ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಲಸೂರು ಕೆರೆ ಸ್ವಚ್ಛ ಮಾಡಿದ ತಮಿಳುನಾಡಿನ ತಂಬಿಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 11: ತಮಿಳುನಾಡು-ಕರ್ನಾಟಕ ಬಹಳಷ್ಟು ಸಾಮ್ಯತೆಗಳಿದ್ದರೂ ಸಹ ಕುಡಿಯುವ ನೀರಿನ ವಿಷಯಕ್ಕೆ ಆಗಾಗ್ಗೆ ಎರಡೂ ದ್ರಾವಿಡ ರಾಜ್ಯಗಳ ನಡುವೆ ವೈರತ್ವದ ಹೊಗೆ ಆಡುತ್ತಲೇ ಇರುತ್ತದೆ. ಆದರೆ ಆ ದ್ವೇಷದ ಗೆರೆ ಅಳಿಸುವ ಕಾರ್ಯವೊಂದು ನಿನ್ನೆ ನಡೆದಿದೆ.

ಬರೋಬ್ಬರಿ 1000 ಮದ್ರಾಸಿ ತಂಬಿ (ತಮಿಳುನಾಡಿನ ಸಹೋದರರು) ಬೆಂಗಳೂರಿನ ಪ್ರಮುಖ ಕೆರೆಯಾದ ಅಲಸೂರು ಕೆರೆಯನ್ನು ಸ್ವಚ್ಛ ಮಾಡಿದ್ದಾರೆ.

ಕೆರೆಗಳ ಬಫರ್ ಝೋನ್: ಎನ್‌ಜಿಟಿಗೆ ಮತ್ತೆ ಮೊರೆ ಹೋಗಲು ಚಿಂತನೆಕೆರೆಗಳ ಬಫರ್ ಝೋನ್: ಎನ್‌ಜಿಟಿಗೆ ಮತ್ತೆ ಮೊರೆ ಹೋಗಲು ಚಿಂತನೆ

ಹೌದು, ಭಾರತೀಯ ಸೇನೆಯ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಫ್‌ನ ಸ್ಯಾಪರ್ಸ್ಸ್‌ (ಸಾಮಾಜಿಕ ಕಾರ್ಯಗಳಿಗೆ ಯೋಜಿತವಾದ ಯೋಧರು) ನಿನ್ನೆ (ಬುಧವಾರ) ಬೆಳಿಗ್ಗೆಯಿಂದ ಸತತ 8-9 ಗಂಟೆಗಳ ಕಾಲ ಅಲಸೂರು ಕೆರೆಯನ್ನು ಸ್ವಚ್ಛ ಮಾಡಿದ್ದಾರೆ.

Tamilnadu soldier team cleans Bengalurus halasuru lake

ಕೆರೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಕಂಪನಿಗಳ ನೆರವು ಕೋರಿದ ಡಿಸಿಎಂ ಕೆರೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಕಂಪನಿಗಳ ನೆರವು ಕೋರಿದ ಡಿಸಿಎಂ

ಬೆಳಿಗ್ಗೆಯಿಂದ ದುಡಿದ ಯೋಧರು ನೀರಿನಿಂದ ಟನ್‌ಗಟ್ಟಲೆ ಕೊಳಕನ್ನು ಹೊರ ತೆಗೆದಿದ್ದಾರೆ. ಕೊಳಕು ನೀರಿನಲ್ಲಿ ಬೆಳೆದಿದ್ದ ಜೊಂಡು, ಪ್ಲಾಸ್ಟಿಕ್‌ ಬಾಟಲಿಗಳು, ಇನ್ನಿತರ ವಿಷಕಾರಿ ಘನತ್ಯಾಜ್ಯಗಳನ್ನು ನೀರಿನಿಂದ ಹೊರತೆಗೆದು ಸ್ವಚ್ಛತೆ ಮಾಡಿದ್ದಾರೆ.

ವರ್ತೂರು ಕೆರೆಯಲ್ಲಿ ಮತ್ತೆ ಭುಗಿಲೆದ್ದ ನೊರೆ: ಸುತ್ತಲಿನ ನಿವಾಸಿಗಳಿಗೆ ಆತಂಕವರ್ತೂರು ಕೆರೆಯಲ್ಲಿ ಮತ್ತೆ ಭುಗಿಲೆದ್ದ ನೊರೆ: ಸುತ್ತಲಿನ ನಿವಾಸಿಗಳಿಗೆ ಆತಂಕ

ಇದೇ ತಂಡ ಏಪ್ರಿಲ್‌ನಲ್ಲಿ ಇದೇ ಅಲಸೂರು ಕೆರೆಯನ್ನು ಸ್ವಚ್ಛಗೊಳಿಸಿತ್ತು ಆಗ ಸರಿಸುಮಾರು 70 ಟನ್ ಕಸ ಹೊರತೆಗೆದಿತ್ತು. ಆದರೆ ಈ ಬಾರಿ ಅದಕ್ಕೂ ಹೆಚ್ಚು ಟನ್ ಕಸ ಹೊರತೆಗೆದಿರುವುದಾಗಿ ತಂಡ ಹೇಳಿದೆ. ಬಿಬಿಎಂಪಿ ಕಸದ ವಾಹನಗಳೇ ಕೆರೆಗೆ ಕಸ ಸುರಿಯುತ್ತಿರುವ ಬಗ್ಗೆ ಎಂಇಜೆ ತಂಡ ಬೇಸರ ವ್ಯಕ್ತಪಡಿಸಿದೆ.

English summary
Madras Soldier group of 1000 members cleaned Bengaluru's Halsuru lake on wednesday. They pulled up 100 tons of garbage from the lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X