ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗರದ ಇನ್ನೆರಡು ಕಡೆ ಸ್ಟಾರ್ ಬಕ್ಸ್ ಕಾಫಿ ಪರಿಮಳ

By Mahesh
|
Google Oneindia Kannada News

ಬೆಂಗಳೂರು, ಜ.21: ಅಮೆರಿಕ ಖ್ಯಾತ ಕಾಫಿ ಮಳಿಗೆ ಸ್ಟಾರ್ ಬಕ್ಸ್ ಟಾಟಾ ಸಂಸ್ಥೆ ಜೊತೆ ಜಂಟಿಯಾಗಿ ಭಾರತದಲ್ಲಿ ಕಾಫಿ ಕಂಪು ಹರಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಮುಂಬೈ ನಂತರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ವರ್ಷ ಸ್ಟಾರ್ ಬಕ್ಸ್ ತನ್ನ ಮೊದಲ ಕೆಫೆ ಆರಂಭಿಸಿತ್ತು. 2014ರ ಆರಂಭದಲ್ಲೇ ಇನ್ನೆರಡು ಕಡೆಗಳಲ್ಲಿ ತನ್ನ ಮಳಿಗೆಗಳನ್ನು ವಿಸ್ತರಿಸಿದೆ.

ನಗರದ ಕೋರಮಂಗಲದಲ್ಲಿ ಆರಂಭಗೊಂಡಿದ್ದ ಸ್ಟಾರ್ ಬಕ್ಸ್ ಕೆಫೆ ಯಶಸ್ಸಿನ ಉತ್ಸಾಹದಲ್ಲೇ ನಗರ ಪ್ರಮುಖ ಮಾಲ್ ಗಳಾದ ವೈಟ್ ಫೀಲ್ಡ್ ನಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿ ಹಾಗೂ ಯಶವಂತಪುರದಲ್ಲಿರುವ ಬ್ರಿಗೇಡ್ ಓರಿಯಾನ್ ಮಾಲ್ ಗಳಲ್ಲಿ ಸ್ಟಾರ್ ಬಕ್ಸ್ ಕೆಫೆ ಆರಂಭಗೊಂಡಿದೆ.

ಭಾರತದಲ್ಲಿ ಒಟ್ಟಾರೆ 34 ಸ್ಟೋರ್ ಗಳನ್ನು ಹೊಂದಿರುವ ಸ್ಟಾರ್ ಬಕ್ಸ್ ಮುಂಬೈ, ದೆಹಲಿ ಎನ್ ಸಿಆರ್, ಪುಣೆ ಹಾಗೂ ಬೆಂಗಳೂರು ನಗರಗಳಲ್ಲಿ ತನ್ನ ಪರಿಮಳ ಬೀರುತ್ತಿದೆ. ಕೆಫೆ ಕಾಫಿ ಡೇ, ಕೋಸ್ಟಾ ಕಾಫಿ, ಬರಿಸ್ತಾ, ಗ್ಲೋರಿಯಾ ಜೀನ್ಸ್, ಕಾಫಿ ಬೀನ್ ಅಂಡ್ ಟೀ ಲೀಫ್ ಹೊಂದಿರುವ ಒನ್ ಟು ಕಾಫಿ ಸಂಸ್ಕೃತಿಯ ಬೆಂಗಳೂರಿನಲ್ಲಿ ಅಮೆರಿಕದ ಸ್ಟಾರ್ ಬಕ್ಸ್ ನಿಧಾನಗತಿಯಿಂದ ತನ್ನ ಕಂಪು ಬೀರತೊಡಗಿದೆ. ಸ್ಟಾರ್ ಬಕ್ಸ್ ಕಾಫಿ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಹೇಗಿದೆ ಮುಂದೆ ಓದಿ...

ಇನ್ನೆರಡು ಕಡೆ ಸ್ಟಾರ್ ಬಕ್ಸ್ ಕಾಫಿ ಪರಿಮಳ

ಇನ್ನೆರಡು ಕಡೆ ಸ್ಟಾರ್ ಬಕ್ಸ್ ಕಾಫಿ ಪರಿಮಳ

ಸ್ಟಾರ್ ಬಕ್ಸ್ ಬಗ್ಗೆ : ವಾಷಿಂಗ್ಟನ್ ನ ಸಿಯಾಟಲ್ ಮೂಲದ ಸ್ಟಾರ್ ಬಕ್ಸ್ ಕಾರ್ಪೋರೇಷನ್ ಸಂಸ್ಥೆ ಅಂತಾರಾಷ್ಟ್ರೀಯ ಕಾಫಿ ಕಂಪನಿಯಾಗಿದೆ. ವಿಶ್ವದ ಅತ್ಯಂತ ವಿಸ್ತಾರವಾದ ಕಾಫಿ ಶಾಪ್ ಜಾಲ ಹೊಂದಿರುವ ಸಂಸ್ಥೆ ಇದಾಗಿದ್ದು 62ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 19,000ಕ್ಕೂ ಅಧಿಕ ಕಾಫಿ ಶಾಪ್ ಜಗತ್ತಿನೆಲ್ಲೆಡೆ ಇದೆ. 1922ರಲ್ಲಿ ಸ್ಥಾಪಿತವಾದ ಈ ಕಂಪನಿ ಬಗ್ಗೆ ಹೆಚ್ಚಿನಮಾಹಿತಿಗೆ www.starbucks.com.

ಸ್ಟಾರ್ ಬಕ್ಸ್ ಕಾಫಿಗಾಗಿ ನೂಕು ನುಗ್ಗಲು

ಕಳೆದ ನವೆಂಬರ್ ನಲ್ಲಿ ಬೆಂಗಳೂರಿನ ಕೋರಮಂಗಲದ 7ನೇ ಬ್ಲಾಕಿನ ರಹೇಜ ಆರ್ಕೇಡ್ ಎದುರಿನ ರಿಯಲ್ ಸ್ಕ್ವೇರ್ ಕಟ್ಟಡದಲ್ಲಿ ಸ್ಟಾರ್ ಬಕ್ಸ್ ಆರಂಭಗೊಂಡಾಗ ಸ್ಟಾರ್ ಬಕ್ಸ್ ಅಭಿಮಾನಿಗಳು ಕ್ಯೂ ನಿಂತು ಕಾದು ಕಾಫಿ ಹೀರಿದ್ದರು

ಸ್ಟಾರ್ ಬಕ್ಸ್ ಕಾಫಿಗಾಗಿ ಕ್ಯೂ ನಿಲ್ಲಬೇಕೆ?

ಸ್ಟಾರ್ ಬಕ್ಸ್ ಕಾಫಿ ಕುಡಿಯಲು ಕ್ಯೂ ನಿಲ್ಲಬೇಕೆ? ಕಾಮನ್

ಸ್ಟಾರ್ ಬಕ್ಸ್ ಸರ್ವೀಸ್ ಅಷ್ಟು ಚೆನ್ನಾಗಿಲ್ಲ

ಸ್ಟಾರ್ ಬಕ್ಸ್ ಸರ್ವೀಸ್ ಅಷ್ಟು ಚೆನ್ನಾಗಿಲ್ಲ ಸೀಟಿಂಗ್ ಕೂಡಾ ಆಕರ್ಷಕವಾಗಿಲ್ಲ. Mocha ಮಾತ್ರ ಒಳ್ಳೆ ಟೇಸ್ಟ್ ಇತ್ತು

ಸ್ಟಾರ್ ಬಕ್ಸ್, ಸಿಸಿಡಿ vs ಫಿಲ್ಟರ್ ಕಾಫಿ

ದಕ್ಷಿಣ ಭಾರತದ ಫಿಲ್ಟರ್ ಕಾಫಿ ಮುಂದೆ ಸ್ಟಾರ್ ಬಕ್ಸ್, ಕೆಫೆ ಕಾಫಿಡೇ ಕಾಫಿ ರುಚಿ ಇರುತ್ತದೆಯೇ?

ಸ್ಟಾರ್ ಬಕ್ಸ್ ಜತೆ ಸೇರಿ ಟಾಟಾ ಏನು ಲಾಭ

ಸ್ಟಾರ್ ಬಕ್ಸ್ ಮಳಿಗೆ ವಿಸ್ತರಣೆಯಿಂದ ಷೇರು ಪೇಟೆಯಲ್ಲಿ ಟಾಟಾ ಏನು ಲಾಭ

English summary
Tata Starbucks Limited, the 50/50 joint venture between Starbucks Coffee Company and Tata Global Beverages Limited, announced its expansion in the city with the launch of two more stores one is located at Phoenix Market City in Whitefield and the other is at Brigade Orion Mall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X