• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದಿರಾನಗರದಲ್ಲಿ ಮೊದಲ ಚಹಾ ಕೆಫೆ ಆರಂಭಿಸಿದ ಟಾಟಾ

By Mahesh
|

ಬೆಂಗಳೂರು, ನವೆಂಬರ್ 01: ವಿಶ್ವದ ಎರಡನೇ ಅತಿದೊಡ್ಡ ಟಿ ಬ್ರ್ಯಾಂಡ್ ಎನಿಸಿರುವ ಟಾಟಾ ಗ್ಲೋಬಲ್ ಬಿವರೇಜಸ್ ತನ್ನ ಮೊದಲ ಚಹಾ ಕೆಫೆ ಟಾಟಾ ಚಾ ಪ್ರಾಯೋಗಿಕ ಮಳಿಗೆಗೆ ಚಾಲನೆ ನೀಡಿದೆ.

ಲಾಠಿಗೂ ಕೆಟೀಗೂ ಕಲ್ಲಡ್ಕದಲ್ಲಿ ವಿಶಿಷ್ಟ ರುಚಿ ಉಂಟು..

ಮೊದಲ ಟಾಟಾ ಚಹಾ ಬೆಂಗಳೂರಿನ ಹೃದಯಭಾಗವಾದ ಇಂದಿರಾನಗರದ 12ನೇ ಮೇನ್‌ನಲ್ಲಿ ತಲೆಯೆತ್ತಲಿದೆ. ಕಂಪನಿ ಒಟ್ಟು 4 ಮಳಿಗೆ ಆರಂಭಿಸಲು ಆಲೋಚಿಸಿದೆ. ಈ ಪ್ರಾಯೋಗಿಕದ ಫಲಿತಾಂಶ ಆಧರಿಸಿ ಟಾಟಾ ಜಾಗತಿಕ ಪಾನೀಯ ಸಂಸ್ಥೆ ಮುಂದಿನ ನಡೆಯನ್ನು ನಿರ್ಧರಿಸಲಿದೆ.

ಪ್ರಾಯೋಗಿಕ ಮಳಿಗೆ ಉದ್ಘಾಟಿಸಿ ಮಾತನಾಡಿದ ಟಾಟಾ ಗ್ಲೋಬಲ್ ಬಿವರೇಜಸ್ ಇಂಡಿಯಾದ ಸ್ಥಳೀಯ ಅಧ್ಯಕ್ಷ ಸುಶಾಂತ್ ದಾಸ್, ಟಾಟಾ ಚಹಾದಲ್ಲಿ ಭಾರತದ ಅಧಿಕೃತ ಸ್ವಾದವನ್ನು ಸವಿಯಬಹುದು. ಆಧುನಿಕ ವಾತಾವರಣದಲ್ಲಿ ಬಿಸಿಯಾದ ಚಹಾ ನೀಡುವುದು ನಮ್ಮ ಗುರಿ. ಇಂದು ಹೊರಗಡೆ ತಿನ್ನುವ ಟ್ರೆಂಡ್ ಹೆಚ್ಚಾಗಿದೆ. ನಾವು ಇದರ ಭಾಗವಾಗಲು ಬಯಸುತ್ತಿದ್ದೇವೆ.

ಸೌತೇಕಾಯಿ ಗ್ರೀನ್ ಚಹಾ ಮತ್ತು ಸಕ್ಕರೆ ರಹಿತ ಟ್ಯಾಂಗಿ ಟಮರಿಂಡ್ ಮೊದಲಾದ ಪಾನೀಯಗಳನ್ನು ನೀವಿಲ್ಲಿ ಸವಿಯಬಹುದು. ಮೀಟಾಪಾನ್, ರಸಮಲೈ ಮಿಲ್ಕ್ ಶೇಕ್, ಪೀಚ್ ಐಸ್ ಟೀ ಮತ್ತು ಚಿಲ್ಲಿ ಗುವಾ ಐಸ್ ಸ್ಲಷ್ ಮೊದಲಾದ ಕೋಲ್ಡ್ ಟೀಗಳನ್ನು ಹೊಂದಿದೆ. ನಿಂಬುಡಾ ಬ್ಲಾಕ್ ಟಿ ಬಿಸಿ ಚಹಾಗಳಲ್ಲಿದೆ. ಬಟರ್ ಚಿಕನ್ ಕಿಚಡಿ, ಕ್ರೀಮಿ ವೆಜ್ ಸ್ಟೀವ್‌ಗಳನ್ನು ಹೊಂದಿದೆ.

ಚಟ್‌ಪಟ್‌ಮಟರ್ ಕುಲ್ಚಾ, ದಾಲ್ ಪಕ್ವಾನ್ ಮೊದಲಾದ ಖಾದ್ಯಗಳನ್ನು ಹೊಂದಿರುತ್ತದೆ. ಪ್ರಾಯೋಗಿಕ ಮಳಿಗೆ ಕುರಿತು ಪ್ರತಿಕ್ರಿಯಿಸಿದ ಸುಶಾಂತ್, ಬೆಂಗಳೂರು ಭಾರತದ ಅತ್ಯಂತ ಸಕ್ರಿಯ ನಗರಗಳಲ್ಲೊಂದು. ದೇಶದ ಬೇರೆಬೇರೆ ಸಂಸ್ಕೃತಿಯ ಜನರಿಗೆ ಆಶ್ರಯ ನೀಡುತ್ತಿದೆ. ಉದ್ಯಮವಾಗಿ ಈ ನಗರ ಸಹಸ್ರಮಾನದ ಯುವ ಗ್ರಾಹಕರ ದೊಡ್ಡ ಕೇಂದ್ರ, ಈ ಪ್ರಾಯೋಗಿಕ ಮಳಿಗೆ ಮೂಲಕ ನಾವು ಗ್ರಾಹಕರ ಅಭಿರುಚಿ ತಿಳಿದುಕೊಳ್ಳುತ್ತೇವೆ. ಚಹಾ ಆಧಾರಿತ ಬಿಸಿ ಮತ್ತು ತಣ್ಣನೆಯ ಪಾನೀಯಗಳು, ಸಾಂಪ್ರದಾಯಿಕ ಸ್ನ್ಯಾಕ್ಸ್, ಡಂಕರ್‍ಸ್, ಮೀಲ್ಸ್‌ಗಳನ್ನು ನೀಡಲಿದ್ದೇವೆ ಎಂದರು.

ಟಾಟಾ ಜಾಗತಿಕ ಪಾನೀಯ ಸಂಸ್ಥೆ ಕುರಿತು

ಟಾಟಾ ಗ್ಲೋಬಲ್ ಬಿವರೇಜಸ್, ಟಾಟಾ ಟೀ ಎಂದು ಪ್ರಖ್ಯಾತವಾಗಿದೆ. 1.4 ಶತಕೋಟಿ ಡಾಲರ್ ವಹಿವಾಟಿನೊಂದಿಗೆ 300 ದಶಲಕ್ಷ ಮಂದಿಗೆ ಸೇವೆ ನೀಡುತ್ತಿದೆ. 40 ದೇಶಗಳಲ್ಲಿ ಅಸ್ತಿತ್ವ ಹೊಂದಿದ್ದು, 3000ಕ್ಕೂ ಹೆಚ್ಚು ನೌಕರರನ್ನು ಹೊಂದಿದೆ. 'ನಿಮ್ಮ ಉತ್ತಮಕ್ಕಾಗಿ ಪಾನೀಯ' ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata Global Beverages opens tea cafe in Indiranagar, Bengaluru. Tata Global Beverages Ltd (TGBL), the world’s second largest tea company, will launch three quick-service restaurant (QSR) formats of Tata Chah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more