ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಭೇಟಿಗೆ ಬಂದ ತೈವಾನ್ ಮೂಲದ ಸಂಸ್ಥೆ ನಿಯೋಗ

|
Google Oneindia Kannada News

ಬೆಂಗಳೂರು, ಜೂನ್ 19: ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪೊರೇಷನ್ ಕಂಪನಿಯ ನಿರ್ದೇಶಕರಾದ ವಿ.ಲೀ ಅವರ ನೇತೃತ್ವದ ನಿಯೋಗವು ಇಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.

ಪ್ರತಿದಿನವೂ ನೋವಿನಲ್ಲೇ ಕಳೆಯುತ್ತಿದ್ದೇನೆ: ಕುಮಾರಸ್ವಾಮಿ ಮತ್ತೆ ಭಾವುಕಪ್ರತಿದಿನವೂ ನೋವಿನಲ್ಲೇ ಕಳೆಯುತ್ತಿದ್ದೇನೆ: ಕುಮಾರಸ್ವಾಮಿ ಮತ್ತೆ ಭಾವುಕ

ಕೋಲಾರದ ನರಸಾಪುರದಲ್ಲಿ ಆರಂಭಿಸಲು ಉದ್ದೇಶಿಸಿರುವ 650 ಕೋಟಿ ರೂ.ಬಂಡವಾಳದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉತ್ಪನ್ನಗಳ ಕಂಪನಿಗೆ ಈಗಾಗಲೇ 40 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿದ್ದು, ಬಾಕಿ 3 ಎಕರೆ ಜಮೀನು ಮಂಜೂರು ಮಾಡುವಂತೆ ಲೀ ಅವರು ಮನವಿ ಮಾಡಿದರು.

ಸರಕಾರ ಇರುವಷ್ಟು ದಿನ ಕೆಲಸ ಮಾಡ್ತೀವಿ: ಎಚ್ ಡಿ ರೇವಣ್ಣ, ಸ್ವಾತಿ ನಕ್ಷತ್ರ ಸರಕಾರ ಇರುವಷ್ಟು ದಿನ ಕೆಲಸ ಮಾಡ್ತೀವಿ: ಎಚ್ ಡಿ ರೇವಣ್ಣ, ಸ್ವಾತಿ ನಕ್ಷತ್ರ

ಈಗಾಗಲೇ ವಿಸ್ಟ್ರಾನ್ ಕಂಪನಿಯ ಒಂದು ಘಟಕ ಪೀಣ್ಯ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 1500 ಜನರಿಗೆ ಉದ್ಯೋಗ ನೀಡಿದೆ ಎಂದು ಲೀ ತಿಳಿಸಿದರು. ರಾಜ್ಯ ದಲ್ಲಿ ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಜನೆ ದೃಷ್ಟಿಯಿಂದ ಸರ್ಕಾರದ ವತಿಯಿಂದ ಕಂಪನಿಗೆ ಎಲ್ಲ ಸಹಕಾರ ನೀಡುವ ಭರವಸೆಯನ್ನು ಮುಖ್ಯ ಮಂತ್ರಿಗಳು ಈ ಸಂದರ್ಭದಲ್ಲಿ ನೀಡಿದರು.

Taiwan origin comapany team had meeting with CM Kumaraswamy

ಕಂಪನಿಯ ಸ್ಥಳೀಯ ನಿರ್ದೇಶಕ ಸೆಂಥಿಲ್ ಕುಮಾರ್ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ. ವಿ.ರಮಣರೆಡ್ಡಿ,ವಿಸ್ಟ್ರಾನ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಮಂಜುನಾಥ್.ಬಿ. ಉಪಸ್ಥಿತರಿದ್ದರು.
English summary
Taiwan origin company team met CM Kumaraswamy and requested him to grant land near Kolar to start information and technology company. Government already grant 40 acers of land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X