ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಬ್ಲೀಗ್ ಜಮಾತ್; ಬೆಂಗಳೂರಲ್ಲಿ 19 ಜನರ ವಿರುದ್ಧ ಎಫ್‌ಐಆರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 08 : ತಬ್ಲೀಗ್ ಜಮಾತ್ ಧಾರ್ಮಿಕ ಸಭೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 19 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಸಭೆಗೆ ಜನರನ್ನು ಸಂಘಟಿಸಲು ನಗರದಲ್ಲಿ ಇವರು ಸಂಚಾರ ನಡೆಸಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಇಂಡೋನೇಷಿಯಾ ಸೇರಿದಂತೆ ವಿವಿಧ ದೇಶಗಳ 19 ಪ್ರಜೆಗಳ ವಿರುದ್ಧ ಜಗಜೀವನ್‌ರಾಮ್ ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕೊರೊನಾ: ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಕರ್ನಾಟಕದ 300 ಜನ ಇದ್ದರು!ಕೊರೊನಾ: ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಕರ್ನಾಟಕದ 300 ಜನ ಇದ್ದರು!

ಮಾರ್ಚ್ 9ರಂದು ಬೆಂಗಳೂರಿಗೆ ಬಂದಿದ್ದ ಇವರು ಮಾರ್ಚ್ 16ರ ತನಕ ನಗರದಲ್ಲಿ ಸಂಚಾರ ನಡೆಸಿದ್ದರು. ನವದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಗೆ ಜನರನ್ನು ಸಂಘಟಿಸಿದ್ದರು.

ತಬ್ಲೀಗ್ ಜಮಾತ್: ಇನ್ನೂ 69 ವಿದೇಶಿಯರು ನಾಪತ್ತೆ!ತಬ್ಲೀಗ್ ಜಮಾತ್: ಇನ್ನೂ 69 ವಿದೇಶಿಯರು ನಾಪತ್ತೆ!

Tablighi Jamaat Bengaluru Police Registered 19 FIR

ಪಾದರಾಯನಪುರ ವ್ಯಾಪ್ತಿಯಲ್ಲಿ ಬರುವ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಕೇಂದ್ರ ಸರ್ಕಾರ ನೀಡಿದ ಮಾಹಿತಿ ಅನ್ವಯ ಬಿಬಿಎಂಪಿ ಇವರನ್ನು ಪತ್ತೆ ಹಚ್ಚಿದ್ದು, ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಪರಾರಿಯಾಗಲು ಯತ್ನಿಸಿದ 8 ತಬ್ಲೀಗ್ ಜಮಾತ್ ಸದಸ್ಯರ ಬಂಧನಪರಾರಿಯಾಗಲು ಯತ್ನಿಸಿದ 8 ತಬ್ಲೀಗ್ ಜಮಾತ್ ಸದಸ್ಯರ ಬಂಧನ

ಕೆಂಗೇರಿ ಉಪ ವಿಭಾಗದ ಎಸಿಪಿ ಕೃಷ್ಣ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, "ಮಾರ್ಚ್ 30ರಂದು ಎಲ್ಲರನ್ನೂ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಎಲ್ಲರನ್ನೂ ಹಜ್ ಭವನದಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ" ಎಂದು ಹೇಳಿದ್ದಾರೆ.

ಎಲ್ಲರೂ ಪ್ರವಾಸಿ ವೀಸಾ ಪಡೆದು ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿ ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ತನಿಖೆಯಿಂದ ಖಚಿತವಾಗಿದೆ. ಎಲ್ಲರನ್ನು ಅವರ ದೇಶಕ್ಕೆ ಗಡಿಪಾರು ಮಾಡಲು ಒಪ್ಪಿಗೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.

English summary
Bengaluru police registered FIRs against 19 Indonesia and Kyrgyzstan nationals associated with Tablighi Jamaat for violating visa norms. They come to city on March 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X