ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಟಾಟಾ ಸಂಸ್ಥೆಯಿಂದ ಸ್ವಚ್ಛ ಭಾರತದ ಬಗ್ಗೆ ಪ್ರಬಂಧ ಸ್ಪರ್ಧೆ

By Mahesh
|
Google Oneindia Kannada News

ಬೆಂಗಳೂರು, ನ. 27:'ಟಾಟಾ ಬಿಲ್ಡಿಂಗ್ ಇಂಡಿಯಾ' ಶಾಲಾ ಪ್ರಬಂಧ ಸ್ಪರ್ಧೆ 2014-15'ರ ಕರ್ನಾಟಕದ ವಿಜೇತರನ್ನು ಟಾಟಾ ಸಮೂಹ ಬೆಂಗಳೂರಿನಲ್ಲಿ ಅಭಿನಂದಿಸಿ ಗೌರವಿಸಿದೆ.

'ಸ್ವಚ್ಛ ಭಾರತ' ಎಂಬ ವಿಷಯದ ಮೇಲೆ ಪ್ರಬಂಧ ಬರೆಯುವಾಗ ಸ್ಪರ್ಧಿಗಳು ತೋರಿಸಿದ ಕೌಶಲ್ಯ ಮತ್ತು ಆಲೋಚನೆಯನ್ನು ವಿಜೇತರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕದ 19 ನಗರಗಳ ಸ್ಪರ್ಧಿಗಳು ಸೇರಿದಂತೆ 625 ಶಾಲೆಗಳಿಂದ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಂಗ್ಲಿಷ್ ಆವೃತ್ತಿಯ ಸ್ಪರ್ಧೆಯಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಗುಲ್ಬರ್ಗ, ಮೈಸೂರಿನಂಥ ನಗರದ 175 ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡ ಆವೃತ್ತಿಗೆ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಗುಲ್ಬರ್ಗ, ಬೆಳಗಾವಿ, ಮಂಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ರಾಯಚೂರು, ಮಂಡ್ಯ, ಹಾಸನ, ಬಿಜಾಪುರ, ಕೋಲಾರ ನಗರಗಳಿಂದ ಸುಮಾರು 450 ಶಾಲಾ ಮಕ್ಕಳು ಭಾಗವಹಿಸಿದ್ದರು.

Tata Building India School Essay Competition Karnataka

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಐಸಿಎಸ್‍ಇ ಬೋರ್ಡ್ ಕರ್ನಾಟಕದ ಸ್ಥಳೀಯ ಮುಖ್ಯಸ್ಥೆ ಬಿ.ಗಾಯತ್ರಿ ದೇವಿ ಅವರು ವಿಜೇತರನ್ನು ಅಭಿನಂದಿಸಿ ಮಾತನಾಡಿದ, ತಮ್ಮ ಆಲೋಚನೆಗಳನ್ನು ಸುಂದರವಾಗಿ ಅಕ್ಷರ ರೂಪಕ್ಕೆ ಇಳಿಸಿದ ಮಕ್ಕಳದ್ದು ಹೆಗ್ಗುರುತಿನ ಸಾಧನೆ.

ನಾನು ಪ್ರತಿಯೊಬ್ಬ ವಿಜೇತ ಮಕ್ಕಳು ಮತ್ತು ಪಾಲಕರನ್ನು ಅಭಿನಂದಿಸುತ್ತೇನೆ. ಭಾರತದ ಮುಂಚೂಣಿ ಬ್ರ್ಯಾಂಡ್ ನಿಂದ ಭಾರತದ ಯುವ ಮನಸ್ಸುಗಳನ್ನು ತಲುಪುವ ಅದ್ಭುತ ಕಾರ್ಯಕ್ರಮವಿದು. ನಾನು ಮಕ್ಕಳನ್ನು ದೊಡ್ಡ ಕನಸು ಕಾಣಲು ಮತ್ತು ಆ ಕನಸು ನನಸಾಗುವಂತೆ ಕೆಲಸ ಮಾಡಲು ಸದಾ ಉತ್ತೇಜಿಸುತ್ತೇನೆ ಎಂದರು.

2006ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಆರಂಭಗೊಂಡ ಸ್ಪರ್ಧೆ ಪ್ರತಿ ವರ್ಷ ಭಾರತದ ಯುವ ಮನಸ್ಸುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜನೆಗೊಳ್ಳುತ್ತಿದೆ. ಈ ಮೂಲಕ ಟಾಟಾ ಸಮೂಹದ ಕಂಪನಿಗಳು ಭಾರತದ ಯುವ ಮನಸ್ಸುಗಳಿಗೆ ರಾಷ್ಟ್ರ ನಿರ್ಮಾಣಕ್ಕೆ ಸ್ಪೂರ್ತಿ ನಿಡುತ್ತವೆ. ನಾಳಿನ ಯುವ ನಾಯಕರನ್ನು ಉತ್ತೇಜಿಸಲು ಈ ಪ್ರಬಂಧ ಸ್ಪರ್ಧೆ ಅನನ್ಯವಾದ ವೇದಿಕೆ ಕಲ್ಪಿಸುತ್ತಿದೆ. 2104-15ರ ಸ್ಪರ್ಧೆಯ ಧ್ಯೇಯ ಸ್ವಚ್ಛ ಭಾರತ.

ಸ್ಪರ್ಧೆ ಕುರಿತು: 2006ರಲ್ಲಿ 1 ಲಕ್ಷ ವಿದ್ಯಾರ್ಥಿಗಳೊಂದಿಗೆ 6 ನಗರಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಆರಂಭವಾದ ಸ್ಪರ್ಧೆ, ಇಂದು ದೇಶದ ಶಾಲಾ ಮಟ್ಟದ ಬೃಹತ್ ಸ್ಪರ್ಧೆ ಎನಿಸಿದೆ. 12 ಭಾಷೆಗಳು, 200 ನಗರದ 7,000 ಶಾಲೆಗಳಿಂದ ದೇಶದ 30 ಲಕ್ಷ ವಿದ್ಯಾರ್ಥಿಗಳನ್ನು ಸ್ಪರ್ಧೆ ತಲುಪಿದೆ.

ಬಹುಮಾನ: ಶಾಲಾ ಮಟ್ಟ, ನಗರ ಮಟ್ಟ, ರಾಷ್ಟ್ರಮಟ್ಟ ಪ್ರತಿ ಹಂತದ ವಿಜೇತರಿಗೆ ಬಹುಮಾನ ಪಡೆಯುತ್ತಾರೆ. ಶಾಲಾ ಮಟ್ಟದ ವಿಜೇತರಿಗೆ ಸರ್ಟಿಫಿಕೆಟ್, ಮೆಡಲ್ ಮತ್ತು ವಿಶೇಷ ಟಾಟಾ ಬಿಲ್ಡಿಂಗ್ ಬಟ್ಟೆಯನ್ನು ನೀಡಲಾಗುವುದು.

ನಗರ ಮಟ್ಟದ ವಿಜೇತರು ಮತ್ತು ರನ್ನರ್ ಅಪ್ ಕ್ಯಾಮೆರಾ ಮತ್ತು ಮ್ಯೂಸಿಕ್ ಪ್ಲೇಯರ್ ನಂಥ ಬಹುಮಾನ ಪಡೆಯುತ್ತಾರೆ. ರಾಷ್ಟ್ರಮಟ್ಟದ ವಿಜೇತರು ಟ್ರೋಫಿಯೊಂದಿಗೆ ಲ್ಯಾಪ್‍ಟಾಪ್ ಬಹುಮಾನ ಪಡೆಯುತ್ತಾರೆ. ರಾಷ್ಟ್ರಮಟ್ಟದ ವಿಜೇತರು ಮತ್ತು ರನ್ನರ್ ಅಪ್ ಗಳು ದೆಹಲಿಯಲ್ಲಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸಂವಾದ ನಡೆಸುವ ಅವಕಾಶವಿದೆ.

English summary
The Tata Building India School Essay Competition is one of the key initiatives undertaken by the Tata group of companies to motivate the youth of India towards thinking about nation building. The essay competition provides a unique platform to encourage young leaders of tomorrow to showcase their expressions in writing, on a host of subjects related to nation building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X