• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೃಹತ್ ರಾಷ್ಟ್ರಧ್ವಜ ಸ್ತಂಭ ಬೆಂಗಳೂರಿನಲ್ಲಿ ಅನಾವರಣ

By Srinath
|

ಬೆಂಗಳೂರು, ಜ.23: ಇಡೀ ದೇಶ ಗಣರಾಜ್ಯೋತ್ಸವ ಆಚರಣೆಗೆ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ದೇಶದಲ್ಲಿಯೇ ಅತಿ ಎತ್ತರದ, ದೊಡ್ಡ ರಾಷ್ಟ್ರಧ್ವಜ ಸ್ತಂಭವನ್ನು ಪ್ರತಿಷ್ಠಾಪಿಸಲಾಗಿದೆ.

ಭಾರದ್ವಾಜರಿಂದ ಧ್ವಜ ಅನಾವರಣ: 213 ಅಡಿ ಎತ್ತರದ ಧ್ವಜ ಸ್ತಂಭವು ಚೌಡಯ್ಯ ರಸ್ತೆಯಲ್ಲಿರುವ (ನೆಹರೂ ತಾರಾಲಯದ ಎದುರಿಗೆ) ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ವಹಣಾ ಟ್ರಸ್ಟ್ ಕೇಂದ್ರದಲ್ಲಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಇಂದು ಇದೇ ಸ್ತಂಭದ ಮೇಲಿಂದ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಲೋರ್ಕಾಪಣೆಗೊಳಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸತ್ ಸದಸ್ಯರಾದ ರಾಜೀವ್ ಚಂದ್ರಶೇಖರ್, ಅನಂತಕುಮಾರ್, ನವೀನ್ ಜಿಂದಾಲ್ ಉಪಸ್ಥಿತರಿದ್ದರು.

ರಾಷ್ಟ್ರ ಧ್ವಜ ಸಂಹಿತೆಯ ( Flag Code of India ) ಪ್ರಕಾರ ಧ್ವಜವನ್ನು 24 ಗಂಟೆಯೂ ಹಾರಿಬಿಡುವಂತಿಲ್ಲ. ಆದರೆ ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ವಹಣಾ ಟ್ರಸ್ಟ್ ಕೇಂದ್ರದಲ್ಲಿ ವಿಶೇಷವಾಗಿ ಹಾರಿಬಿಡಲು ಇತ್ತೀಚೆಗೆ ಅನುಮತಿ ಪಡೆಯಲಾಗಿದೆ. ಈ ಚಾರಿತ್ರಿಕ ತೀರ್ಪು ಜನವರಿ 23ರಂದು 2004ರಂದು ಹೊರಬಿದ್ದ ಕಾರಣ ಆ ನೆನಪಿನಲ್ಲಿ ಇಂದೇ ಧ್ವಜ ಅನಾವರಣ ಮಾಡಲಾಗಿದೆ.

ಹೀಗಿದೆ ರಾಷ್ಟ್ರಧ್ವಜ ಸ್ತಂಭ:

213 ಅಡಿ ಎತ್ತರದ ಧ್ವಜಸ್ತಂಭದಲ್ಲಿ 48 ಅಡಿ ಉದ್ದ, 72 ಅಡಿ ಅಗಲದ, 31 ಕೆಜಿ ತೂಕದ ರಾಷ್ಟ್ರಧ್ವಜ ಇದಾಗಿದೆ. ಗಣರಾಜ್ಯೋತ್ಸವಕ್ಕೆ ಮೂರು ದಿನಕ್ಕೆ ಮುಂಚೆ ಇದರ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಸಂಸದ, National Military Memorial Committee ಅಧ್ಯಕ್ಷ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಇದು 24x7 ಜಮಾನಾ!

ಈಗಂತೂ ಬಿಡಿ ಹಗಲು ರಾತ್ರಿ ಅನ್ನದೆ ಎಲ್ಲವೂ ಇಡೀ ದಿನ ನೇರವೇರುತ್ತಿರುತ್ತದೆ. ಈ ಧ್ವಜವೂ ಹಾಗೆಯೇ ಹಗಲು ರಾತ್ರಿ ಹಾರಾಡುತ್ತಿರುತ್ತದೆ. ದೀಪಾಲಂಕಾರದಿಂದ ಆವೃತವಾದ ಈ ಧ್ವಜವು ಬೆಂಗಳೂರಿನ ಯಾವುದೇ ಮೂಲೆಯಿಂದ ನೋಡಿದರೂ ಕಾಣಸಿಗುತ್ತದೆ. Remote control ನಿಂದ ಈ ಧ್ವಜವನ್ನು ನಿಯಂತ್ರಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ರಾಜೀವ್ ಚಂದ್ರಶೇಖರ್, ಈ ಬೃಹತ್ ರಾಷ್ಟ್ರಧ್ವಜ ಎಲ್ಲರಿಗೂ ಸ್ಫೂರ್ತಿಯಾಗಲಿದೆ. ಭಾರತದಲ್ಲೇ ಅತೀ ದೊಡ್ಡ ರಾಷ್ಟ್ರಧ್ವಜ ಇದಾಗಿದ್ದು, ಪ್ರತಿದಿನವೂ ಹಗಲು ರಾತ್ರಿ ಹಾರಾಡಲಿದೆ ಎಂದು ತಿಳಿಸಿದರು. ಸುಮಾರು 50 ಲಕ್ಷ ರೂ. ವೆಚ್ಚದ ಯೋಜನೆ ಇದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India’s tallest flag pole’s unveiled at National Military Memorial Bangalore. The flag - measuring 48 feet wide, 213 feet height, 72 feet tall and weighing 31 kg - Governor HR Bhardwaj and Chief Minister Siddaramaiah attended the flag hoisting ceremony today (January 23). Rajeev Chandrashekar, member of Parliament and chairman of the National Military Memorial Committee was also present at the function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more