ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂಚನೆ: ಸಿಂಡಿಕೇಟ್ ಬ್ಯಾಂಕ್ ಚೇರ್ಮನ್ ಬಂಧನ

By Mahesh
|
Google Oneindia Kannada News

ಬೆಂಗಳೂರು, ಆ.3: ವಂಚನೆ ಹಾಗೂ ಲಂಚ ಪಡೆದ ಆರೋಪದ ಮೇಲೆ ಸಿಂಡಿಕೇಟ್ ಬ್ಯಾಂಕ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್ ಕೆ ಜೈನ್ ಅವರನ್ನು ಸಿಬಿಐ ತಂಡ ಬಂಧಿಸಿದೆ. ಕೆಲ ಕಂಪನಿಗಳ ಸಾಲದ ಮಿತಿ ಹೆಚ್ಚಿಸಲು ಜೈನ್ ಅವರು 50 ಲಕ್ಷ ರು ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.

ಸಿಂಡಿಕೇಟ್ ಬ್ಯಾಂಕ್ ಎಂಡಿ ಸುಧೀರ್ ಕುಮಾರ್ ಜೈನ್ ಅವರ ಜತೆಗೆ ಇನ್ನೂ ಐವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.ಸುಮಾರು ಆರು ತಿಂಗಳ ಕಾಲ ಜೈನ್ ಅವರ ಚಲನವಲನ, ವ್ಯವಹಾರಗಳ ಮೇಲೆ ಸಿಬಿಐ ತಂಡ ಕಣ್ಣಿಟ್ಟು, ಮಾಹಿತಿ ಕಲೆ ಹಾಕಿತ್ತು.

Syndicate Bank chairman arrested in Bangalore for taking Rs 50 lakh bribe

ದೇಶದ ನಾಲ್ಕು ಪ್ರಮುಖ ನಗರಗಳ 20 ಕಡೆ ಈ ವ್ಯವಹಾರ ಕುರಿತಂತೆ ಮಾಹಿತಿ ಪಡೆಯಲಾಗಿತ್ತು. ಖಚಿತ ಮಾಹಿತಿ ಪಡೆದ ನಂತರ ಜೈನ್ ಅವರನ್ನು ಬೆಂಗಳೂರಿನಲ್ಲಿ ಸಿಬಿಐ ಬಂಧಿಸಿದೆ. ಸಾಲದ ಮಿತಿ ಹೆಚ್ಚಿಸುವಂತೆ ಕೋರಿದ ಎರಡು ಕಂಪನಿಗಳು ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿವೆ ಎಂಬ ಸುದ್ದಿ ಇದೆ.

English summary
The chairman-cum-managing director of Syndicate Bank SK Jain was arrested in Bangalore on charges of taking bribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X