ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಊರ್ಜಾ' ಬಳಿಕ ಮೆಟ್ರೋ ಸುರಂಗ ಕೊರೆದು ಹೊರಬಂದ 'ವಿಂದ್ಯಾ'

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15; 'ವಿಂದ್ಯಾ' ಹೆಸರಿನ ಟಿಬಿಎಂ ಯಂತ್ರ ಕಂಟೋನ್ಮೆಂಟ್ ಮತ್ತು ಶಿವಾಜಿನಗರ ನಡುವೆ ನಮ್ಮ ಮೆಟ್ರೋ ಸುರಂಗವನ್ನು ಯಶಸ್ವಿಯಾಗಿ ಕೊರೆದು ಹೊರ ಬಂದಿದೆ. ಇದೇ ಮಾರ್ಗದಲ್ಲಿ 'ಉರ್ಜಾ' ಸುರಂಗ ಮಾರ್ಗ ಪೂರ್ಣಗೊಳಿಸಿ ಸೆಪ್ಟೆಂಬರ್ 22ರಂದು ಹೊರ ಬಂದಿತ್ತು.

ಗೊಟ್ಟಿಗೆರೆ-ನಾಗವಾರ ನಡುವೆ ರೀಚ್-6 ಮಾರ್ಗ ನಿರ್ಮಾಣವಾಗುತ್ತಿದೆ. ಡೇರಿ ವೃತ್ತದಿಂದ ನಾಗವಾರ ನಡುವಿನ 13.9 ಕಿ. ಮೀ. ಸುರಂಗ ಮಾರ್ಗದ ಭಾಗವಾಗಿ ಕಂಟೋನ್ಮೆಂಟ್ ಮತ್ತು ಶಿವಾಜಿನಗರ ನಡುವೆ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.

ನಮ್ಮ ಮೆಟ್ರೋ ಸುರಂಗ ತೋಡುವಾಗ ತೆರೆದ ಹಳೆ ಬಾವಿ ಪತ್ತೆ! ನಮ್ಮ ಮೆಟ್ರೋ ಸುರಂಗ ತೋಡುವಾಗ ತೆರೆದ ಹಳೆ ಬಾವಿ ಪತ್ತೆ!

ನಮ್ಮ ಮೆಟ್ರೋ ರೀಚ್-6 ಮಾರ್ಗ ಬೆಂಗಳೂರು ದಕ್ಷಿಣದ ಗೊಟ್ಟಿಗೆರೆಯಿಂದ ಬೆಂಗಳೂರು ಉತ್ತರದ ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿದೆ. ಕಂಟೋನ್ಮೆಂಟ್ ಮತ್ತು ಶಿವಾಜಿನಗರ ನಡುವೆ ಟಿಬಿಎಂ 'ಊರ್ಜಾ' ಸುರಂಗ ಕೊರೆದಿತ್ತು. ಸಮಾನಾಂತರ ಸುರಂಗ ಮಾರ್ಗ ಕೊರೆದು ಟಿಬಿಎಂ 'ವಿಂದ್ಯಾ' ಬುಧವಾರ ಹೊರ ಬಂದಿದೆ.

ಸುರಂಗ ಕೊರೆದು ಮುಗಿಸಿದ ಊರ್ಜಾ; ಮೆಟ್ರೋ ಮಾರ್ಗದ ವಿವರ ಸುರಂಗ ಕೊರೆದು ಮುಗಿಸಿದ ಊರ್ಜಾ; ಮೆಟ್ರೋ ಮಾರ್ಗದ ವಿವರ

 TBM Vindya Completed Tunnelling From Cantonment Station To Shivajinagar

ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗ ನಿರ್ಮಾಣದಲ್ಲಿ ಒಟ್ಟು 9 ಟಬಿಯಂ ಯಂತ್ರಗಳು ತೊಡಗಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಒಂದು ತಿಂಗಳಿನಲ್ಲಿ ಮೂರು ಯಂತ್ರಗಳು ಕಾರ್ಯವನ್ನು ಪೂರ್ಣಗೊಳಿಸಿ ಹೊರಬರಲಿವೆ.

 ಬೆಂಗಳೂರು: ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ ಬೆಂಗಳೂರು: ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ

ಅಕ್ಟೋಬರ್ ಅಂತ್ಯದ ವೇಳೆಗೆ ಟಿಬಿಯಂ 'ವರದಾ' ರಾಷ್ಟ್ರೀಯ ಮಿಲಿಟರಿ ಶಾಲೆ ಯಿಂದ ಲಾಂಗ್ ಫರ್ಡ್‌ ನಿಲ್ದಾಣದ ತನಕದಸ ಸುರಂಗ ಮಾರ್ಗ ಕಾಮಗಾರಿ ಮುಗಿಸಿ ಹೊರಬರಲಿದೆ.

ಶಿವಾಜಿನಗರ-ಎಂ. ಜಿ. ರಸ್ತೆ ನಡುವೆ ಸುರಂಗ ಕೊರೆಯುತ್ತಿರುವ ಟಿಬಿಎಂ 'ಅವನಿ' ರಾಷ್ಟ್ರೀಯ ಮಿಲಿಟರಿ ಶಾಲೆ ಕಡೆ ಸುರಂಗ ಕೊರೆಯುವ ಮೊದಲು ಎಂ. ಜಿ. ರಸ್ತೆಯಲ್ಲಿ ಮುಂದಿನ ಮೂರು ತಿಂಗಳಲ್ಲಿ ಹೊರಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟಿಬಿಎಂ 'ರುದ್ರ' ಕಾರ್ಮಿಕ ಭವನದ ಸಮೀಪದಿಂದ ಸುರಂಗ ಕೊರೆಯುತ್ತಿದ್ದು, ಡೈರಿ ಸರ್ಕಲ್ ಬಳಿ ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳಲಿದೆ. ಬಳಿಕ ಇದು ಪುನಃ ಲಕ್ಕಸಂದ್ರ ಮತ್ತು ಲಾಂಗ್‌ಫರ್ಡ್ ಟೌನ್‌ ಕಡೆ ಸುರಂಗ ಕೊರೆಯುವುದನ್ನು ಮುಂದುವರೆಸಲಿದೆ.

ಸುರಂಗ ಮಾರ್ಗವೇ ಅಧಿಕ; ನಮ್ಮ ಮೆಟ್ರೋ 2ನೇ ಹಂತದಲ್ಲಿ ಸುರಂಗ ಮಾರ್ಗಗಳೇ ಅಧಿಕವಾಗಿದೆ. ಶಿವಾಜಿನಗರ-ಎಂ. ಜಿ. ರಸ್ತೆ ನಡುವೆ 'ಅವನಿ' ಮತ್ತು 'ಲವಿ' ಟಿಬಿಎಂ ಯಂತ್ರಗಳು ಸುರಂಗ ಕೊರೆಯುತ್ತಿವೆ. ಆರ್‌ಟಿ 01 ಎಂಬ ಟಿಬಿಎಂ ಯಂತ್ರ ವೆಲ್ಲಾರ ಜಂಕ್ಷನ್-ಲ್ಯಾಂಗ್‌ಫೋರ್ಡ್ ರಸ್ತೆ ನಡುವೆ ಸುರಂಗ ಕೊರೆಯುತ್ತಿದೆ. 'ಭದ್ರಾ' ಟಿಬಿಎಂ ಯಂತ್ರ ಕೆಲವು ದಿನಗಳ ಹಿಂದೆ ಟ್ಯಾನರಿ ರಸ್ತೆ-ನಾಗವಾರ ನಡುವೆ ಸುರಂಗ ಕೊರೆಯಲು ಆರಂಭಿಸಿದೆ.

ನಮ್ಮ ಮೆಟ್ರೋ 2ನೇ ಹಂತ; ನಮ್ಮ ಮೆಟ್ರೋ 2ನೇ ಹಂತದ ಯೋಜನೆ ಒಟ್ಟು 75 ಕಿ. ಮೀ. ಮಾರ್ಗವನ್ನು ಒಳಗೊಂಡಿದೆ. 61 ನಿಲ್ದಾಣಗಳು ಇದರಲ್ಲಿ ಬರುತ್ತವೆ, ಹಲವು ನಿಲ್ದಾಣ ಸುರಂಗ ಮಾರ್ಗದಲ್ಲಿಯೇ ಇರಲಿವೆ.

ನಮ್ಮ ಮೆಟ್ರೋ 1ನೇ ಹಂತದ ನೇರಳೆ ಮತ್ತು ಹಸಿರು ಮಾರ್ಗಗಳು 4 ದಿಕ್ಕುಗಳಲ್ಲಿ ಒಟ್ಟು 34.6 ಕಿ. ಮೀ. ಉದ್ದದ ವಿಸ್ತರಣೆಯನ್ನು 2ನೇ ಹಂತದ ಯೋಜನೆ ಒಳಗೊಂಡಿದೆ. ಎರಡು ಹೊಸ ಮಾರ್ಗಗಳನ್ನು ಸಹ 2ನೇ ಹಂತದ ಯೋಜನೆ ಒಳಗೊಂಡಿದೆ.

ಗೊಟ್ಟಿಗೆರೆ-ನಾಗವಾರ 21.25 ಕಿ. ಮೀ. ಮತ್ತು ಆರ್. ವಿ. ರಸ್ತೆ-ಬೊಮ್ಮಸಂದ್ರ 19.15 ಕಿ. ಮೀ. ಉದ್ದದ ಹೊಸ ಮಾರ್ಗ ಈ ಯೋಜನೆಯಲ್ಲಿ ಸೇರಿದೆ. ಈ ಯೋಜನೆಯ ಒಟ್ಟು ವೆಚ್ಚ 30,695 ಕೋಟಿ.

Recommended Video

ವಿಶ್ವ ಕ್ರಿಕೆಟ್ ನ್ನು ಕಂಟ್ರೋಲ್ ಮಾಡೋ ಭಾರತವೇ ಕಿಂಗ್ ಎಂದ ಪಾಕಿಸ್ತಾನ | Oneindia Kannada

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಯೋಜನೆ 2ನೇ ಹಂತದ ಕಾಮಗಾರಿಯನ್ನು ಹಂತ-ಹಂತವಾಗಿ ಪೂರ್ಣಗೊಳಿಸಿ ಮಾರ್ಚ್ 2025ಕ್ಕೆ ಸಂಪೂರ್ಣವಾಗಿ ವಾಣಿಜ್ಯ ಸಂಚಾರವನ್ನು ಆರಂಭಿಸುವ ಗುರಿ ಹೊಂದಿದೆ.

English summary
Tunnel Boring Machine (TBM) Vindya completed tunnelling from Cantonment station to Shivajinagar of Namma metro route at Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X