ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ.

|
Google Oneindia Kannada News

ಬೆಂಗಳೂರು, ಜನವರಿ 03: ಇದೇ ಸೋಮವಾರದಿಂದ(ಜನವರಿ 04) ಮೂರು ಜೋಡಿ ರೈಲುಗಳು ಬೆಂಗಳೂರು ರೈಲು ನಿಲ್ದಾಣ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚರಿಸಲಿದೆ.

ವಿಮಾನ ನಿಲ್ದಾಣಕ್ಕೆ ಮೂರು ಹೊಸ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲುಗಳನ್ನು ಶುಕ್ರವಾರ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ತಿಳಿಸಿದ್ದಾರೆ. ಎರಡು ರೈಲುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ ರೈಲು ನಿಲ್ದಾಣದಿಂದ ದೇವನಹಳ್ಳಿವರೆಗೆ ಸಂಚರಿಸಿದರೆ, ಮತ್ತೊಂದು ಯಲಹಂಕದಿಂದ ದೇವನಹಳ್ಳಿಯವರೆಗೂ ಸಂಚರಿಸಲಿದೆ. ಮೊದಲ ರೈಲು ಬೆಳಿಗ್ಗೆ 4-45ಕ್ಕೆ ಕ್ರಾಂತಿವೀರ ರೈಲು ನಿಲ್ದಾಣದಿಂದ ನಿರ್ಗಮಿಸಿದರೆ ರಾತ್ರಿ 9ಕ್ಕೆ ಕೊನೆಯ ರೈಲು ಇದೆ.

ಜ.4ರಿಂದ ಮುಂಗಡ ಬುಕ್ಕಿಂಗ್ ಇಲ್ಲದ ಮೆಮು/ಡೆಮು ರೈಲು ಸಂಚಾರಜ.4ರಿಂದ ಮುಂಗಡ ಬುಕ್ಕಿಂಗ್ ಇಲ್ಲದ ಮೆಮು/ಡೆಮು ರೈಲು ಸಂಚಾರ

ಮೊದಲು ರೈಲು ಬೆಳಗ್ಗೆ 4.45ಕ್ಕೆ ಕ್ರಾಂತಿವೀರ ರೈಲು ನಿಲ್ದಾಣದಿಂದ ಹೊರಡಲಿದ್ದು, ಬೆಳಗ್ಗೆ 5.50ಕ್ಕೆ ಏರ್ ಪೋರ್ಟ್ ತಲುಪಲಿದೆ. ಒಂದು ಕಡೆಯಿಂದ ಸಂಚರಿಸಲು 10ರಿಂದ 15 ರೂ.ಶುಲ್ಕವಿರಲಿದೆ. ಇದರಿಂದಾಗಿ ಏರ್ ಪೋರ್ಟ್ ಗೆ ತಲುಪಲು ಟ್ಸಾಕ್ಸಿ ಮತ್ತು ವಾಯು ವಜ್ರ ಬಸ್ಸುಗಳಿಗಾಗಿ ದುಬಾರಿ ಮೊತ್ತ ಪಾವತಿಸುತ್ತಿದ್ದ ಪ್ರಯಾಣಿಕರಿಗೆ ನೆಮ್ಮದಿ ದೊರೆತಂತಾಗಿದೆ.

Take A Train To The Kempegowda International Airport For Just Rs 10

ಯಲಹಂಕದಿಂದ ಡೆಮೊ ರೈಲೊಂದು ಬೆಳ್ಳಗೆ 7 ಗಂಟೆಗೆ ನಿರ್ಗಮಿಸಲಿದೆ. ಅದು ಬೆಳ್ಳಗೆ 6-15ಕ್ಕೆ ಕೆಎಸ್ ಆರ್ ನಿಂದ ಯಲಹಂಕದ ಕಡೆಗೆ ನಿರ್ಗಮಿಸಲಿದೆ. ಬೆಳಗ್ಗೆ 7-45ಕ್ಕೆ ಕೆಎಸ್ ಆರ್ ಮತ್ತು ರಾತ್ರಿ 10-30ಕ್ಕೆ ಬೆಂಗಳೂರು ಕಂಟೊನ್ಮೆಂಟ್ ಕಡೆಗೆ ನಿರ್ಗಮಿಸಲಿದೆ.

ಬೆಂಗಳೂರು ಕಂಟೊನ್ಮೆಂಟ್ ಮತ್ತು ಬಂಗಾರಪೇಟೆ ಮತ್ತು ಚಿಕ್ಕಬಳ್ಳಾಪುರ ಮಾರ್ಗವಾಗಿ ಸಂಚರಿಸುವ ಮತ್ತು ಬಂಗಾರಪೇಟೆಯಿಂದ ಕೋಲಾರ ಮಾರ್ಗವಾಗಿ ಯಶವಂತಪುರದವರೆಗೂ ಸಂಚರಿಸುವ ಎರಡು ರೈಲುಗಳು ಕೂಡಾ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್ ನಲ್ಲಿ ನಿಲುಗಡೆಯಾಗಲಿವೆ.

ಬೆಂಗಳೂರು ಕಂಟೋನ್ಮೆಂಟ್ ನಿಂದ ಬಂಗಾರಪೇಟೆವರೆಗಿನ ಮತ್ತು ಬಂಗಾರಪೇಟೆಯಿಂದ ಯಶವಂತಪುರಕ್ಕೆ ಆಗಮಿಸುವ ಎರಡು ರೈಲುಗಳು ಕೂಡಾ ಸೋಮವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್ ನಲ್ಲಿ ನಿಲುಗಡೆಯಾಗಲಿವೆ. ಹಿರಿಯ ವಿಭಾಗೀಯ ವಾಣಿಜ್ಯಾತ್ಮಕ ಮ್ಯಾನೇಜರ್ ಎಎನ್ ಕೃಷ್ಣ ರೆಡ್ಡಿ ಈ ನಿಲುಗಡೆಯನ್ನು ಖಾತ್ರಿಪಡಿಸಿದ್ದಾರೆ.

English summary
Finally after years of waiting, one can board a train to the airport halt station from Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X