ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಶಾಲೆಯಲ್ಲಿ ತಮಿಳು ಬೋರ್ಡು: ಸರ್ಕಾರಕ್ಕೆ ಕಣ್ಣಿದ್ದೂ ಕುರುಡು

|
Google Oneindia Kannada News

ಬೆಂಗಳೂರು, ಜನವರಿ 25: ರಾಜ್ಯದಲ್ಲಿ ಹಿಂದಿ ಭಾಷೆ ಹೇರಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.ಸರ್ಕಾರವು ಕೂಡ ಇದರ ಬಗ್ಗೆ ಟೀಕೆಯನ್ನು ವ್ಯಕ್ತಪಡಿಸುತ್ತಿವೆ. ಆದರೆ ನಗರದ ಹೃದಯ ಭಾಗದಲ್ಲಿಯೇ ಕನ್ನಡ ಸರ್ಕಾರಿ ಶಾಲೆಯ ಮೇಲೆ ತಮಿಳು ಹೇರಿಕೆಗೆ ಸರ್ಕಾರದ ಮೌನ ಆಶ್ಚರ್ಯ ಮೂಡಿಸಿದೆ.

ಸರ್ಕಾರಿ ಶಾಲೆಯ ನಾಮಫಲಕಗಳಲ್ಲಿ ತಮಿಳಿನಲ್ಲಿ ಬರೆದಿರುವುದು ಆಶ್ಚರ್ಯ ಮೂಡಿಸಿದೆ ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆ ಆರಂಭವಾಗಿದೆ.ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರಿ ಶಾಲೆಯಲ್ಲಿ ಕನ್ನಡದ ನಾಮಫಲಕದ ಜೊತೆಗೆ ತಮಿಳು ಭಾಷೆಯಲ್ಲಿ ಹಾಕಿದ್ದರೂ ಸರ್ಕಾರ ಯಾಕೆ ಜಾಣ ಕುರುಡು ಪ್ರದರ್ಶಿಸುತ್ತಿದೆ ಎನ್ನುವುದು ಪ್ರಶ್ನೆಯಾಗಿದೆ.ಇತ್ತೀಚೆಗೆ ಸರ್ಕಾರವು ಮಲಯಾಳಂ, ತಮಿಳು ಶಾಲೆಗಳನ್ನೂ ಅಲ್ಲಿಯ ಮಕ್ಕಳ ಅನುಕೂಲಕ್ಕಾಗಿ ತೆರೆದಿದೆ. ಅದರ ಜೊತೆಗೆ ಕನ್ನಡವನ್ನೂ ಬೋಧಿಸಲಾಗುತ್ತಿದೆ.

Tamil board in Kannada medium govt school

ಆದರೆ ಇದಕ್ಕೆ ತಮಿಳುನಾಡಿನ ಪೋಷಕರು ಅಸಮಧಾನಗೊಂಡಿದ್ದು ಕಂಡು ಬಂದಿತ್ತು. ನಮ್ಮ ಮಕ್ಕಳಿಗೆ ಬಲವಂತವಾಗಿ ಕನ್ನಡವನ್ನು ಹೇರಲಾಗುತ್ತಿದೆ ಕನ್ನಡ ಶಾಲೆಗೆ ಕಳುಹಿಸುವುದಿಲ್ಲ ಎನ್ನುವ ಮಾತುಗಳೂ ಕೂಡ ಕೇಳಿಬಂದಿತ್ತು.ಆದರೆ ಇದೀಗ ನಾವು ನೋಡುತ್ತಿರುವುದು ತಮಿಳು ಶಾಲೆಯಲ್ಲ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಾಮಫಲಕದಲ್ಲಿ ಕನ್ನಡದ ಜೊತೆಗೆ ತಮಿಳು ಭಾಷೆಯಲ್ಲಿ ಹಾಕಲಾಗಿದೆ.

ಆದರೆ ಇದು ನಡೆದಿರುವುದು ತಮಿಳುನಾಡು, ಕರ್ನಾಟಕದ ಗಡಿ ಪ್ರದೇಶದಲ್ಲಲ್ಲ ಬೆಂಗಳೂರಿನ ಹೃದಯ ಭಾಗ ಚಾಮರಾಜಪೇಟೆಯ ಶಾಲೆಯೊಂದರಲ್ಲಿ ಈ ನಾಮಫಲಕವನ್ನು ಅಳವಡಿಸಲಾಗಿದೆ. ಇಷ್ಟ ವರ್ಷವಾದರೂ ಯಾರೂ ಇದನ್ನು ಗಮನಿಸಿಲ್ಲವೇ ಅಥವಾ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆಯೇ ಎನ್ನುವುದು ಪ್ರಶ್ನೆಯಾಗಿದೆ.

English summary
Tamil board in Kannada Government school at Chamrajpet. This picture has been viral in social media. our question is Who will look into this matter or is it perfectly all right to have just a Tamil board for a kannada medium school?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X