ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೀತಪ್ರಿಯರಿಗಾಗಿ ಸ್ವರಮೇಧ ವಾರ್ಷಿಕೋತ್ಸವ

ಸ್ವರಮೇಧ ಇಂಟರ್ನ್ಯಾಶನಲ್ ಮ್ಯೂಸಿಕ್ ಅಕಾಡೆಮಿಯನ್ನು 2015ರಲ್ಲಿ ಗಾಯಕ ಚಿನ್ಮಯ ಎಂ.ರಾವ್ ಹೊನಗೋಡು ಪ್ರಾರಂಭಿಸಿದರು. ತಮ್ಮಲ್ಲಿನ ಸಂಗೀತ ಪ್ರತಿಭೆಯನ್ನು ಸಹೃದಯರಿಗೆ, ಸಂಗೀತಾಸಕ್ತರಿಗೆ ಹಂಚುವ, ತರಬೇತಿ ನೀಡುವ ಉದ್ದೇಶದಿಂದ ಸ್ವರಮೇಧ ಜನ್ಮತಾಳಿದ

|
Google Oneindia Kannada News

ಬೆಂಗಳೂರು, ಮಾರ್ಚ್ 2: ಹೊಸ ಸಂಗೀತ ಪ್ರತಿಭೆಯನ್ನು ಗುರುತಿಸಿ, ತರಬೇತಿ ನೀಡುವ ಸಲುವಾಗಿ ಹುಟ್ಟಿಕೊಂಡ ಸ್ವರಮೇಧ ಇಂಟರ್ನ್ಯಾಶನಲ್ ಮ್ಯೂಸಿಕ್ ಅಕಾಡೆಮಿ(ರಿ.) ಮಾರ್ಚ್ 4 ರಂದು ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ರಾಜರಾಜೇಶ್ವರಿ ನಗರದ ರಾಜೇಶ್ವರಿ ವಿದ್ಯಾಲಯ ಸಭಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮವನ್ನು ಹಿರಿಯ ಗಾಯಕ ವಿದ್ವಾನ್ ಅನಂತ ಅವಧಾನಿ ಉದ್ಘಾಟಿಸಲಿದ್ದಾರೆ.

Swaramedha anual day function for music lovers, Rajarajeshwari Nagar

ಲೇಖಕ ಅಗ್ನಿ ಶ್ರೀಧರ್, ರಾಜರಾಜೇಶ್ವರಿ ನಗರದ ಬಿಬಿಎಂಪಿ ಸದಸ್ಯೆ ನಲಿನಿ ಮಂಜುನಾಥ್ ಮುಂತಾದವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂದು ಸಂಜೆ 6:30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಿಬಿಎಂಪಿ ಮೇಯರ್ ಜಿ. ಪದ್ಮಾವತಿ, ನಟ ರಾಜೇಶ್ ಧ್ರುವ ಮುಂತಾದವರು ಉಪಸ್ಥಿತರಿರುತ್ತಾರೆ.

Swaramedha anual day function for music lovers, Rajarajeshwari Nagar

ಸ್ವರಮೇಧ ಇಂಟರ್ನ್ಯಾಶನಲ್ ಮ್ಯೂಸಿಕ್ ಅಕಾಡೆಮಿಯನ್ನು 2015ರಲ್ಲಿ ಗಾಯಕ ಚಿನ್ಮಯ ಎಂ.ರಾವ್ ಹೊನಗೋಡು ಪ್ರಾರಂಭಿಸಿದರು. ತಮ್ಮಲ್ಲಿನ ಸಂಗೀತ ಪ್ರತಿಭೆಯನ್ನು ಸಹೃದಯರಿಗೆ, ಸಂಗೀತಾಸಕ್ತರಿಗೆ ಹಂಚುವ, ತರಬೇತಿ ನೀಡುವ ಉದ್ದೇಶದಿಂದ ಸ್ವರಮೇಧ ಜನ್ಮತಾಳಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ನಶಿಸಿಹೋಗುತ್ತಿರುವ ನಮ್ಮಸಾಂಪ್ರದಾಯಿಕ ಕಲೆ, ಸಂಗೀತವನ್ನು ಉಳಿಸಿ, ಬೆಳೆಸಿ ಇಂದಿನ ತಲೆಮಾರಿಗೆ ಪರಿಚಯಿಸುವ ಮಹತ್ವದ ಕೆಲಸವನ್ನು ಸ್ವರಮೇಧ ಮಾಡುತ್ತಿದೆ.

English summary
An event for music lovers is arranged on March 4th at Rajarajeshwari Nagar, Bengaluru. The event is organised by Swaramedha International Music Academy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X