Sankranthi Special: ಬೆಂಗಳೂರಿಗೆ ಬರಲು ಹೊಸ 12 ರೈಲು; ವೇಳಾಪಟ್ಟಿ
ಬೆಂಗಳೂರು, ಡಿಸೆಂಬರ್ 04: ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ 52 ವಿಶೇಷ ರೈಲುಗಳನ್ನು ಓಡಿಸಲಿದೆ. ಇವುಗಳಲ್ಲಿ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ 12 ಪ್ಯಾಸೆಂಜರ್ ರೈಲುಗಳು ಸಹ ಸೇರಿವೆ.
ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. 4 ಕಡೆಗಳಿಂದ ಬೆಂಗಳೂರು ನಗರಕ್ಕೆ ಆಗಮಿಸಲು ಕಡಿಮೆ ಪ್ರಯಾಣ ಅವಧಿಯ ರೈಲು ಸೇವೆಗಳನ್ನು ಆರಂಭಿಸಲಾಗುತ್ತಿದೆ. ಡಿಸೆಂಬರ್ 7ರಿಂದ ಈ ರೈಲುಗಳು ಸಂಚಾರ ನಡೆಸಲಿವೆ.
ಬಾಂಗ್ಲಾಕ್ಕೆ ಮಿನಿ ಟ್ರಕ್ ರವಾನೆ; ರೈಲ್ವೆ ಮತ್ತೊಂದು ಸಾಧನೆ
ಮೈಸೂರು, ಹಾಸನ, ಹಿಂದೂಪುರ, ಹೊಸೂರು, ಬಂಗಾರಪೇಟೆಯಿಂದ ಬೆಂಗಳೂರು ನಗರಕ್ಕೆ ರೈಲುಗಳು ಸಂಪರ್ಕ ಕಲ್ಪಿಸಲಿವೆ. ಬೆಂಗಳೂರು ನಗರಕ್ಕೆ ಆಗಮಿಸುವ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಮಂಗಳೂರು-ಶ್ರವಣಬೆಳಗೊಳ-ಬೆಂಗಳೂರು ರೈಲು ಮತ್ತೆ ಆರಂಭ
ಇವು ಮೊದಲೇ ಸೀಟು ಕಾಯ್ದರಿಸಿದ ರೈಲುಗಳಲ್ಲ. ಲಾಕ್ ಡೌನ್ ಘೋಷಣೆ ಬಳಿಕ ಮೊದಲ ಬಾರಿಗೆ ನೈಋತ್ಯ ರೈಲ್ವೆ ಇಂತಹ ರೈಲು ಸೇವೆಯನ್ನು ಆರಂಭಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ರೈಲು ವೇಳಾಪಟ್ಟಿ ಬದಲು

ಯಶವಂತಪುರ-ಹಾಸನ-ಯಶವಂತಪುರ
ರೈಲು ಸಂಖ್ಯೆ 06579/06580 ಯಶವಂತಪುರ-ಹಾಸನ-ಯಶವಂತಪುರ ಡೆಮು ರೈಲು ಭಾನುವಾರ ಹೊರತುಪಡಿಸಿ ವಾರದ ಆರು ದಿನ ಸಂಚಾರ ನಡೆಸಲಿದೆ. 06579 ಸಂಖ್ಯೆಯ ರೈಲು ಯಶವಂತಪುರದಿಂದ 9.30ಕ್ಕೆ ಹೊರಡಲಿದ್ದು, ಮಧ್ಯಾಹ್ನ 1 ಗಂಟೆಗೆ ಹಾಸನ ತಲುಪಲಿದೆ. ಹಾಸನದಿಂದ ರೈಲು ಸಂಖ್ಯೆ 06580 ಮಧ್ಯಾಹ್ನ 1.30ಕ್ಕೆ ಹೊರಡಲಿದ್ದು, ಸಂಜೆ 5 ಗಂಟೆಗೆ ಯಶವಂತಪುರಕ್ಕೆ ಬರಲಿದೆ.

ಯಶವಂತಪುರ-ತುಮಕೂರು-ಯಶವಂತಪುರ
ಡಿಸೆಂಬರ್ 7ರಿಂದ ರೈಲು ನಂಬರ್ 06553/06554 ಯಶವಂತಪುರ-ತುಮಕೂರು-ಯಶವಂತಪುರ ನಡುವೆ ಸಂಚಾರ ನಡೆಸಲಿದೆ. ಭಾನುವಾರ ಹೊರತುಪಡಿಸಿ ವಾರದ 6 ದಿನ ರೈಲು ಓಡಲಿದೆ. ಯಶವಂತಪುರದಿಂದ ರೈಲು ನಂಬರ್ 06553 6.35ಕ್ಕೆ ಹೊರಡಲಿದ್ದು, 8 ಗಂಟೆಗೆ ತುಮಕೂರು ತಲುಪಲಿದೆ. ರೈಲು ನಂಬರ್ 06554 7.30ಕ್ಕೆ ತುಮಕೂರಿನಿಂದ ಹೊರಡಲಿದ್ದು, 9 ಗಂಟೆಗೆ ಯಶವಂತಪುರ ತಲುಪಲಿದೆ.

ಬೆಂಗಳೂರು-ಮಾರಿಕುಪ್ಪಂ-ಬೆಂಗಳೂರು
ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು ನಡುವೆ ರೈಲು ನಂಬರ್ 06555/06556 ವಾರದಲ್ಲಿ 6 ದಿನ ಸಂಚಾರ ನಡೆಸಲಿದೆ. ಡಿಸೆಂಬರ್ 7ರಿಂದ ರೈಲು ಓಡಲಿದ್ದು, ಭಾನುವಾರ ಸಂಚಾರವಿಲ್ಲ. ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ರೈಲು ನಂಬರ್ 06555 6.05ಕ್ಕೆ ಹೊರಡಲಿದ್ದು, 8.30ಕ್ಕೆ ಮಾರಿಕುಪ್ಪಂ ತಲುಪಲಿದೆ. ರೈಲು ನಂಬರ್ 06556 ಮಾರಿಕುಪ್ಪಂನಿಂದ 6.35ಕ್ಕೆ ಹೊರಡಲಿದ್ದು, 9.10ಕ್ಕೆ ಕೆಎಸ್ಆರ್ ಬೆಂಗಳೂರಿಗೆ ಬರಲಿದೆ.

ಬಂಗಾರಪೇಟೆ-ಮೈಸೂರು-ಬಂಗಾರಪೇಟೆ
ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ರೈಲು ಸಂಖ್ಯೆ 06557/06558 ಬಂಗಾರಪೇಟೆ-ಮೈಸೂರು-ಬಂಗಾರಪೇಟೆ ನಡುವೆ ಸಂಚಾರ ನಡೆಸಲಿವೆ. ರೈಲು ಸಂಖ್ಯೆ 06557 ಬಂಗಾರಪೇಟೆಯಿಂದ 5.40ಕ್ಕೆ ಹೊರಡಲಿದ್ದು, 10.25ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ರೈಲು ನಂಬರ್ 06558 5.50ಕ್ಕೆ ಹೊರಡಲಿದ್ದು, 10.40ಕ್ಕೆ ಬಂಗಾರಪೇಟೆ ತಲುಪಲಿದೆ.

ಹಿಂದೂಪುರ-ಯಶವಂತಪುರ-ಹಿಂದೂಪುರ
ರೈಲು ಸಂಖ್ಯೆ 06563/06564 ಹಿಂದೂಪುರ-ಯಶವಂತಪುರ-ಹಿಂದೂಪುರ ನಡುವೆ ಭಾನುವಾರ ಹೊರತುಪಡಿಸಿ 6 ದಿನ ಸಂಚಾರ ನಡೆಸಲಿದೆ. ಹಿಂದೂಪುರದಿಂದ 6 ಗಂಟೆಗೆ ಹೊರಡುವ ರೈಲು (06563) 8.25ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 06564 ಯಶವಂತಪುರದಿಂದ 6 ಗಂಟೆಗೆ ಹೊರಡಲಿದ್ದು, 8.25ಕ್ಕೆ ಹಿಂದೂಪುರ ತಲುಪಲಿದೆ.

ಬೆಂಗಳೂರು-ಹೊಸೂರು ರೈಲು
ಕೆಎಸ್ಆರ್ ಬೆಂಗಳೂರು-ಹೊಸೂರು-ಕೆಎಸ್ಆರ್ ಬೆಂಗಳೂರು ನಡುವೆ 6547/06548 ಸಂಖ್ಯೆಯ ರೈಲು ಓಡಲಿದೆ. ಭಾನುವಾರ ಮಾತ್ರ ರೈಲು ಸಂಚಾರವಿಲ್ಲ. ಬೆಂಗಳೂರಿನಿಂದ 06547 ಸಂಖ್ಯೆಯ ರೈಲು 7.15ಕ್ಕೆ ಹೊರಡಲಿದ್ದು, 8.35ಕ್ಕೆ ಹೊಸೂರು ತಲುಪಲಿದೆ. ಹೊಸೂರಿನಿಂದ ರೈಲು ಸಂಖ್ಯೆ 06548 8:45ಕ್ಕೆ ಹೊರಡಲಿದ್ದು, 10.10ಕ್ಕೆ ಬೆಂಗಳೂರು ತಲುಪಲಿದೆ.