ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲೇ ಸ್ಟಾರ್ ಬಕ್ಸ್ ಕಾಫಿ ಸವಿಯಿರಿ

By Mahesh
|
Google Oneindia Kannada News

ಬೆಂಗಳೂರು, ನ.22: ಅಮೆರಿಕ ಖ್ಯಾತ ಕಾಫಿ ಮಳಿಗೆ ಸ್ಟಾರ್ ಬಕ್ಸ್ ಟಾಟಾ ಸಂಸ್ಥೆ ಜೊತೆ ಜಂಟಿಯಾಗಿ ಭಾರತದಲ್ಲಿ ಕಾಫಿ ಕಂಪು ಹರಡುತ್ತಿದ್ದಾರೆ. ಮುಂಬೈ ನಂತರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ಸ್ಟಾರ್ ಬಕ್ಸ್ ತನ್ನ ಮೊದಲ ಕೆಫೆ ಆರಂಭಿಸಿದೆ.

ಮುಂಬೈ, ದೆಹಲಿ ಎನ್ ಸಿಆರ್, ಪುಣೆ ನಂತರ ಬೆಂಗಳೂರಿನಲ್ಲಿ ಸ್ಟಾರ್ ಬಕ್ಸ್ ಆರಂಭಗೊಳ್ಳುತ್ತಿರುವುದು ಸಂತಸದ ವಿಷಯ. ನಾವು ಭಾರತದಲ್ಲಿ ಇನ್ನಷ್ಟು ಹೂಡಿಕೆ ಮಾಡಲು ಸಿದ್ಧರಾಗಿದ್ದೇವೆ ಎಂದು ಸ್ತಾರ್ ಬಕ್ಸ್ ಸಮೂಹ ನಿರ್ದೇಶಕ ಜಾನ್ ಕುಲ್ವರ್ ಹೇಳಿದ್ದಾರೆ.

ಬೆಂಗಳೂರಿನ ಕೋರಮಂಗಲ 7ನೇ ಬ್ಲಾಕಿನ ರಹೇಜ ಆರ್ಕೇಡ್ ಎದುರಿನ ರಿಯಲ್ ಸ್ಕ್ವೇರ್ ಕಟ್ಟಡದಲ್ಲಿ ಸ್ಟಾರ್ ಬಕ್ಸ್ ಶುಭಾರಂಭ ಮಾಡಿದೆ. ಕೆಫೆ ಕಾಫಿ ಡೇ, ಕೋಸ್ಟಾ ಕಾಫಿ, ಬರಿಸ್ತಾ, ಗ್ಲೋರಿಯಾ ಜೀನ್ಸ್, ಕಾಫಿ ಬೀನ್ ಅಂಡ್ ಟೀ ಲೀಫ್ ಹೊಂದಿರುವ ಒನ್ ಟು ಕಾಫಿ ಸಂಸ್ಕೃತಿಯ ಬೆಂಗಳೂರಿನಲ್ಲಿ ಈಗ ಅಮೆರಿಕದ ಸ್ಟಾರ್ ಬಕ್ಸ್ ಸದ್ದು ಮಾಡಲು ಸಿದ್ಧವಾಗಿದೆ.

ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 11 ಗಂಟೆ ತನಕ ನೆಚ್ಚಿನ ಕಾಫಿ ಸವಿಯಬಹುದು ಜತೆಗೆ ಉಚಿತ ವೈಫೈ ಇಂಟರ್ನೆಟ್ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಸಿಇಒ ಆವಾನಿ ಹೇಳಿದ್ದಾರೆ.

ಭಾರತದಲ್ಲಿ ಸುಮಾರು 400 ಕೋಟಿ ರು ಬಂಡವಾಳ ಹೂಡಿಕೆ ಮಾಡಿರುವ ಸ್ಟಾರ್ ಬಕ್ಸ್ 2012ರಲ್ಲಿ 30 ಮಳಿಗೆಗಳನ್ನು ಆರಂಭಿಸಿತ್ತು. 3,000 ದಿಂದ 3,500 ಚ.ಅಡಿ ವಿಸ್ತೀರ್ಣದ ಮಳಿಗೆಗಳಲ್ಲಿ ಗ್ರಾಹಕರಿಗೆ ಸ್ಟಾರ್ ಬಕ್ಸ್ ಕಾಫಿ ನೀಡುತ್ತಿದೆ. ಸ್ಟಾರ್ ಬಕ್ಸ್ ತನ್ನ ಮೊದಲ ಕಾಫಿ ಶಾಪ್ ಅನ್ನು ಮುಂಬೈನ ಹಾರ್ನಿಮಾನ್ ಸರ್ಕಲ್ ಪ್ರದೇಶದಲ್ಲಿ ಆರಂಭಿಸಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

ಸ್ಟಾರ್ ಬಕ್ಸ್ ಜತೆ 50:50 ರ ಅನುಪಾತದ ಒಪ್ಪಂದದ ಜೊತೆಗೆ ತನ್ನ ಟೀ ಉತ್ಪನ್ನ 'ಟಾಟಾ ಟಾಜೊ' ಕ್ಕೆ ಕೂಡಾ ಪ್ರಚಾರ ನೀಡಲು ಟಾಟಾ ಸಂಸ್ಥೆ ಬಯಸಿದೆ. ರೀಟೈಲ್ ಮಾರುಕಟ್ಟೆಯಲ್ಲಿ ಅನೇಕ ಬದಲಾವಣೆಗಳು ಕಾಣುತ್ತಿರುವ ಸಂದರ್ಭದಲ್ಲಿ ರೀಟೈಲ್ ಜಗತ್ತಿನ ಆಳ ಕಂಡಿರುವ ಸ್ಟಾರ್ ಬಕ್ಸ್ ಪ್ರವೇಶ ಟಾಟಾ ಸಂಸ್ಥೆಗೆ ಲಾಭದಾಯಕವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ ಕೆಫೆ ಕಾಫಿ ಡೇ ಕಾಫಿ ಶಾಪ್ ನಡೆಸುವ ಅಮಾಲ್ಗಮೇಟೆಡ್ ಬಿನ್ ಕೋ ಸಂಸ್ಥೆ ಮಾಲೀಕ ವಿಜಿ ಸಿದ್ದಾರ್ಥ ಅವರು ಮಳಿಗೆಗಳ ಮಾದರಿ ಬದಲಾವಣೆಗೆ ಮುಂದಾಗಿದ್ದಾರೆ. ಸ್ಕ್ವೇರ್ ಮಾದರಿ ಮಳಿಗೆ(2000 ಚ.ಅ ವಿಸ್ತೀರ್ಣ ಬೇಕಾಗುತ್ತದೆ) ಆರಂಭಿಸಿ ಮೂರು ವರ್ಷವಾದರೂ ಗ್ರಾಹಕರ ಪ್ರತಿಕ್ರಿಯೆ ಅಷ್ಟು ಪೂರಕವಾಗಿಲ್ಲ ಎಂದು ಕೆಫೆ ಕಾಫಿಡೇ ಮಾರುಕಟ್ಟೆ ವಿಭಾಗದ ಅಧ್ಯಕ್ಷ ರಾಮಕೃಷ್ಣ ಕೆ ಹೇಳುತ್ತಾರೆ. ಹೀಗಾಗಿ ಹೆಚ್ಚೆಚು ಲಾಂಜ್ ಮಾದರಿ ಮಳಿಗೆ ತೆರೆಯಲು ಸಿಸಿಡಿ ನಿರ್ಧರಿಸಿದೆ ಎನ್ನಲಾಗಿದೆ.

ಸ್ಟಾರ್ ಬಕ್ಸ್ ಬಗ್ಗೆ : ವಾಷಿಂಗ್ಟನ್ ನ ಸಿಯಾಟಲ್ ಮೂಲದ ಸ್ಟಾರ್ ಬಕ್ಸ್ ಕಾರ್ಪೋರೇಷನ್ ಸಂಸ್ಥೆ ಅಂತಾರಾಷ್ಟ್ರೀಯ ಕಾಫಿ ಕಂಪನಿಯಾಗಿದೆ. ವಿಶ್ವದ ಅತ್ಯಂತ ವಿಸ್ತಾರವಾದ ಕಾಫಿ ಶಾಪ್ ಜಾಲ ಹೊಂದಿರುವ ಸಂಸ್ಥೆ ಇದಾಗಿದ್ದು 62ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 19,000ಕ್ಕೂ ಅಧಿಕ ಕಾಫಿ ಶಾಪ್ ಜಗತ್ತಿನೆಲ್ಲೆಡೆ ಇದೆ. 1922ರಲ್ಲಿ ಸ್ಥಾಪಿತವಾದ ಈ ಕಂಪನಿ ಬಗ್ಗೆ ಹೆಚ್ಚಿನಮಾಹಿತಿಗೆ www.starbucks.com.

English summary
Bullish on the Indian market for growth, Tata Starbucks opens its next store in Bangalore on Friday(Nov.22). Starbucks, the world's largest retailer of coffee, has 50:50 joint venture with Tata Global Beverages, parent of Tata Coffee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X