ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜನತಾ ಕರ್ಫ್ಯೂ' ಬಗ್ಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಮಾರ್ಚ್ 21: 'ಜನತಾ ಕರ್ಫ್ಯೂ' ಬಗ್ಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷರು ಕೂಡ ಆಗಿರುವ ಶರವಣ ಬಂದ್ ಬಗ್ಗೆ ವಿವರ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುವ ಸಲುವಾಗಿ ಘೋಷಣೆ ಮಾಡಿದ ಜನತಾ ಕರ್ಫ್ಯೂಗೆ ಶರವಣ ಬೆಂಬಲ ನೀಡಿದ್ದಾರೆ. ಆ ದಿನ ತಮ್ಮ ಸಂಘದ ವತಿಯಿಂದ ಚಿನ್ನದ ಅಂಗಡಿಗಳನ್ನು ಬಂದ್ ಮಾಡಲು ನಿರ್ಧಾರ ಮಾಡಲಾಗಿದೆಯಂತೆ.

'ಜನತಾ ಕರ್ಫ್ಯೂ'ಗೆ ಬೆಂಬಲ ನೀಡಿದ ಹೋಟೆಲ್ ಮಾಲೀಕರ ಸಂಘ'ಜನತಾ ಕರ್ಫ್ಯೂ'ಗೆ ಬೆಂಬಲ ನೀಡಿದ ಹೋಟೆಲ್ ಮಾಲೀಕರ ಸಂಘ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ''ಪ್ರಧಾನಿಯವರು ಆಗ್ರಹಪೂರ್ವಕ ವಿನಂತಿ ಹಿಂದಿರುವ ಕಾಳಜಿಯನ್ನು ಅಭಿನಂದಿಸುತ್ತೇನೆ. ಎಲ್ಲರ ಸಹಕಾರದಿಂದ ಮಾತ್ರ ಜನತಾ ಕರ್ಫ್ಯೂ ಯಶಸ್ವಿಯಾಗಬಲ್ಲದು. ಅದರಿಂದ ದಿನಾಂಕ 22/03/2020 ಭಾನುವಾರ ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ವತಿಯಿಂದ ಎಲ್ಲಾ ಜ್ಯುವೆಲರಿ ಅಂಗಡಿಗಳನ್ನು ಬಂದ್ ಮಾಡುವ ನಿರ್ಣಯ ಕೈಗೊಂಡಿದ್ದೇವೆ'' ಎಂದು ತಿಳಿಸಿದ್ದಾರೆ.

T A Saravana Supports janata curfew

ಚಿಕ್ಕಪೇಟೆ, ಸಿಟಿ ಮಾರ್ಕೆಟ್ ನಲ್ಲಿ ಹೆಚ್ಚು ಜನಸಂದಣಿ ಇರುವುದರಿಂದ ಆ ಭಾಗದ ಜ್ಯುವೆಲರಿ ಅಂಗಡಿಗಳಿಗೆ 7 ದಿನಗಳ ಕಾಲ ರಜೆ ಎಂದು ಅಲ್ಲಿನ ಅಸೋಸಿಯೇಷನ್ ತಿಳಿಸಿದೆ. ಆದರೆ, ತಮ್ಮ ಜ್ಯುವೆಲರಿ ಅಂಗಡಿಗಳನ್ನು ಪ್ರಧಾನಿಯವರು ಹೇಳಿರುವ ಹಾಗೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಬಂದ್ ಮಾಡಿರುತ್ತೇವೆ. ಎಂದು ಶರವಣ ಹೇಳಿದ್ದಾರೆ.

ಬಂದ್ ಜೊತೆಗೆ ಅಂಗಡಿಗೆ ಬರುವ ಗ್ರಾಹಕರಿಗೆ ಮುಂಜಾಗ್ರತೆ ಕ್ರಮವಾಗಿ ಕೈಗಳನ್ನು ಶುದ್ಧಿಗೊಳಿಸುವ ಸ್ಯಾನಿಟೈಸರ್ ನೀಡಲಾಗುವುದಂತೆ.

English summary
JDS MLC and karnataka judicial association precedent T A Saravana supports janatha curfew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X