ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿಯೊಬ್ಬರು ದಿನಕ್ಕೆ 8 ಗಂಟೆ ಸ್ನಾನ ಮಾಡ್ತಾರೆ : ಏನಿದು ಸಮಸ್ಯೆ?

|
Google Oneindia Kannada News

ಬೆಂಗಳೂರು, ಜನವರಿ 15: ದಿನದಲ್ಲಿ 8 ಗಂಟೆ ಸ್ನಾನ ಮಾಡುತ್ತಿದ್ದ ಟೆಕ್ಕಿಯ ಜೊತೆ ಇರಲಾರದೆ ಪತ್ನಿ ವಿಚ್ಛೇದನ ನೀಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಟೆಕ್ಕಿ ತಾಯಿಯೊಂದಿಗೆ ನೆಲೆಸಿದ್ದಾರೆ, ಕಳೆದ ಐದಾರು ವರ್ಷದಿಂದ ಸ್ನಾನದ ರೋಗದಿಂದ ಬಳಲುತ್ತಿದ್ದಾರೆ. ವರ್ಷದ ಹಿಂದೆ ಯಲಹಂಕದ ಪೀಪಲ್ ಟ್ರೀ ಮಾರ್ಗ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಇದೀಗ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತವಾಗಿದ್ದಾರೆ.

ಪ್ಲಾಸ್ಟಿಕ್ ಕೈವಸು ಬಳಕೆ: ಬೇರೆಯವರು ಮುಟ್ಟಿದ ಬಾಗಿಲನ್ನು ಮುಟ್ಟಲು ಭಯ ಪಡುತ್ತಿದ್ದ ಟೆಕ್ಕಿ, ಕೈಗೆ ಪ್ಲಾಸ್ಟಿಕ್ ಗವಸು ಧರಿಸುತ್ತಿದ್ದರು. ಸ್ನಾನಕ್ಕೆಂದು ಶೌಚಾಲಯಕ್ಕೆ ಹೋಗುವಾಗ ಬಾಗಿಲು ಮುಟ್ಟಲು ಒಂದು ಪ್ಲಾಸ್ಟಿಕ್, ಶವರ್ ಮುಟ್ಟಲು ಮತ್ತೊಂದು ಪ್ಲಾಸ್ಟಿಕ್ ಕೈಗವಸು ಬಳಸುತ್ತಿದ್ದರು.

Techie Spends 8 Hour Bathing Every Day

ಈ ಟೆಕ್ಕಿಗೆ ದೇಹದಲ್ಲಿ ಗಲೀಜು ಇದೆ ಎಂದು ಪದೇ ಪದೇ ಸ್ನಾನ ಮಾಡುತ್ತಿದ್ದರು. ಪ್ರತಿ ಬಾರಿ ಸ್ನಾನಕ್ಕೆ ಒಂದು ಸೋಪು ಬೇಕಾಗುತ್ತಿತ್ತು. ಮಗನ ಸ್ನಾನದ ಗೀಳು ಕಂಡು ಪೋಷಕರು ಕೂಡ ದಂಗಾಗಿದ್ದರು.

ಅವರು ಆಫೀಸಿಗೆ ಹೋದರೂ ಅಲ್ಲಿಯೂ ಸರಿಯಾಗಿ ಕೆಲಸ ಮಾಡಲಾಗದೆ ಪದೇ ಪದೇ ಟಾಯ್ಲೆಟ್‌ಗೆ ಹೋಗಿ ಡೆಟಾಲ್ ಹಾಕಿಕೊಂಡು ಕೈ ತೊಳೆಯುತ್ತಿದ್ದರು.

English summary
An obsession to literally overuse soap has cost a Bengaluru IT professional a lot. A divorce, loss of social life and skin conditions are just a few of the side effects he has faced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X