ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಕೆಲಸದಿಂದ ಮುಕ್ತಿ ನೀಡಿ: ಸಚಿವರಿಗೆ ಶಿಕ್ಷಕರ ಪತ್ರ

|
Google Oneindia Kannada News

ಬೆಂಗಳೂರು, ಜುಲೈ 8: ಕೊರೊನಾ ಕೆಲಸದಿಂದ ತಮಗೆ ಮುಕ್ತಿ ನೀಡಿ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ರಿಗೆ ಶಿಕ್ಷಕರು ಪತ್ರ ಬರೆದಿದ್ದಾರೆ.

ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ತಾಲೂಕಿನ ನೂರಾರು ಶಿಕ್ಷಕರನ್ನು ಕೊರೊನಾ ಕೆಲಸಕ್ಕೆ ನೇಮಿಸಲಾಗಿದೆ. ಅಂದರೆ, ಶಿಕ್ಷಕರು ಮನೆ ಮನೆಗೆ ಹೋಗಿ ಸೋಂಕಿತರ ಸಂಪರ್ಕ ಹೊಂದಿರುವವರ ಬಗ್ಗೆ ಮಾಹಿತಿ ಪಡೆಯಬೇಕಿದೆ. ಆದರೆ, ಇದನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಪ್ರಶ್ನಿಸಿದ್ದಾರೆ.

ಕೊರೊನಾ ವಾರಿಯರ್ಸ್‌ಗೆ ಧೈರ್ಯ ತುಂಬಿದ ಸುರೇಶ್ ಕುಮಾರ್ಕೊರೊನಾ ವಾರಿಯರ್ಸ್‌ಗೆ ಧೈರ್ಯ ತುಂಬಿದ ಸುರೇಶ್ ಕುಮಾರ್

ಚಂದ್ರಶೇಖರ್ ನುಗ್ಲಿ ಬಳಿಕ ಶಿಕ್ಷಕರು ಸಹ ಈ ಬಗ್ಗೆ ಸುರೇಶ್ ಕುಮಾರ್‌ರಿಗೆ ಪತ್ರ ಬರೆದಿದ್ದಾರೆ. ಕೊರೊನಾ ಕೆಲಸಕ್ಕೆ ಮುಕ್ತಿ ನೀಡುವಂತೆ ಮನವಿ ಮಾಡಿದ್ದಾರೆ. ಕೋವಿಡ್ ಸಂಬಂಧಿತ ಸೇವೆಗಳನ್ನು ಸಲ್ಲಿಸುವ ತಾಂತ್ರಿಕತೆಗಳ ಬಗ್ಗೆ ತಮಗೆ ತಿಳಿದಿಲ್ಲ ಎಂದು ಕರ್ನಾಟಕ ಸರ್ಕಾರಿ ಶಿಕ್ಷಕರ ಸಂಘ ತಿಳಿಸಿದೆ.

Teachers Written Letter to Education Minister Suresh Kumar to Free Us From Corona Work

ಇತ್ತೀಚಿಗೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಶಿಕ್ಷಕರು ಮನೆ ಮನೆಗೆ ಹೋಗಿ ಸೋಂಕಿತ ಸಂಪರ್ಕದ ಮಾಹಿತಿ ಪಡೆಯುತ್ತಿದ್ದು, ತಮಗೂ ಸೋಂಕು ಯಾವ ಸಮಯದಲ್ಲಿ ಬೇಕಾದರೂ ಬರಬಹುದು ಎಂಬ ಆತಂಕದಲ್ಲಿ ಇದ್ದಾರೆ. ಸಮೀಕ್ಷೆ ಜೊತೆಗೆ ಕ್ಷಯರೋಗಿಗಳ ಸಮೀಕ್ಷೆನ್ನೂ ಕೂಡ ಮಾಡಬೇಕಾಗಿದೆ.

ಇಷ್ಟು ದಿನ ಸರ್ಕಾರ ನಿರ್ವಹಿಸಿದ ಕೆಲಸ ಮಾಡಿದ್ದು, ಈಗ ಕೊರೊನಾ ಭೀತಿ ಹೆಚ್ಚಾಗಿದೆ. ಹೀಗಾಗಿ, ಈ ಕೆಲಸದಿಂದ ತಮಗೆ ಶಿಕ್ಷಕರು ಮುಕ್ತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

English summary
Teachers written letter to primary and secondary education minister suresh kumar to free us from corona work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X