ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೀತ ರಸಿಕರಿಗಾಗಿ ವಿಶೇಷ ಕೈಪಿಡಿ ಹೊರ ತಂದ ಸುಸ್ವರಾಲಯ

|
Google Oneindia Kannada News

ಕರ್ನಾಟಕ ಶಾಸ್ತ್ರೀಯ ಸಂಗೀತ ಮೃದಂಗ ವಾದಕರು, ವಿದ್ವಾನ್ ಹೆಚ್ ಎಸ್ ಸುಧೀಂದ್ರ ಅವರ ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್ ವತಿಯಿಂದ ದ್ವೈವಾರ್ಷಿಕ ಸಂಗೀತ ಕೈಪಿಡಿಯನ್ನು ಹೊರ ತರುತ್ತದೆ. ವಿದ್ವಾನ್ ಹೆಚ್ಎಸ್ ಸುಧೀಂದ್ರ, ಸುಸ್ವರಾಲಯ ಸಂಸ್ಥೆ ಬಗ್ಗೆ ಲೇಖನ ಇಲ್ಲಿದೆ...

ಕರ್ನಾಟಕ ಶಾಸ್ತ್ರೀಯ ಸಂಗೀತ ಮೃದಂಗ ವಾದಕರು, ವಿದ್ವಾನ್ ಹೆಚ್ ಎಸ್ ಸುಧೀಂದ್ರ ಅವರು ಆಕಾಶವಾಣಿ ಹಾಗು ದೂರದರ್ಶನದ 'A' ಟಾಪ್ ವಾದಕರು. ವಿದ್ವಾನ್ ಎಂ. ವಾಸುದೇವ ರಾವ್ ಹಾಗು ವಿದ್ವಾವ್ ಶ್ರೀಮುಷ್ಣಂ ವಿ.ರಾಜಾ ರಾವ್ ಅವರ ಶಿಷ್ಯರಾಗಿದ್ದು, 'ಲಯಕಾಲ ಪ್ರತಿಭಾಮಣಿ', 'ಗಾನ ಕಲಾಶ್ರೀ', 'ಅನನ್ಯ ಚೇತನ' ಹೀಗ್ ಮುಂತಾದ ಶೀರ್ಷಕೆಗಳನ್ನ ಸಂಪಾದಿಸಿರುವ ಇವರು ಬೇರೆ ಬೇರೆ ದೇಶಗಳಲ್ಲಿ ರಾಜ್ಯಗಳಲ್ಲಿ ಕಚೇರಿಗಳನ್ನು ನೀಡಿದ್ದಾರೆ.

ಅನಂತ 'ಸಂಗೀತ ಸಾಧಕ' ಪಂಡಿತ್ ಅನಂತ್ ಭಾಗವತ್ಅನಂತ 'ಸಂಗೀತ ಸಾಧಕ' ಪಂಡಿತ್ ಅನಂತ್ ಭಾಗವತ್

ವಿದ್ವಾನ್ ಹೆಚ್ ಎಸ್ ಸುಧೀಂದ್ರ ಹಾಗು ಅವರ ಆಪ್ತ ಸ್ನೇಹಿತರು, ಪಟೀಲು ವಿದ್ವಾಂಸರಾದ, ಬಾಲು ರಘುರಾಂ (ಲಂಡನ್ ನಲ್ಲಿ ನೆಲೆಸಿದ್ದಾರೆ) ಅವರು 1999 ನವೆಂಬರ್ ತಿಂಗಳಲ್ಲಿ ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್ ಎಂಬ ಸಂಗೀತ ಮಹಾವಿದ್ಯಾಲಯವನ್ನು ಜಯನಗರ 4th block ಬಡಾವಣೆಯಲ್ಲಿ ಆರಂಭಿಸಿದ್ದರು.

 ಸುಸ್ವರಾಲಯದ ಬಗ್ಗೆ ಸುಧೀಂದ್ರ

ಸುಸ್ವರಾಲಯದ ಬಗ್ಗೆ ಸುಧೀಂದ್ರ

"ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧ ಪಟ್ಟ ಹಾಗೆ ಮೃದಂಗ, ವೀಣೆ, ಪಿಟೀಲು ಹಾಗು ಗಾಯನ ತರಬೇತಿಯನ್ನು ನಮ್ಮ ಸುಸ್ವರಾಲಯ ಕಾಲೇಜಿನಲ್ಲಿ ತರಬೇತಿ ನೀಡುತ್ತೇವೆ. ಈ ಮಹಾವಿದ್ಯಾಲಯದ ಮುಖ್ಯ ಉದ್ದೇಶ ಎಂದರೆ ಒಬ್ಬರು ವಿದ್ಯಾರ್ಥಿಗೆ ಕಚೇರಿಯನ್ನು ಯಶಸ್ವಿಯಾಗಿ ನೆರವೇರಿಸಲು ಬೇಕಾಗಿರುವ ಕೌಶಲ್ಯತೆಗೆ ತರಬೇತಿಯನ್ನು ನೀಡುವುದು. ಇಲ್ಲಿನ ವಿದ್ಯಾರ್ಥಿ ಆಗಲು ಸ್ವಲ್ಪ ಮಟ್ಟಿನ ಸಂಗೀತ ತರಬೇತಿ ಆಗಿರ ಬೇಕು. ಆದರೆ ಮೃದಂಗ ವಾದ್ಯಕ್ಕೆ ಮೂಲಭೂತ ತರಬೇತಿಯಿಂದ ನೀಡುತ್ತೇವೆ. ಸುಮಾರು ಇಪ್ಪತ್ತು ವರ್ಷಗಳಿಂದ ನಮ್ಮ ಸಮಿತಿಯವರು ಮತ್ತು ನಾವು ಈ ಮಹಾವಿದ್ಯಾಲಯವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೇವೆ" ಎನ್ನುತ್ತಾರೆ ವಿದ್ವಾನ್ ಸುಧೀಂದ್ರ ಅವರು.

ಮೈಸೂರು: ಸಂಗೀತ ವಿಶ್ವವಿದ್ಯಾಲಯಕ್ಕೆ ಇದೆಂಥ ದುಸ್ಥಿತಿ!?ಮೈಸೂರು: ಸಂಗೀತ ವಿಶ್ವವಿದ್ಯಾಲಯಕ್ಕೆ ಇದೆಂಥ ದುಸ್ಥಿತಿ!?

 ಎರಡು ವರ್ಷಕ್ಕೊಮ್ಮೆ ಕೈಪಿಡಿ

ಎರಡು ವರ್ಷಕ್ಕೊಮ್ಮೆ ಕೈಪಿಡಿ

ಈ ಮಹಾವಿದ್ಯಾಲಯದ ವಿಶೇಷವೆಂದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಬಿಡುಗಡೆಯಾಗುವ ಒಂದು ಕೈಪಿಡಿ. ಕರ್ನಾಟಕ ಹಾಗು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರ ವಿಳಾಸ ಹಾಗು ಫೋನ್ ನಂಬರ್, ಸಂಗೀತ ಸಭೆಗಳ ಮಾಹಿತಿ, ಸಂಗೀತ ಕಚೇರಿ ನಡೆಸುವ ಸಭಾಂಗಣಗಳ ಬಗ್ಗೆ ವಿವರಗಳು, ಸಂಗೀತ ವಾದ್ಯಗಳ ಅಂಗಡಿಗಳ ವಿವರಗಳು ಹೀಗೆ ಮುಂತಾದ ಬಹಳಷ್ಟು ಉಪಯುಕ್ತ ಮಾಹಿತಿಗಳನ್ನು ಈ ಕೈಪಿಡಿ ನೀಡುತ್ತದೆ.

"ನಾನು ಕಚೇರಿ ನೀಡಲು ಆರಂಭಿಸಿದ್ದಾಗ ನಾನು ನನಗೆ ಗೊತ್ತಿರುವ ಸಂಗೀತಗಾರ ವಿಳಾಸ ಮತ್ತು ಫೋನ್ ನಂಬರ್ ಗಳನ್ನ ಸಂಗ್ರಹಿಸೋದಕ್ಕೆ ಆರಂಭಿಸಿದ್ದೆ . ಆಗ ನನ್ನ ಬಳಿ ಸುಮಾರು ಜನ ಆ ಸಂಗೀತಗಾರ ಮಾಹಿತಿಯನ್ನು ಕೇಳಿ ಪಡೆಯುತ್ತಿದ್ದರು. ಈ ರೀತಿಯ ಒಂದು ಕೈಪಿಡಿಯನ್ನು ಯಾಕೆ ಮುದ್ರಿಸ ಬಾರದು ಎಂದು ಯೋಚಿಸಿ ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್ ಕೈ ಪಿಡಿಯನ್ನು ೨೦೦೨ ರಲ್ಲಿ ಬಿಡುಗಡೆ ಮಾಡಿದೆವು" ಎನ್ನುತ್ತಾರೆ ಸುಧೀಂದ್ರ ಅವರು.

 ನವೆಂಬರ್ ನಲ್ಲಿ ಹೊಸ ಆವೃತ್ತಿ

ನವೆಂಬರ್ ನಲ್ಲಿ ಹೊಸ ಆವೃತ್ತಿ

ಸಂಗೀತದ ಬಗ್ಗೆ ಮೊದಲ ಕೈಪಿಡಿಯಾಗಿರುವ ಇದು ಎರಡು ವರ್ಷಕ್ಕೊಮ್ಮೆ ಹೊಸ ಆವೃತ್ತಿಯನ್ನು ಬಿಡುಗಡೆ ಆಗುತ್ತದೆ. ಈ ವರ್ಷದ ಇಪ್ಪತ್ತನೆಯ ವಾರ್ಷಿಕೋತ್ಸವ ಆಗಿರುವ ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ವರ್ಣರಂಜಿತ ಕೈಪಿಡಿಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದೇ ಈ ವರ್ಷದ ವಾರ್ಶಿಕೋತ್ಸವದ ವಿಶೇಷ. ಈ ವರ್ಷದ ಕೈಪಿಡಿಗೆ ನೂರಾರು ಸಂಗೀತಗಾರರ, ಬೇರೆ ವಿಭಿನ್ನ ಸಂಗೀತಕ್ಕೆ ಸಂಬಂಧ ಪಟ್ಟ ವಿವರಗಳು ಸೇರ್ಪಡೆಯಾಗಿದೆ.

 ಹಿರಿಯ ಮತ್ತು ಕಿರಿಯ ಸಂಗೀತಗಾರ ಕಚೇರಿ

ಹಿರಿಯ ಮತ್ತು ಕಿರಿಯ ಸಂಗೀತಗಾರ ಕಚೇರಿ

"ಪ್ರತಿ ವರ್ಷದ ಆಚರಣೆಗಳಲ್ಲಿ ಹಿರಿಯ ಮತ್ತು ಕಿರಿಯ ಸಂಗೀತಗಾರ ಕಚೇರಿಗಳು ನಡೆಯುತ್ತದೆ. ಹಿರಿಯ ಸಂಗೀತಗಾರರು ಕಿರಿಯರ ಸಂಗೀತಗಾರರ ಸಂಗೀತವನ್ನು ಕೇಳಿ ಪ್ರೋತ್ಸಾಹಿಸ ಬೇಕು, ಕಿರಿಯ ಸಂಗೀತಗಾರರು ಹಿರಿಯ ಸಂಗೀತಗಾರರ ಸಂಗೀತವನ್ನು ಕೇಳಿ ಮಾರ್ಗದರ್ಶನ ಪಡೆಯಬೇಕು. ಸಂಗೀತವನ್ನು ಬೆಳೆಸ ಬೇಕೆಂದು ಮಾಡುತ್ತಿರುವ ಒಂದು ಹಬ್ಬ ಇದು," ಎಂದು ಸುಧೀಂದ್ರ ಅವರು ನವೆಂಬರ್ 1, 2,3,4 ನವೆಂಬರ್ ರಲ್ಲಿ ಪತ್ತಿ ಸಭಾಂಗಣ, ಎನ್ ಆರ್ ಕಾಲೋನಿ ಯಲ್ಲಿ ನಡೆಯಲಿರುವ ವಿಶೇಷ ವಾರ್ಷಿಕೋತ್ಸವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ್ದಾರೆ.

English summary
Suswaralaya College of Music releases special music Hand Book. Suswaralaya is a dream project of Vidwan H.S Sudhindra,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X