• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಾಟಾ ಕ್ವಿಜ್ : ಸೇತು ಮಾಧವನ್, ಬೈಬಾಸ್ವಾಟ ಚಟರ್ಜಿಗೆ ಪ್ರಶಸ್ತಿ

By Mahesh
|

ಬೆಂಗಳೂರು, ಸೆ.15: ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳ ಜ್ಞಾನವನ್ನು ವೃದ್ಧಿಸುವ ಮತ್ತು ಜ್ಞಾನವನ್ನು ಒರೆಗೆ ಹಚ್ಚುವ ಟಾಟಾ ಸಮೂಹ ಸಂಸ್ಥೆ ನಡೆಸಿದ 13 ನೇ ಟಾಟಾ ಕ್ರುಸಿಬಲ್ ಕಾರ್ಪೊರೇಟ್ ಕ್ವಿಜ್‍ನಲ್ಲಿ ಕೇಪ್ ಜೆಮಿನಿ ಸಂಸ್ಥೆಯ ಸೇತು ಮಾಧವನ್ ಮತ್ತು ಬೈಬಾಸ್ವಾಟ ಚಟರ್ಜಿಗೆ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಪ್ರಾದೇಶಿಕ ವಿಭಾಗದಲ್ಲಿ ಇವರಿಬ್ಬರು ಈ ಅತ್ಯುನ್ನತ ಕ್ವಿಜ್‍ ನಲ್ಲಿ ಜಯಶಾಲಿಗಳಾಗಿದ್ದಾರೆ. ಭಾರತದ 25 ಕ್ಕೂ ಹೆಚ್ಚು ನಗರಗಳಲ್ಲಿ ನಡೆಯುತ್ತಿರುವ ಈ ಕ್ವಿಜ್‍ ನ ಪ್ರಮುಖ ಉದ್ದೇಶ ಯುವ ಪ್ರತಿಭೆಗಳಲ್ಲಿ ಇರುವ ವ್ಯವಹಾರಿಕಾ ಜ್ಞಾನ ಮತ್ತು ಸಾಮಥ್ರ್ಯವನ್ನು ಸ್ಪರ್ಧೆಯ ಒರೆಗೆ ಹಚ್ಚುವುದಾಗಿದೆ.

ಅಮೆಝಾನ್ ಸಂಸ್ಥೆಯ ಕೃತಿಕಾ ಅಧಿಕಾರಿ ಮತ್ತು ತನ್ಮಯ್ ಪೃಷ್ಠಿ ಜೋಡಿ ಎರಡನೇ ಸ್ಥಾನ ಪಡೆದರು. ಭಾರತೀಯ ಮಾಜಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಮೊದಲ ಸ್ಥಾನ ಪಡೆದ ಜೋಡಿಗೆ 75,000 ರೂಪಾಯಿ ಮತ್ತು ಎರಡನೇ ಸ್ಥಾನ ಪಡೆದವರಿಗೆ 35,000 ರೂಪಾಯಿಗಳ ನಗದು ಬಹುಮಾನ ವಿತರಿಸಲಾಯಿತು. ರಾಷ್ಟ್ರೀಯ ಮಟ್ಟದ ಫೈನಲ್‍ನಲ್ಲಿ ಪ್ರಶಸ್ತಿ ಗೆಲ್ಲುವವರಿಗೆ 5,00,000 ರೂಪಾಯಿಗಳ ನಗದು ಬಹುಮಾನವಿದೆ. ಇದರೊಂದಿಗೆ ಆಕರ್ಷಕ ಟಾಟಾ ಕ್ರುಸಿಬಲ್ ಟ್ರೋಫಿಯೂ ಇರಲಿದೆ.

ಬೆಂಗಳೂರಿನಲ್ಲಿ ನಡೆದ ಪ್ರಾದೇಶಿಕ ಸ್ಪರ್ಧೆ

ಬೆಂಗಳೂರಿನಲ್ಲಿ ನಡೆದ ಪ್ರಾದೇಶಿಕ ಸ್ಪರ್ಧೆ

ಈ ವರ್ಷ ಬೆಂಗಳೂರಿನಲ್ಲಿ ನಡೆದ ಪ್ರಾದೇಶಿಕ ಸ್ಪರ್ಧೆಯಲ್ಲಿ ಪ್ರಮುಖ ಕಾರ್ಪೊರೇಟ್ ಕಂಪನಿಗಳು ಸೇರಿದಂತೆ ಹಲವಾರು ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಒಟ್ಟು 132 ತಂಡಗಳು ಭಾಗವಹಿಸಿದ್ದು, ಎಲ್ಲರೂ ಪರಸ್ಪರ ಪೈಪೋಟಿಯ ಪ್ರದರ್ಶನ ನೀಡಿದರು. ಒಲಿಂಪಿಕ್ ಕ್ರಾಂತಿಯ ಪ್ರೇರೇಪಣೆಯಿಂದ ಈ ವರ್ಷದ ಕ್ವಿಜ್ ಅನ್ನು ಸಿದ್ಧಪಡಿಸಲಾಗಿದೆ. ಪ್ರಾದೇಶಿಕ ವಲಯದಲ್ಲಿ ತಂಡಗಳನ್ನು ರಚಿಸಲಾಗಿತ್ತು. ಆರು ತಂಡಗಳು ಫೈನಲ್ ಗೆ ಪ್ರವೇಶ ಪಡೆದಿದ್ದು, ಎಲ್ಲರೂ ಪ್ರಶಸ್ತಿಗಾಗಿ ಉತ್ತಮ ಪೈಪೋಟಿ ನಡೆಸಿದರು.

ಪ್ರಶಸ್ತಿ ವಿಜೇತರು

ಪ್ರಶಸ್ತಿ ವಿಜೇತರು

ಪ್ರಶಸ್ತಿ ವಿಜೇತರು ಮತ್ತು ರನ್ನರ್ ಅಪ್ ಗಳನ್ನು ಹೊರತುಪಡಿಸಿದರೆ ಕೆಪಿಎಂಜಿಯ ಸೌಮ್ಯ ಪಾಂಡ ಮತ್ತು ಸತ್ಯಪ್ರಕಾಶ್ ಮೊಹಾಂತಿ, ಎಚ್‍ಎಸ್ ಬಿಸಿಯ ವಿನೋದ್ ರಾಜಮಣಿ ಮತ್ತು ಉತ್ಕರ್ಷ್ ರಸ್ತೋಗಿ, ನಾಲೆಡ್ಜ್ ಸಲ್ಯೂಶನ್ಸ್ ನ ಸಚಿನ್ ರವಿ ಮತ್ತು ರಾಘವ್ ಹಾಗೂ ಒರಾಕಲ್‍ನ ಯೋಗೇಶ್ವರನ್ ಹರಿಹರನ್ ಮತ್ತು ಮಿತೇಶ್ ಅಗರ್‍ವಾಲ್ ಅವರು ಟಾಪ್ ಆರು ತಂಡಗಳಲ್ಲಿ ಸ್ಥಾನ ಪಡೆದರು.

ಪ್ರಶಸ್ತಿ ವಿತರಿಸಿ ಮಾತನಾಡಿದ ಪ್ರಕಾಶ್ ಪಡುಕೋಣೆ

ಪ್ರಶಸ್ತಿ ವಿತರಿಸಿ ಮಾತನಾಡಿದ ಪ್ರಕಾಶ್ ಪಡುಕೋಣೆ

ಪ್ರಶಸ್ತಿ ವಿತರಿಸಿ ಮಾತನಾಡಿದ ಪ್ರಕಾಶ್ ಪಡುಕೋಣೆ ಅವರು, 'ನೀವು ಯಾವುದನ್ನು ಪ್ರೀತಿಸುತ್ತೀರೋ ಅದನ್ನು ಮುಂದುವರೆಸಬೇಕು. ಈ ವೇಳೆ ಹಲವಾರು ಕ್ಲಿಷ್ಟಕರವಾದ ಪರಿಸ್ಥಿತಿಗಳು ಎದುರಾಗುತ್ತವೆ. ಹಾಗಂತ ಎದೆಗುಂದಿ ನಿಮ್ಮ ಗುರಿಯನ್ನು ತಲುಪುವ ಪ್ರಯತ್ನದಿಂದ ಹಿಂದೆ ಸರಿಯದಿರಿ' ಎಂದು ಕಿವಿಮಾತು ಹೇಳಿದರು. ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರದ ಪ್ರತಿಭೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಷದಿಂದ ವರ್ಷಕ್ಕೆ ಗಟ್ಟಿಗೊಳ್ಳುತ್ತಿದ್ದಾರೆ.

ಬ್ಯಾಡ್ಮಿಂಟನ್ ಗೆ ಉತ್ತಮ ಭವಿಷ್ಯವಿದೆ

ಬ್ಯಾಡ್ಮಿಂಟನ್ ಗೆ ಉತ್ತಮ ಭವಿಷ್ಯವಿದೆ

ಈ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಡ್ಮಿಂಟನ್ ಗೆ ಉತ್ತಮ ಭವಿಷ್ಯವಿದೆ' ಎಂದು ತಿಳಿಸಿದರು. ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಮಣ್ಯನ್ ಅವರು ಈ ವರ್ಷದ ಕ್ವಿಜ್ ಅನ್ನು ನಡೆಸಿಕೊಟ್ಟರು. ಅಕ್ಟೋಬರ್ ನಲ್ಲಿ ಮುಂಬೈನಲ್ಲಿ ನಡೆಯಲಿರುವ ರಾಷ್ಟ್ರೀಯ ಫೈನಲ್‍ನಲ್ಲಿ ವಲಯವಾರು ಸ್ಪರ್ಧೆಯಲ್ಲಿನ ತಲಾ ಟಾಪ್ ಎರಡು ತಂಡಗಳು ಸ್ಪರ್ಧಿಸಲಿವೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congratulations to the winners of the #Bangalore regional round of Tata Crucible Corporate Quiz 2016. Winners – Capgemini – Mr. Sethu. M & Mr. Baibaswata Chatterjee Runners – Amazon – Ms. Krittika Adhikary & Mr. Tanmay Prusty

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more