• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ವಿದ್ಯಾರ್ಥಿನಿ ಮೇಲೆ ಜನಾಂಗೀಯ ದ್ವೇಷದಿಂದ ಹಲ್ಲೆ ನಡೆದಿಲ್ಲ'

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 6 : 'ತಾಂಜಾನಿಯ ಮೂಲದ ವಿದ್ಯಾರ್ಥಿನಿ ಮೇಲೆ ಜನಾಂಗೀಯ ದ್ವೇಷದಿಂದ ಹಲ್ಲೆ ನಡೆದಿಲ್ಲ' ಎಂದು ತಾಂಜಾನಿಯ ಹೈಕಮಿಷನರ್ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಸ್ಪಷ್ಟಪಡಿಸಿದ್ದಾರೆ. ಅಪಘಾತ ನಡೆದ ನಂತರ ಅಕ್ರೋಶಗೊಂಡ ಜನರು ಈ ಹಲ್ಲೆ ನಡೆಸಿದ್ದಾರೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ಸಂಜೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ 5 ಅಧಿಕಾರಿಗಳು ಮತ್ತು ತಾಂಜಾನಿಯಾ ಹೈಕಮಿಷನರ್‌ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಅವರು, ಗೃಹಸಚಿವ ಡಾ. ಜಿ. ಪರಮೇಶ್ವರ ಹಾಗೂ ಪೊಲೀಸರಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು. ['ಬೆಂಗಳೂರು ನನಗೆ ಮನೆಯಾಗಿತ್ತು, ಈಗ ತತ್ತರಿಸಿದ್ದೇನೆ!']

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್‌.ಎಸ್.ಮೇಘರಿಕ್ ಅವರ ಜೊತೆ ತಾಂಜಾನಿಯ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. [ರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದ ಬೆಂಗಳೂರಿಗರು]

ಗೃಹ ಸಚಿವ ಪರಮೇಶ್ವರ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಅವರು ಜನಾಂಗೀಯ ದ್ವೇಷದಿಂದ ತಾಂಜಾನಿಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಕರ್ನಾಟಕ ಸರ್ಕಾರ ನಡೆಸುತ್ತಿರುವ ತನಿಖೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಚಿತ್ರಗಳಲ್ಲಿ ನೋಡಿ ವಿವರಗಳು....

ಬೆಂಗಳೂರಿಗೆ ಭೇಟಿ ನೀಡಿದ ಕಿಜಾಜಿ

ಬೆಂಗಳೂರಿಗೆ ಭೇಟಿ ನೀಡಿದ ಕಿಜಾಜಿ

ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ 5 ಅಧಿಕಾರಿಗಳು ಮತ್ತು ತಾಂಜಾನಿಯಾ ಹೈಕಮಿಷನರ್‌ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದರು. ಗೃಹಸಚಿವ ಡಾ. ಜಿ. ಪರಮೇಶ್ವರ್‌ ಹಾಗೂ ಪೊಲೀಸರಿಂದ ತಾಂಜಾನಿಯ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ವಿವರ ಪಡೆದರು.

ವಿದ್ಯಾರ್ಥಿಗಳ ಜೊತೆ ಸಂವಾದ

ವಿದ್ಯಾರ್ಥಿಗಳ ಜೊತೆ ಸಂವಾದ

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್‌.ಎಸ್.ಮೇಘರಿಕ್ ಅವರ ಜೊತೆ ತಾಂಜಾನಿಯ
ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಜನಾಂಗೀಯ ದ್ವೇಷದ ಹಲ್ಲೆಯಲ್ಲ

ಜನಾಂಗೀಯ ದ್ವೇಷದ ಹಲ್ಲೆಯಲ್ಲ

ತಾಂಜಾನಿಯ ಮೂಲದ ವಿದ್ಯಾರ್ಥಿನಿ ಮೇಲೆ ಜನಾಂಗೀಯ ದ್ವೇಷದಿಂದ ಹಲ್ಲೆ ನಡೆದಿಲ್ಲ ಎಂದು ತಾಂಜಾನಿಯ ಹೈಕಮಿಷನರ್ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಸ್ಪಷ್ಟಪಡಿಸಿದರು. ಕರ್ನಾಟಕ ಸರ್ಕಾರ ನಡೆಸುತ್ತಿರುವ ತನಿಖೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಪೊಲೀಸರು ಇದನ್ನೇ ಹೇಳಿದ್ದರು

ಪೊಲೀಸರು ಇದನ್ನೇ ಹೇಳಿದ್ದರು

ಜನವರಿ 31ರಂದು ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದ ನಂತರ ಅಕ್ರೋಶಗೊಂಡ ಜನರು ಹಲ್ಲೆ ನಡೆಸಿದ್ದಾರೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದರು. ಇದು ಜನಾಂಗೀಯ ದ್ವೇಷದ ಹಿನ್ನಲೆಯಲ್ಲಿ ನಡೆದ ಹಲ್ಲೆಯಲ್ಲ ಎಂದು ಪೊಲೀಸರು ತಿಳಿಸಿದ್ದರು.

ಮೊದಲು ಚಾಲಕನ ಮೇಲೆ ಹಲ್ಲೆ

ಮೊದಲು ಚಾಲಕನ ಮೇಲೆ ಹಲ್ಲೆ

ಜನವರಿ 31ರಂದು ಅಪಘಾತ ನಡೆದ ಬಳಿಕ ಮೊದಲು ಜನರು ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿದರು. ಪೊಲೀಸರ ರಾತ್ರಿ ಗಸ್ತಿನ ವಾಹನ ಅಲ್ಲಿತ್ತು. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದರು.

ಒಬ್ಬ ಪೇದೆ ಮಾತ್ರ ಸ್ಥಳದಲ್ಲಿದ್ದ

ಒಬ್ಬ ಪೇದೆ ಮಾತ್ರ ಸ್ಥಳದಲ್ಲಿದ್ದ

ಜನರ ಗುಂಪು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಬಳಿಕ ಪೊಲೀಸರು ಒಬ್ಬ ಪೇದೆಯನ್ನು ಮಾತ್ರ ಸ್ಥಳದಲ್ಲಿ ಬಿಟ್ಟು ಚಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ನಂತರ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಯಿತು. ಒಬ್ಬ ಪದೇ ಜನರ ಗುಂಪನ್ನು ನಿಯಂತ್ರಿಸುವುದು ಸಾಧ್ಯವಿರಲಿಲ್ಲ.

English summary
Thank you John H.W.Kijazi for clearing out that the attack on the Tanzanian student was not a racist attack but an isolated incident. Kijazi the high commissioner of Tanzania declined to say that the attack on the Tanzanian girl was a racist attack. H.W.Kijazi visited Bengaluru on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X