ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ವರ್ಷದ ಕ್ರೀಡಾಪಟು ಗಿರೀಶ್, ಪೂವಮ್ಮ

By Mahesh
|
Google Oneindia Kannada News

ಬೆಂಗಳೂರು, ಅ.3: ಬೆಂಗಳೂರಿನ ಕ್ರೀಡಾ ಬರಹಗಾರರ ಒಕ್ಕೂಟ (SWAB) ನೀಡುವ ವಾರ್ಷಿಕ ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾಪಟುಗಳನ್ನು ಆಯ್ಕೆಮಾಡಲಾಗಿದೆ. ಪ್ಯಾರಂಲಿಪಿಯನ್ ಎಚ್ ಎನ್ ಗಿರೀಶ್ ಹಾಗೂ ಅಥ್ಲೀಟ್ ಪೂವಮ್ಮ ಅವರು ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಆಯ್ಕೆಯಾಪಿದ್ದಾರೆ ಎಂದು ಕಾರ್ಯದರ್ಶಿ ಗರುಡ ಅವರು ಒನ್ ಇಂಡಿಯಾ ಸಂಸ್ಥೆ ಪ್ರತಿನಿಧಿಗೆ ತಿಳಿಸಿದ್ದಾರೆ.

ಕರ್ನಾಟಕದ ಕ್ರೀಡಾಪಟುಗಳ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸಲು ಪ್ರತಿವರ್ಷ ಕ್ರೀಡಾ ಬರಹಗಾರರು ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. 2012ನೇ ಸಾಲಿನ ಪ್ರಶಸ್ತಿಗೆ ಹೊಸನಗರ ನಾಗರಾಜೇಗೌಡ ಗಿರೀಶ ಹಾಗೂ ಮೆಚೆಟ್ಟಿರ ರಾಜು ಪೂವಮ್ಮ ಆಯ್ಕೆಯಾಗಿದ್ದಾರೆ.

SWAB Awards-2013 Bangalore

ಕಾರ್ಯಕ್ರಮ ವಿವರ:
SWAB ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಯೋಜನೆಯ ಹೊಣೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹೊತ್ತಿದೆ.
ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಕೆಎಸ್ ಸಿಎ ಹಾಲ್
ದಿನಾಂಕ: ಅಕ್ಟೋಬರ್ 6, ಭಾನುವಾರ, ಬೆಳಗ್ಗೆ 11 ಗಂಟೆ
ಭಾರತದ ಸ್ನೂಕರ್ ತರಬೇತುದಾರ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಅರವಿಂದ್ ಸಾವೂರ್ ಅವರಿಗೆ 20112 ಸಾಲಿನ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಲಾಗುತ್ತಿದೆ.

* ಶ್ರೇಷ್ಠ ಕ್ರೀಡಾಪಟು(ಪುರುಷ) : ಎಚ್ ಎನ್ ಗಿರೀಶ್ (ಪ್ಯಾರಲಂಪಿಯನ್ ಹೈಜಂಪ್)
* ಶ್ರೇಷ್ಠ ಕ್ರೀಡಾಪಟು(ಮಹಿಳೆ) : ಎಂಆರ್ ಪೂವಮ್ಮ (ಒಲಿಂಪಿಯನ್ ಸ್ಪಿಂಟರ್)
* ಶ್ರೇಷ್ಠ ಜೂ. ಕ್ರೀಡಾಪಟು(ಪುರುಷ) : ಗಿರೀಶ್ ಕೌಶಿಕ್
* ಶ್ರೇಷ್ಠ ಜೂ. ಕ್ರೀಡಾಪಟು(ಮಹಿಳೆ) : ಪ್ರೇಮ ಎಚ್
* ಶ್ರೇಷ್ಠ ಕೋಚ್: ರಾಮನ್ ವಿಜಯನ್
* ಶ್ರೇಷ್ಠ ತಂಡ: ಟೆನ್ ಪಿನ್ ಬೌಲಿಂಗ್ ತಂಡ
* ಜೀವಮಾನದ ಸಾಧನೆ:ಅರವಿಂದ್ ಸಾವೂರ್(ಸ್ನೂಕರ್)

ಎಂಆರ್ ಪೂವಮ್ಮ: ಕರ್ನಾಟಕದ ಗೋಣಿಕೊಪ್ಪಲಿನ 23 ವರ್ಷದ ಪೂವಮ್ಮ ಅವರು 400 ಮೀಟರ್ಸ್ ಓಟದ ಸ್ಪರ್ಧಿಯಾಗಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದರು. ಸದ್ಯ 400 ಮೀ. ವಿಭಾಗದಲ್ಲಿ ಏಷ್ಯಾ ನಂ.2 ಎನಿಸಿದ್ದಾರೆ.

ಎಚ್ ಎನ್ ಗಿರೀಶ್: 2012ರ ಸಮ್ಮರ್ ಪ್ಯಾರಲಂಪಿಕ್ಸ್ ಹೈಜಂಪ್ ಸ್ಪರ್ಧಿಯಾಗಿದ್ದು, 1.74ಮೀ ಎತ್ತರ ಜಿಗಿದು ರಜತ ಪದಕ್ ಗೆದ್ದಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಗಿರೀಶ್ ಅವರಿಗೆ ಸಂದಿದೆ.

English summary
Paralympic high jumper Girisha Hosanagara Nagarajegowda and sprinter Machettira Raju Poovamma to receive the "Best Sportsperson award" from Sports Writers' Association of Bangalore (SWAB). The SWAB Awards-2013 function will be held at the M. Chinnaswamy Stadium, KSCA Hall on Oct 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X