ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ತುರ್ತು ಚಿಕಿತ್ಸಾ ಘಟಕ ಆರಂಭ

|
Google Oneindia Kannada News

ಬೆಂಗಳೂರು, ಮೇ 30 : ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ತುರ್ತು ಚಿಕಿತ್ಸಾ ವಿಭಾಗವನ್ನು ಆರಂಭಿಸಿದೆ. ಮಣಿಪಾಲ್ ಆಸ್ಪತ್ರೆ ಈ ಚಿಕಿತ್ಸಾ ಘಟಕವನ್ನು ನಿರ್ವಹಣೆ ಮಾಡುತ್ತದೆ.

ಮೆಜೆಸ್ಟಿಕ್‌ನಲ್ಲಿರುವ ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಫ್ಲಾಟ್‌ ಫಾರ್ಮ್ ನಂ 1ರಲ್ಲಿ ತುರ್ತು ಚಿಕಿತ್ಸಾ ಘಟಕವಿದೆ. ಮಣಿಪಾಲ್ ಆಸ್ಪತ್ರೆಯ ಜೊತೆ ಒಪ್ಪಂದ ಮಾಡಿಕೊಂಡು ಘಟಕವನ್ನು ನಿರ್ಮಾಣ ಮಾಡಲಾಗಿದೆ.

ಉತ್ತರ ರೈಲ್ವೆ ನೇಮಕಾತಿ : 749 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿಉತ್ತರ ರೈಲ್ವೆ ನೇಮಕಾತಿ : 749 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಯಾವುದಾದರೂ ಅವಘಡ ನಡೆದರೆ ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕಳಿಸುವ ಕೆಲವನ್ನು ತುರ್ತು ಚಿಕಿತ್ಸಾ ಘಟಕ ಮಾಡಲಿದೆ. 2011ರಲ್ಲಿಯೇ ಘಟಕವನ್ನು ಆರಂಭಿಸಲಾಗಿತ್ತು, ಆದರೆ, 2 ವರ್ಷಗಳ ಹಿಂದೆ ಅದು ಸ್ಥಗಿತಗೊಂಡಿತ್ತು.

ದಕ್ಷಿಣ ರೈಲ್ವೆ ನೇಮಕಾತಿ : 142 ಹುದ್ದೆಗಳಿಗೆ ಅರ್ಜಿ ಹಾಕಿದಕ್ಷಿಣ ರೈಲ್ವೆ ನೇಮಕಾತಿ : 142 ಹುದ್ದೆಗಳಿಗೆ ಅರ್ಜಿ ಹಾಕಿ

SWR opens emergency medical center at Bengaluru railway station

ಮಣಿಪಾಲ್ ಆಸ್ಪತ್ರೆ ಈ ಘಟಕವನ್ನು ನಿರ್ವಹಣೆ ಮಾಡಲಿದೆ. ದಿನದ 24 ಗಂಟೆಯೂ ಘಟಕ ಕಾರ್ಯ ನಿರ್ವಹಣೆ ಮಾಡಲಿದ್ದು, ಡಾಕ್ಟರ್ ಮತ್ತು ನರ್ಸ್‌ಗಳು ಸಹ ಮೂರು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ.
ಬೆಂಗಳೂರು ವಿಭಾಗಕ್ಕೆ ಸೇರುವ ಬೇರೆ ರೈಲ್ವೆ ನಿಲ್ದಾಣದಲ್ಲಿಯೂ ಶೀಘ್ರದಲ್ಲಿಯೇ ಘಟಕ ಆರಂಭವಾಗಲಿದೆ.

ಹುಷಾರ್, ಬೇಕಾಬಿಟ್ಟಿ ಧಮ್ ಹೊಡೆದರೆ 2 ಸಾವಿರ ದಂಡ ತೆರಬೇಕಾದೀತುಹುಷಾರ್, ಬೇಕಾಬಿಟ್ಟಿ ಧಮ್ ಹೊಡೆದರೆ 2 ಸಾವಿರ ದಂಡ ತೆರಬೇಕಾದೀತು

English summary
South Western Railway (SWR) opened emergency medical center at Krantiveera Sangolli Rayanna railway station Bengaluru. Medical center will work around the clock and center will being run by Manipal Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X