ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಪ್ರಧಾನಿ: ಟೀ ಮಾರುವವರು ಏನಂತಾರೆ?

By Ashwath
|
Google Oneindia Kannada News

ಬೆಂಗಳೂರು, ಮೇ.28: ಚಹಾ ಮಾರಿ ದೇಶದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ ನರೇಂದ್ರ ಮೋದಿಯವರ ಬಗ್ಗೆ ಚಹಾ ಮಾರಾಟಗಾರರು ಬಹಳ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

"ಮೋದಿ ಪ್ರಧಾನಿ ಆಗಿದ್ದಕ್ಕೆ ತುಂಬಾ ಸಂತೋಷ ಆಗುತ್ತಿದೆ. ಮೋದಿ ಚಹಾ ಮಾರುತ್ತಿರುವ ವಿಚಾರ ನಾಲ್ಕು ತಿಂಗಳ ಹಿಂದೆ ಗೊತ್ತಾಯಿತು. ನಮ್ಮ ಸ್ನೇಹಿತರಿಗೆ ಇಷ್ಟವಾಗಿದೆ. ನಾವು ಮೂರು ಮಂದಿ ಇಲ್ಲಿ ಚಹಾ ಮಾರುತ್ತಿದ್ದೇವೆ. ಫ್ರೀ ಆದಾಗ ಕೆಲವೊಮ್ಮೆ ಮೋದಿ ಬಗ್ಗೆ ಮಾತನಾಡಿದ್ದೇವೆ" - ರಾಜು, ಲಾಲ್‌ಬಾಗ್‌ ಬೆಂಗಳೂರು‌

"ಮೋದಿ ಯಾರು ಅಂತ ಗೊತ್ತಿರಲಿಲ್ಲ. ನನ್ನ ಮಕ್ಕಳು ಶಾಲೆಯಲ್ಲಿ ಪೇಪರ್‌ ಓದಿ ಮೋದಿ ಈ ಹಿಂದೆ ಚಹಾ ಮಾರುತ್ತಿದ್ದರು ಅಂತ ಹೇಳಿದರು. ಗುಜರಾತ್‌ನಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ ಅಂತ ತುಂಬಾ ಜನ ಹೇಳುತ್ತಿದ್ದಾರೆ. ಅದೇ ರೀತಿಯಾಗಿ ದೇಶಕ್ಕೆ ಒಳ್ಳೆಯ ಆಡಳಿತ ನೀಡಲಿ" -ಶ್ರೀನಿವಾಸ, ವಸಂತಪುರ, ಬೆಂಗಳೂರು[ಮೋದಿ ಸರ್ಕಾರದ ಬಗ್ಗೆ ಜನರ ನಿರೀಕ್ಷೆಗಳೇನು?]

"ಮೋದಿ ಒಳ್ಳೆಯ ಆಡಳಿತ ನೀಡುತ್ತಾರೋ ಗೊತ್ತಿಲ್ಲ. ಚಹಾ ಮಾರುವವರು ಪ್ರಧಾನಿ ಆಗಿದ್ದಾರೆ ಎನ್ನುವುದೇ ಒಂದು ಸಂತೋಷ" - ಮುನಿಯಪ್ಪ, ಜಯನಗರ,ಬೆಂಗಳೂರು

 Tea vendors

"ಮೋದಿ ನನ್ನ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ. ದೇಶವನ್ನು ಅಭಿವೃದ್ಧಿ ಮಾಡಬಹುದು" - ಹನುಮಂತು, ಕಾರ್ಪೊರೇಷನ್‌‌ ಸರ್ಕ‌ಲ್‌,ಬೆಂಗಳೂರು

ಬಿಜೆಪಿಯವರು ಚಯ್‌‌ ಪೇ ಚರ್ಚೆ‌ಯಿಂದಾಗಿ ನನಗೆ ಲಾಭವಾಗಿದೆ. ಮೋದಿ ಅಭಿಮಾನಿಗಳು ಈ ಹೆಸರು ಹೇಳಿ ಶಾಪ್‌ನಲ್ಲಿ ಟೀ ಕುಡಿಯುತ್ತಾ ಮೋದಿ, ಕಾಂಗ್ರೆಸ್‌ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು. ಮೋದಿಯವರು ಗುಜರಾತ್‌ನ್ನು ಹೇಗೆ ಅಭಿವೃದ್ಧಿ ಮಾಡಿದ್ದರೋ ಅದೇ ರೀತಿಯಾಗಿ ದೇಶವನ್ನು ಅಭಿವೃದ್ಧಿ ಮಾಡುತ್ತಾರೆ. -ಮಂಜುನಾಥ, ಟೀ ಅಂಗಡಿ ಮಾಲೀಕ ಸಂಪಾಜೆ(ಸುಳ್ಯ)

ಬೆಂಗಳೂರಿನಲ್ಲಿ ಇನ್ನು ಐದು ಜನರನ್ನು ಒನ್‌ ಇಂಡಿಯಾ ಕನ್ನಡ ಮಾತನಾಡಿಸಿದೆ. ನಮಗೆ ರಾಜಕೀಯಕ್ಕೆ ಸಂಬಂಧವಿಲ್ಲ. ನಮಗೇನು ಗೊತ್ತಿಲ್ಲ ಅಂತ ಇವರು ಹೇಳಿದ್ದಾರೆ.

English summary
As Narendra Modi, who began from humble roots as tea vendor in a railway station in Gujarat, takes oath as India's 15th prime minister Monday, tea-sellers are eyeing the occasion with a feeling of joy, hope and even kinship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X