ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿಗೆ ಕರಣಂ ಪವನ್ ರಚನೆಯ ನಾಟಕಗಳ ಡಬ್ಬಲ್ ಧಮಾಕಾ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24: ಈ ದೀಪಾವಳಿಗೆ ನಾಟಕಗಳ ಡಬ್ಬಲ್ ಧಮಾಕಾ, ಪರಿಸರ ಮಾಲಿನ್ಯ ಮುಕ್ತ ದೀಪಾವಳಿಯನ್ನು ಆಚರಿಸಲು ಬನ್ನಿ ಹನುಮಂತನಗರದ ಕೆಂಗಲ್ ಹನುಮಂತಯ್ಯ ಕಲಾಸೌಧಕ್ಕೆ, ಕರಣಂ ಪವನ್ ಪ್ರಸಾದ್ ರಚನೆಯ ಎರಡು ನಾಟಕಗಳು, ಎರಡು ದಿನ, ಎರಡೆರಡು ಪ್ರದರ್ಶನಗಳು, ಒಂದೇ ವೇದಿಕೆ, ಒಂದೇ ತಂಡ..... ಅದು ನಿಮ್ಮ'ಅಶ್ವಘೋಷ ಥಿಯೇಟರ್ ಟ್ರಸ್ಟ್' ಎಂದು ಟ್ರಸ್ಟಿನ ಕಾರ್ಯದರ್ಶಿ ನಂದೀಶ್ ದೇವ್ ತಿಳಿಸಿದ್ದಾರೆ.

ನಾಟಕಗಳು
ನಾಟಕ: ಐತಿಹಾಸಿಕ, ಹಾಸ್ಯ ಮಿಶ್ರಿತ, ಸಂಗೀತಮಯ ನಾಟಕ "ಪುರಹರ".
ದಿನಾಂಕ, ದಿನ: ಅಕ್ಟೋಬರ್ 26 ಶನಿವಾರ
ಸಮಯ: ಸಂಜೆ 4:30 ಮತ್ತು 7:30ಕ್ಕೆ

ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ 'ನನ್ನಿ'ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ 'ನನ್ನಿ'

ಪುರಹರ ಎಂಬ ನಾಟಕವು ದೇವಪುರಿ ಎಂಬ ಊರಿನಲ್ಲಿ ಶುರು ವಾಗುತ್ತದೆ. ಶೈವ ಮತ್ತು ವೈಷ್ಣವ ಪಂಥದವರು ಹೆಚ್ಚಾಗಿ ಇರುವ ಊರಿನಲ್ಲಿ ಅವರವರೇ ಒಬ್ಬರಿಗೆ ಇನ್ನೊಬ್ಬರನ್ನು ಕಂಡರೆ ಆಗದಷ್ಟು ವೈರತ್ವ ಇರುತ್ತದೆ. ಒಬ್ಬರು ಇನ್ನೊಬ್ಬರ ದೇವಾಲಯವನ್ನು ಪ್ರವೇಶ ಮಾಡದಿರುವಷ್ಟು ಹಗೆತನ ಇರುತ್ತದೆ. ಇದೇ ಸಮಯದಲ್ಲಿ ಆ ಊರಿಗೆ ಸುಲ್ತಾನರ ಆಡಳಿತ ಶುರುವಾಗುತ್ತದೆ. ಅಲ್ಲಿಗೆ ಅರಬ್ ಆದಿಲ್ ಶಾ ಎಂಬುವನು ಮನ್ಸಬ್ದಾರನಾಗಿ ಬರುತ್ತಾನೆ.

ದೀಪಾವಳಿಗೆ ಕರಣಂ ಪವನ್ ರಚನೆಯ ನಾಟಕಗಳ ಡಬ್ಬಲ್ ಧಮಾಕಾ

ದೀಪಾವಳಿಗೆ ಕರಣಂ ಪವನ್ ರಚನೆಯ ನಾಟಕಗಳ ಡಬ್ಬಲ್ ಧಮಾಕಾ

ಆ ಊರಿನಲ್ಲಿ ಇಬ್ಬರ ನಡುವೆ ಇರುವ ಅಸಮಾನತೆ ಮತ್ತು ಅಸ್ಪೃಷ್ಯತೆಯನ್ನು ಕಂಡು ಇಬ್ಬರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಾನೆ. ಇದರ ಮುನ್ನುಡಿಯಾಗಿ ಆತ ಎರಡು ದೇವರನ್ನು ಸೇರಿಸಿ ಒಂದು ದೇವಾಲಯವನ್ನು ನಿರ್ಮಿಸುವ ಆಲೋಚನೆಯಲ್ಲಿ ತೋಡಗುತ್ತಾನೆ. ಎರಡು ದೇವರ ವಿಗ್ರಹಗಳಿರುವ ದೇವಸ್ಥಾನವನ್ನು ನಿರ್ಮಿಸಿದರೆ ಎರಡು ಪಂಥದವರು ಆ ದೇವಾಲಯಕ್ಕೆ ಬಂದು ಇಬ್ಬರಲ್ಲೂ ಸಾಮರಸ್ಯ ಮತ್ತು ಸೌಹಾ‍ರ್ಧತೆಯಿಂದ ಇರಬಹುದು ಎಂದು ಮನಗಾಣುತ್ತಾನೆ.

ಈ ನಾಟಕದ ಕಥಾವಸ್ತು ತುಂಬಾ ನವೀನ ವಾದುದು

ಈ ನಾಟಕದ ಕಥಾವಸ್ತು ತುಂಬಾ ನವೀನ ವಾದುದು

ಈ ನಾಟಕದ ಕಥಾವಸ್ತು ತುಂಬಾ ನವೀನ ವಾದುದು ಮತ್ತು ಹಿಂದೆ ಎಂದು ಬಂದಿರದುದು. ಈ ನಾಟಕವು ಹಿಂದುಗಳ ಒಳಪಂಗಡಗಳಲ್ಲಿ ಇರುವ ಅನೇಕ ಒಡಕುಗಳನ್ನು ಸರಿಪಡಿಸುವಲ್ಲಿ ಬೆಳಕು ಚೆಲ್ಲುತ್ತದೆ. ಈ ನಾಟಕದ ಮೂಲಕ ನಾವು ಎಲ್ಲ ಧರ್ಮಗಳನ್ನು, ಜಾತಿಗಳನ್ನು ಗೌರವಿಸಬೇಕು ಎಂಬುದನ್ನು ತಿಳಿದುಕೊಳ್ಳಬಹುದು. ಈ ನಾಟಕವನ್ನು ರಂಗಭೂಮಿ ಮತ್ತು ಕಾದಂಬರಿಕಾರ ಕರಣಂ ಪವನ್ ಪ್ರಸಾದ್ ರಚಿಸಿ, ನಿರ್ದೇಶನವನ್ನು ಮಾಡಿದ್ದಾರೆ. ಅವರ ಇತರೆ ನಾಟಕಗಳು ಬೀದಿಬಿಂಬ ರಂಗದ ತುಂಬ, ಭವ ಎನಗೆ ಹಿಂಗಿತು. ಕಾದಂಬರಿಗಳು ಕರ್ಮ, ನನ್ನಿ ಮತ್ತು ಗ್ರಸ್ತ.

ಅಕ್ಟೋಬರ್ 27 ಭಾನುವಾರ

ಅಕ್ಟೋಬರ್ 27 ಭಾನುವಾರ

ಸಂಜೆ 4:30 ಮತ್ತು 7:30ಕ್ಕೆ
ರಾಜಕೀಯ, ಸಿನೆಮಾ, ಸಂಸಾರ, ಪ್ರೀತಿ, ಕೆಲಸ, ಟಿ.ವಿ ಚಾನೆಲ್ಲುಗಳು ಮತ್ತು ನಾಟಕದೊಳಗೆ ನಾಟಕಗಳಿರುವ ಭರಪೂರ ಮನರಂಜನೆಯ ವಿಡಂಬನಾತ್ಮಕ ಹಾಸ್ಯ ನಾಟಕ "ಬೀದಿ ಬಿಂಬ ರಂಗದ ತುಂಬ".

ಟಿಕೇಟುಗಳು ದೊರೆಯುವ ಸ್ಥಳ: ಕೆ ಹೆಚ್ ಕಲಾಸೌಧ, ಹನುಮಂತನಗರ
ಬುಕ್ ಮೈ ಶೋ ನಲ್ಲಿ ಟಿಕೆಟ್ ಗಳು ಲಭ್ಯ, ದರ ರೂ.100/-

ನಿರ್ವಹಣೆ: ನಂದೀಶ್ ದೇವ್,ಕಾರ್ಯದರ್ಶಿ, ಅಶ್ವಘೋಷ ಥಿಯೇಟರ್ ಟ್ರಸ್ಟ್

ನಿರ್ವಹಣೆ: ನಂದೀಶ್ ದೇವ್,ಕಾರ್ಯದರ್ಶಿ, ಅಶ್ವಘೋಷ ಥಿಯೇಟರ್ ಟ್ರಸ್ಟ್

ಬೆಳಕು: ಮನಸ್ ಸಂಪತ್
ಪ್ರಸಾದನ: ಮೋಹನ್ ಕುಮಾರ್
ರಂಗ ಸಜ್ಜಿಕೆ: ಮನಸ್ ಸಂಪತ್
ಸಂಗೀತ ನಿರ್ವಹಣೆ: ಹರಿಪ್ರಸಾದ್ ಮತ್ತು ತಂಡ

English summary
Team Ashvagosha will be staging Two Plays by Karanam Pavan Prasad Beedi Bimba Rangada Thumba, Purahara which will be staged at K.H Kala Soudha, Hanumantha Nagar, Bengaluru on Oct 26 and 27, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X