ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ನೆರವು ತಿರಸ್ಕರಿಸಿದ ಸಿಎಂ ಜಯಲಲಿತಾ

By Mahesh
|
Google Oneindia Kannada News

ಬೆಂಗಳೂರು, ಡಿ. 04: ಭಾರಿ ಮಳೆಯಿಂದ ಪರದಾಡುತ್ತಿರುವ ತಮಿಳುನಾಡಿನ ಜನತೆಯ ಗಂಜಿ ಊಟಕ್ಕೆ ನೆರವಾಗಲು ದೊಡ್ಡ ಮನಸ್ಸು ಮಾಡಿ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಕರ್ನಾಟಕ ಸರ್ಕಾರಕ್ಕೆ ಮುಖಭಂಗವಾಗಿದೆ. ಕರ್ನಾಟಕ ಸರ್ಕಾರ ಸೇರಿದಂತೆ ಇತರೆ ರಾಜ್ಯಗಳ ಹಣ ಸಹಾಯವನ್ನು ಸ್ವೀಕರಿಸಲು ತಮಿಳುನಾಡು ಸರ್ಕಾರ ಮುಂದಾಗಿಲ್ಲ.

ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನೀಡಿದ್ದ 5 ಕೋಟಿ ರೂ.ಗಳ ನೆರವನ್ನು ಜಯಲಲಿತಾ ಅವರ ಸರಕರ ತಿರಸ್ಕರಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿಯವರು ತಮಿಳುನಾಡಿನ ಮುಖ್ಯ ಕಾರ್ಯದರ್ಶಿಯವರಿಗೆ ಫೋನ್ ಮಾಡಿ ತಮ್ಮ ಅಗತ್ಯ ವಸ್ತುಗಳ ಬೇಡಿಕೆ ನೀಡುವಂತೆ ಕೋರಿದ್ದರು. ಅದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. [ಚೆನ್ನೈ ಮಹಾ ಪ್ರವಾಹಕ್ಕೂ ಜಗ್ಗದ-ಕುಗ್ಗದ ಬಸ್!]

ಕೇಂದ್ರ ಸರ್ಕಾರ ನೀಡಿರುವ ಅನುದಾನ ನಮ್ಮ ಬಳಿ ಇದೆ. ಯಾವ ರಾಜ್ಯಗಳಿಂದಲೂ ನೆರವಿನ ಅಗತ್ಯ ಸದ್ಯಕ್ಕಿಲ್ಲ. ಅಗತ್ಯಬಿದ್ದರೆ ಸಂಪರ್ಕಿಸಿ ನೆರವು ಪಡೆಯಲಾಗುವುದು ಎಂದು ತಮಿಳುನಾಡು ಅಧಿಕಾರಿಗಳು ತಿಳಿಸಿದ್ದಾರೆ.

Tamil Nadu government Refuses assistance offered by Karnataka

ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಕರ್ನಾಟಕ, ದೆಹಲಿ, ಬಿಹಾರ, ಒಡಿಶಾ ಹಾಗೂ ಕೇರಳ ಸರ್ಕಾರಗಳು ತಲಾ 5 ಕೋಟಿ ರುಪಾಯಿ ಪರಿಹಾರ ನೀಡಲು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು. [ಚೆನ್ನೈ : ವಿವಾದಕ್ಕೆ ಸಿಲುಕಿದ ಮೋದಿ ವೈಮಾನಿಕ ವೀಕ್ಷಣೆ ಚಿತ್ರ]

ಚೆನ್ನೈನಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಹೆಚ್ಚುವರಿ 1 ಸಾವಿರ ಕೋಟಿ ರು ಘೋಷಿಸಿದ್ದರು. ಅದರೆ, ತಮಿಳುನಾಡು ಸರ್ಕಾರ 5 ಸಾವಿರ ಕೋಟಿ ರು ಬೇಡಿಕೆ ನೀಡಿದೆ. ದಕ್ಷಿಣ ಭಾರತದ ಸಿನಿ ತಾರೆಯರು, ಎನ್ ಜಿಒಗಳು ನೆರವಿನ ಹಸ್ತ ಚಾಚುತ್ತಿವೆ. [ಚೆನ್ನೈ ಪ್ರವಾಹ ಇಳಿದಿದೆ, ಬದುಕು ಮಾತ್ರ ಇನ್ನೂ ಅತಂತ್ರ]

ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರ ನಡುವೆ ಕಾವೇರಿ ವಿವಾದ ಇನ್ನೂ ಜಾರಿಯಲ್ಲಿದೆ. ಸಿಎಂ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ಕಾನೂನು ಸಮರಕ್ಕೆ ಕರ್ನಾಟಕ ಸರ್ಕಾರವೇ ವೇದಿಕೆ ಒದಗಿಸಿರುವುದನ್ನು ಮರೆಯುವಂತಿಲ್ಲ.

ಜೆಡಿಎಸ್ ಪಕ್ಷ ಕೂಡಾ 1 ಕೋಟಿ ರು ಪರಿಹಾರ ಧನ ಘೋಷಿಸಿತ್ತು, ಅದರೆ, ಅದು ಕೂಡಾ ಸ್ವೀಕಾರವಾಗಿಲ್ಲ ಎಂಬ ಸುದ್ದಿ ಬಂದಿದೆ. ಈ ಸುದ್ದಿ ಬೇಸರ ತರಿಸಿದೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
The Tamil Nadu government has reportedly refused the Rs 5 crore humanitarian assistance offered by the Karnakata government for the state hit by massive rain and floods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X