ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಎನ್ ಟಾಟಾ ಜಯಂತಿ, ಐಐಎಸ್ಸಿಯಲ್ಲಿ ವಿಶೇಷ ಸಂಭ್ರಮ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಸಂಸ್ಥಾಪಕರಾದ ಖ್ಯಾತ ಉದ್ಯಮಿ ಜೆಮ್‍ಶೆಡ್ ‍ಜಿ ಎನ್.ಟಾಟಾ ಅವರ 178 ನೇ ಜಯಂತಿ ಹಿನ್ನೆಲೆಯಲ್ಲಿ ಟಾಟಾ ಸೆಂಟ್ರಲ್ ಆಕ್ರೈವ್ಸ್ 6 ನೇ ವಸ್ತು ಪ್ರದರ್ಶನವನ್ನು ಆಯೋಜಿಸಿದೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 3 : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಸಂಸ್ಥಾಪಕರಾದ ಖ್ಯಾತ ಉದ್ಯಮಿ ಜೆಮ್‍ಶೆಡ್ ‍ಜಿ ಎನ್.ಟಾಟಾ ಅವರ 178 ನೇ ಜಯಂತಿ ಹಿನ್ನೆಲೆಯಲ್ಲಿ ಟಾಟಾ ಸೆಂಟ್ರಲ್ ಆಕ್ರೈವ್ಸ್ 6 ನೇ ವಸ್ತು ಪ್ರದರ್ಶನವನ್ನು ಆಯೋಜಿಸಿದೆ.

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ನಡೆದ ಸಮಾರಂಭದಲ್ಲಿ ಐಐಎಸ್ಸಿ ಮಂಡಳಿಯ ಅಧ್ಯಕ್ಷರಾದ ಪ್ರೊ.ಪಿ.ರಾಮರಾವ್ ಮತ್ತು ಟಾಟಾ ಸರ್ವೀಸಸ್ ನ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿರುವ ಫಾರೂಖ್ ಎನ್. ಸುಬೇದಾರ್ ಅವರು ಉದ್ಘಾಟಿಸಿದರು. ಈ ವಸ್ತು ಪ್ರದರ್ಶನ ವೀಕ್ಷಿಸಲು ಮಾರ್ಚ್ 4 ರಿಂದ ಮಾರ್ಚ್ 9 ರವರೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ.

ಈ ಪ್ರದರ್ಶನದ ವಿಶೇಷವೆಂದರೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅರ್ಥವಾಗಲೆಂಬ ಕಾರಣಕ್ಕೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿರಲಿದೆ. ಜೆಮ್‍ಶೆಡ್ ಜಿ ಎನ್. ಟಾಟಾ ಅವರ ದೂದೃಷ್ಟಿ, ಪರಿಶ್ರಮ, ದೇಶದ ಉದ್ಯಮ ಕ್ಷೇತ್ರಕ್ಕೆ ಮೊದಲ ವಿಮಾನವನ್ನು ಪರಿಚಯಿಸಿದ ಹೆಗ್ಗಳಿಕೆಯ ಮುತ್ಸದ್ದಿ ಮತ್ತು ದೇಶಕ್ಕಾಗಿ ಅವರು ತೋರಿದ ಪ್ರೀತಿಯ ಹೆಜ್ಜೆಗಳು ಮತ್ತು ತತ್ತ್ವಗಳನ್ನು ಇಂದಿನ ಭಾರತೀಯ ಯುವಪೀಳಿಗೆ ಪಾಲಿಸಲು ಮಾಡುವ ಉದ್ದೇಶದಿಂದ ಟಾಟಾ ಸೆಂಟ್ರಲ್ ಆಕ್ರೈವ್ಸ್ ಈ ವಸ್ತು ಪ್ರದರ್ಶನವನ್ನು ರೂಪಿಸಿದೆ. ಈ ಪ್ರದರ್ಶನವನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

Tata Central Archives brings the 6th edition of the Moving Exhibition on Jamsetji N. Tata to Bengaluru

ಜೆಮ್‍ಶೆಡ್ ಜಿ ಎನ್. ಟಾಟಾ ಅವರು ಆರಂಭಿಸಿದ ಉದ್ಯಮಗಳು ನಡೆದು ಬಂದ ಹಾದಿ, ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಪರಿಸರ ಮತ್ತು ಸಮಾಜ ಕಲ್ಯಾಣಕ್ಕೆ ಸಲ್ಲಿಸಿದ ಸೇವೆಯನ್ನು ಬಿಂಬಿಸಲಾಗುತ್ತಿದೆ. ಜೆಮ್‍ಶೆಡ್ ಜಿ ಎನ್. ಟಾಟಾ ಅವರ ಯಶೋಗಾಥೆಯನ್ನು ಹೇಳುವ ಕೀಪರ್ಸ್ ಆಫ್ ದಿ ಫ್ಲೇಮ್ ಎಂಬ ಕಿರುಚಿತ್ರ, ರಸಪ್ರಶ್ನೆ ಕಾರ್ಯಕ್ರಮಗಳೊಂದಿಗೆ ಈ ವಸ್ತು ಪ್ರದರ್ಶನ ಅಂತ್ಯಗೊಳ್ಳುತ್ತದೆ.

ಟಾಟಾ ಸರ್ವೀಸಸ್ ನ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿರುವ ಫಾರೂಖ್ ಎನ್.ಸುಬೇದಾರ್ ಅವರು ಮಾತನಾಡಿ, 'ಟಾಟಾ ಸೆಂಟ್ರಲ್ ಆಕ್ರೈವ್ಸ್ ಟಾಟಾ ಪರಂಪರೆಯ ಮೇಲ್ವಿಚಾರಕನಿದ್ದಂತೆ. ದೂರದೃಷ್ಟಿ ಹೊಂದಿದ್ದ, ಪರೋಪಕಾರಿ ಮತ್ತು ಉದ್ಯಮಿಯಾಗಿ ದೇಶಕ್ಕೆ ಹೆಮ್ಮೆ ತಂದುಕೊಟ್ಟ ಜೆಮ್‍ಶೆಡ್‍ಜಿ ಎನ್. ಟಾಟಾ ಅವರ ಜೀವನ ಚಿತ್ರದ ಆಧಾರದ ಮೇಲೆ ಈ ಪ್ರದರ್ಶನವನ್ನು ರೂಪಿಸಲಾಗಿದೆ. ಈ ವಿಶೇಷ ಪ್ರದರ್ಶನದ ಮೂಲಕ ಇಂದಿನ ಯುವ ಪೀಳಿಗೆ ಮೇಲೆ ಜೆಮ್‍ಶೆಡ್‍ಜಿ ಎನ್.ಟಾಟಾ ಅವರು ಪ್ರೇರಣ ಶಕ್ತಿಯಾಗಲಿದ್ದಾರೆ ಎಂಬ ವಿಶ್ವಾಸ ನಮಗಿದೆ'' ಎಂದು ತಿಳಿಸಿದರು.

Tata Central Archives brings the 6th edition of the Moving Exhibition on Jamsetji N. Tata to Bengaluru

ಐಐಎಸ್ ಸಿ ಮಂಡಳಿಯ ಅಧ್ಯಕ್ಷರಾದ ಪ್ರೊ.ಪಿ.ರಾಮರಾವ್ ಅವರು ಮಾತನಾಡಿ, ನಮ್ಮ ಸಂಸ್ಥೆಯ ಸಂಸ್ಥಾಪಕರಾದ ಹೆಮ್ಮೆಯ ಜೆಮ್‍ಶೆಡ್ ಜಿ ಎನ್.ಟಾಟಾ ಅವರ ಹುಟ್ಟುಹಬ್ಬದ ಅಂಗವಾಗಿ ಈ ವಿಶೇಷ ವಸ್ತು ಪ್ರದರ್ಶನದ ಆತಿಥ್ಯ ವಹಿಸುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಐಐಎಸ್ ‍ಸಿ ಜೆಮ್‍ಶೆಡ್ ‍ಜಿ ಅವರ ಕನಸಿನ ಕೂಸು. ಭಾರತೀಯ ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಉನ್ನತ ಶಿಕ್ಷಣ ನೀಡಬೇಕೆಂಬ ಅವರು ಕಂಡಿದ್ದ ಕನಸನ್ನು ಈ ಐಐಎಸ್ ‍ಸಿಯನ್ನು ಆರಂಭಗೊಳಿಸುವ ಮೂಲಕ ಸಾಕಾರಗೊಳಿಸಿದ್ದರು'' ಎಂದು ತಿಳಿಸಿದರು.

ಐಐಎಸ್ ಸಿಯ ರಿಸೆಪ್ಷನ್ ಹಾಲ್‍ನಲ್ಲಿ ಈ ವಸ್ತು ಪ್ರದರ್ಶನ ನಡೆಯಲಿದ್ದು, ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಮುಂಗಡ ಬುಕ್ಕಿಂಗ್ ಆಧಾರದ ಮೇಲೆ ಮುಕ್ತ ಪ್ರವೇಶ ಇರುತ್ತದೆ.

English summary
On the occasion of his 178th birth anniversary and IISc's Founder's Day celebration. Tata Central Archives brings the 6th edition of the Moving Exhibition on Jamsetji N. Tata to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X