ್ಕಿಗಳು ಮ್ಯಾಟ್ರಿಮೊನಿ ಮೂಲಕ ಪರಿಚಿತರಾಗುತ್ತಾರೆ, ಬಳಿಕ ಅವರ ಹಳೆಯ ಜೀವನದ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ ಅಲ್ಲಿಂದಲೇ ತೊಂದರೆಗಳು ಪ್ರಾರಂಭವಾಗುತ್ತೆ.

ಮನೆಗೆ ಆಹ್ವಾನಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಟೆಕ್ಕಿ ಅರೆಸ್ಟ್ ಮನೆಗೆ ಆಹ್ವಾನಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಟೆಕ್ಕಿ ಅರೆಸ್ಟ್

ಬೆಳ್ಳಂದೂರಿನ ಮಹಿಳಾ ಟೆಕ್ಕಿ ತನ್ನ ಹಳೆಯ ಬದುಕಿನ ಕುರಿತು ಎಲ್ಲಾ ಮಾಹಿತಿಯನ್ನೂ ಮ್ಯಾಟ್ರಿಮನಿ ಮೂಲಕ ಪರಿಚಿತವಾದ ಟೆಕ್ಕಿಯ ಬಳಿ ಹಂಚಿಕೊಳ್ಳುತ್ತಾಳೆ, ಬಳಿಕ ಆಕೆಯ ಕೆಲವು ಖಾಸಗಿ ಫೋಟೊಗಳನ್ನು ಇಟ್ಟುಕೊಂಡು ಟೆಕ್ಕಿ ಬ್ಲಾಕ್‌ಮೇಲ್ ಮಾಡಲು ಆರಂಭಿಸುತ್ತಾನೆ.

Techie started blackmailing his lover with intimate photo

ಈ ಕುರಿತು ಮಹಿಳಾ ಟೆಕ್ಕಿ ನೀಡಿರುವ ದೂರಿನ ಮೇರೆಗೆ ಮಿಶ್ರಾ ಅವರನ್ನು ಬಂಧಿಸಲಾಗಿದೆ. ಅವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದರು ಕೆಲದಿನಗಳ ಕಾಲ ಲಿವಿಂಗ್ ಟುಗೆದರ್‌ನಲ್ಲಿದ್ದರು, ಆಕೆ ಕೆಲಸ ಬಿಡುವಂತೆ ಆತ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಪೊಲೀಸರು ಮಿಶ್ರಾ ಮೊಬೈಲ್ ತೆಗೆದುಕೊಂಡು ಪೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಏಪ್ರಿಲ್ 2018ರಲ್ಲಿ ಆತ ಪರಿಚಯವಾಗಿದ್ದ, ಇಬ್ಬರ ಮನೆಯವರು ಒಪ್ಪಿದ ಮೇಲೆಯೇ ಮ್ಯಾಟ್ರಿಮೊನಿಯಲ್ಲಿ ಫೋಟೊಗಳನ್ನು ಹಾಕಲಾಗಿತ್ತು.

ಗೆಳತಿಯೊಂದಿಗೆ ಕಲಹ: ಲಿವಿಂಗ್ ಟುಗೆದರ್ ನಲ್ಲಿದ್ದ ಟೆಕ್ಕಿ ಆತ್ಮಹತ್ಯೆ ಗೆಳತಿಯೊಂದಿಗೆ ಕಲಹ: ಲಿವಿಂಗ್ ಟುಗೆದರ್ ನಲ್ಲಿದ್ದ ಟೆಕ್ಕಿ ಆತ್ಮಹತ್ಯೆ

ಪರಿಚಯವಾದ ಬಳಿಕ ಹಳೆಯ ಲವ್ ಲೈಫ್‌ ಬಗ್ಗೆ ಆಕೆ ಹೇಳಿಕೊಂಡಿದ್ದಳು ಅಷ್ಟಾದ ಮೇಲೂ ಆಕೆಯನ್ನೇ ಮದುವೆಯಾಗುವುದಾಗಿ ನಂಬಿಸಿದ್ದ ಬಳಿಕ ಆಕೆಯ ಖಾಸಗಿ ಫೋಟೊಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

English summary
Techies, who met on matrimony site, started discussing her past love life; that's when things went wrong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X