ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಭುವನೇಶ್ವರ ವಿಶೇಷ ರೈಲು; ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08: ನೈಋತ್ಯ ರೈಲ್ವೆ ಬೆಂಗಳೂರು ಮತ್ತು ಓಡಿಶಾ ರಾಜ್ಯದ ಭುವನೇಶ್ವರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ. 12/10/2020ರಿಂದ ಈ ವಿಶೇಷ ರೈಲು ಸಂಚಾರ ನಡೆಸಲಿದೆ.

ಭುವನೇಶ್ವರ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ರೈಲು ನಂಬರ್ 08463/08464 ಪ್ರತಿದಿನ ಸಂಚಾರ ನಡೆಸಲಿದೆ. ಅಕ್ಟೋಬರ್ 12ರಿಂದ ಮುಂದಿನ ಆದೇಶದ ತನಕ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ

ರೈಲು ನಂಬರ್ 08463 ಭುವನೇಶ್ವರ-ಕೆಎಸ್ಆರ್ ಬೆಂಗಳೂರು ಪ್ರತಿದಿನ 5.30ಕ್ಕೆ ಭುವನೇಶ್ವರದಿಂದ ಹೊರಡಲಿದೆ. ಮರುದಿನ ಮಧ್ಯಾಹ್ನ 12.05ಕ್ಕೆ ಕೆಎಸ್ಆರ್‌ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಮುಂಗಡ ಟಿಕೆಟ್ ಬುಕ್ಕಿಂಗ್; ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಮುಂಗಡ ಟಿಕೆಟ್ ಬುಕ್ಕಿಂಗ್; ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

SWR To Run Bhubaneswar KSR Bengaluru Bhubaneswar Special Train

ರೈಲು ನಂಬರ್ 08464 ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ ಸಂಚಾರ ಆರಂಭಿಸಲಿದೆ. ಮರುದಿನ ಬೆಳಗ್ಗೆ 9.05ಕ್ಕೆ ಭುವನೇಶ್ವರವನ್ನು ತಲುಪಲಿದೆ. ಅಕ್ಟೋಬರ್ 13ರಿಂದ ಈ ರೈಲು ಸಂಚಾರ ಆರಂಭಿಸಲಿದೆ.

ಬೆಂ-ಮಂಗಳೂರು ರೈಲು ಸಂಚಾರದಲ್ಲಿ ಭಾರಿ ಬದಲಾವಣೆ ಬೆಂ-ಮಂಗಳೂರು ರೈಲು ಸಂಚಾರದಲ್ಲಿ ಭಾರಿ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಭುವನೇಶ್ವರ ವಿಶೇಷ ಎಕ್ಸ್‌ಪ್ರೆಸ್ ರೈಲು 23 ಕೋಚ್‌ಗಳನ್ನು ಹೊಂದಿದೆ. 1 ಎಸಿ 2 ಟೈರ್ ಕೋಚ್, 4 ಎಸಿ 3 ಟೈರ್ ಕೋಚ್, 11 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್, 4 ಸಾಮಾನ್ಯ ಕೋಚ್‌ಗಳನ್ನು ಹೊಂದಿದೆ. ಲಗೇಜ್‌ ಕಮ್ ಬ್ರೇಕ್ ವ್ಯಾನ್, 1 ಪ್ಯಾಂಟ್ರಿ ಕಾರ್‌ಗಳನ್ನು ಹೊಂದಿದೆ.

ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಸಾಮಾನ್ಯ ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬೇಡಿಕೆ ಇರುವ ಮಾರ್ಗದಲ್ಲಿ ಮಾತ್ರ ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆ ಓಡಿಸುತ್ತಿದೆ.

ಸೆಪ್ಟೆಂಬರ್ 12ರಿಂದ ಭಾರತೀಯ ರೈಲ್ವೆ 80 ವಿಶೇಷ ರೈಲುಗಳನ್ನು ಓಡಿಸುತ್ತಿದೆ. ತವರು ರಾಜ್ಯಕ್ಕೆ ಹೋಗಿರುವ ಕಾರ್ಮಿಕರು ವಾಪಸ್ ಬರಲು ಅನುಕೂಲವಾಗುವಂತೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಹೇಳಿತ್ತು.

ನೈಋತ್ಯ ರೈಲ್ವೆ ಸೆಪ್ಟೆಂಬರ್ 21ರಿಂದ ಮೂರು ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಭಾರತೀಯ ರೈಲ್ವೆ ಮಾಹಿತಿಯಂತೆ ಈಗ 310 ವಿಶೇಷ ರೈಲುಗಳು ಮತ್ತು 20 ಜೋಡಿ ಕ್ಲೋನ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ.

English summary
South western railway decided to run Bhubaneswar – KSR Bengaluru –Bhubaneswar Express special train from October 12, 2020. Here are the schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X