ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೆರಿಗೆ ಕಟ್ಟದವರ ಹೆಸರು ದಿನಪತ್ರಿಕೆಯಲ್ಲಿ ಬಹಿರಂಗ: ಜಿ ಪರಮೇಶ್ವರ

|
Google Oneindia Kannada News

ಬೆಂಗಳೂರು, ಜನವರಿ 28: ತೆರಿಗೆ ಕಟ್ಟದೆ ಸಾಕಷ್ಟು ಮಂದಿ ವಂಚಿಸುತ್ತಿದ್ದಾರೆ, ಒಂದೊಮ್ಮೆ ತೆರಿಗೆ ಕಟ್ಟದಿದ್ದರೆ ಅವರ ಹೆಸರನ್ನು ಪತ್ರಿಕೆಯಲ್ಲಿ ಬಹಿರಂಗಗೊಳಿಸುವುದಾಗಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ತಿಳಿಸಿದ್ದಾರೆ.

ಬೆಂಗಳೂರನ್ನು ಮುಂದಿನ‌ ಐದು ವರ್ಷಕ್ಕೆ ಅಭಿವೃದ್ಧಿ ಮಾಡಲು ಈಗಾಗಲೇ ರೋಡ್‌ಮ್ಯಾಪ್‌ ತಯಾರಿಸಲು ಸೂಚಿಸಿದ್ದು, ಇದಕ್ಕಾಗಿ 5೦ ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಿದ್ದೇವೆ ಎಂದರು.

ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ಬೆಂಗಳೂರಿನ‌ ಅಭಿವೃದ್ದಿ ತೆರಿಗೆ ಸಂಗ್ರಹ ಬಹಳ ಮುಖ್ಯ. 2500 ಕೋಟಿ ತೆರಿಗೆ ಬಾಕಿ ಉಳಿದಿದೆ. ಪ್ರಸ್ತುತ ತೆರಿಗೆ ಕಟ್ಟದೇ ಇದ್ದರೆ ಅಂಥವರ ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡಲಾಗುತ್ತದೆ. ಜನಸಾಮಾನ್ಯರು ತೆರಿಗೆ ಕಟ್ಟದೇ ಇದ್ದರೆ ಬಿಬಿಎಂಪಿಯನ್ನು ಹೇಗೆ ನಡೆಸಲು ಸಾಧ್ಯ? ಹೀಗಾಗಿ ತೆರಿಗೆ ವಂಚಿತರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

Tax eviders name will published in all news paper, parameshwara warns

ಬೆಂಗಳೂರಿನ ಅಭಿವೃದ್ಧಿಗಾಗಿ 25 ಸಾವಿರ ಕೋಟಿ ರು. ವೆಚ್ಚದಲ್ಲಿ ಎರಡು ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ಕೈಗೊಂಡಿದ್ದೇವೆ. ಸ್ಟೀಲ್‌ಬ್ರಿಡ್ಜ್‌ ಯೋಜನೆ ಸಂಬಂಧ ಕೆಲವರಷ್ಟೇ ವಿರೋಧ ಮಾಡುತ್ತಿದ್ದಾರೆ.

 ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ

ಇದು ಸಹ ಮತ್ತೊಂದು ಎಲಿವೇಟೆಡ್‌ ರಸ್ತೆ.. ಆದರೆ ಕೊಂಚ ಪ್ರಮಾಣದಲ್ಲಿ ಸ್ಟೀಲ್‌ ಬಳಸುತ್ತಿರುವುದರಿಂದ ಸ್ಟೀಲ್‌ ಬ್ರಿಡ್ಜ್‌ ಎನ್ನಲಾಗುತ್ತದೆ. ಈ ಯೋಜನೆಯನ್ನು ಯಾರೋ ವಿರೋಧಿ ಮಾಡಿದರೆಂದು ಕೈಬಿಡಲಾಗುವುದಿಲ್ಲ ಎಂದರು.

English summary
Deputy chief minister G Parameshwara warned that if you do not pay tax, name will published in news papers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X