ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರಲ್ಲಿ ಅನುಮಾನಾಸ್ಪದ ಬ್ಯಾಗ್; ಪೊಲೀಸರಿಂದ ಆತಂಕ ದೂರ

|
Google Oneindia Kannada News

ಬೆಂಗಳೂರು ಆಗಸ್ಟ್ 09: ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಕೆಲವು ಕಾಲ ಆತಂಕ ಮೂಡಿಸಿತ್ತು. ಸ್ಥಳಕ್ಕೆ ಕೇಂದ್ರ ವಿಭಾಗದ ಪೊಲೀಸರು ದೌಡಾಯಿಸಿ ಪರಿಶೀಲಿಸಿ ಜನರ ಆತಂಕ ದೂರ ಮಾಡಿದ್ದಾರೆ.

ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ಬಾಂಬ್ ರೀತಿಯಲ್ಲಿ ಹೊಳೆಯುತ್ತಿರುವ ಲೈಟ್ ಒಳಗೊಂಡ ಕವರ್ ಸಹಿತ ಬ್ಯಾಗ್ ರಸ್ತೆ ಪಕ್ಕದಲ್ಲಿ ಬಿದ್ದಿತ್ತು.

ಇದನ್ನು ಕಂಡು ವ್ಯಕ್ತಿಯೊಬ್ಬರು ಭಯಗೊಂಡು ಮಧ್ಯಾಹ್ನ 2.50ರ ವೇಳೆಗೆ 112 ತುರ್ತು ಸಹಾಯವಾಣಿ ಕರೆ ಮೂಲಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

Suspicious bag found in Bengaluru cops declare suspicious object safe

ಕರೆ ಮೇರೆಗೆ ಕೂಡಲೇ ಸ್ಥಳಕ್ಕೆ ಧಾವಿಸಿದ ಕೇಂದ್ರ ವಿಭಾಗದ ಪೊಲೀಸರು ಹಾಗೂ ಡಿಸಿಪಿ ಶ್ರೀನಿವಾಸ ಗೌಡ ಅವರು ಪರಿಶೀಲನೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳಕ್ಕೂ ವಿಷಯ ತಿಳಿಸಿ ಬರುವಂತೆ ಸೂಚಿಸಿದ್ದಾರೆ. ಈ ವೇಳೆ ರಿಚ್ಮಂಡ್ ರಸ್ತೆ ಅಕ್ಕಪಕ್ಕದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.

ಕೊನೆಗೆ ಅನುಮಾನಾಸ್ಪದ ಬ್ಯಾಗ್ ಪರಿಶೀಲಿಸಿದ ಅಧಿಕಾರಿಗಳು ಇದೊಂದು ಶಾಲಾ ಮಕ್ಕಳ ಬ್ಯಾಂಗ್ ಆಗಿದೆ. ಭಯಪಡುವ ಅಗತ್ಯತೆ ಇಲ್ಲ. ಬಲೂನ್ ಒಂದರಲ್ಲಿ ಸಣ್ಣ ಎಲ್‌ಇಡಿ ಲೈಟ್ ಇಟ್ಟು ಅದನ್ನು ಕವರ್ ಒಳಗೆ ಹಾಕಿ ಬ್ಯಾಗ್‌ ನಲ್ಲಿ ಯಾರೋ ಇಟ್ಟುಕೊಂಡಿದ್ದಾರೆ. ಆ ಲೈಟ್ ಬ್ಲಿಂಕ್ ಆಗದೆ ಹೊರತು ಯಾವುದೇ ಬಾಂಬ್, ಜೀವ ಹಾನಿ ಉಂಟು ಮಾಡುವ ವಸ್ತುವಲ್ಲ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಅವರು ತಿಳಿಸುವ ಮೂಲಕ ಸ್ಥಳೀಯರ ಆತಂಕ ದೂರವಾಗಿಸಿದ್ದಾರೆ.

"ಅನುಮಾನದಿಂದ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯೂ ಸಹ ಉತ್ತಮ ಸಹಕಾರ ನೀಡಿದ್ದಾರೆ. ಬ್ಯಾಗ್ ವಶಕ್ಕೆ ಪಡೆಯಲಾಗಿದ್ದು, ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗೂ ಬರುವಂತೆ ಹೇಳಿದ್ದೇವೆ. ಅವರು ಬಂದ ಕೂಲಂಕುಶವಾಗಿ ಬ್ಯಾಗ್ ಮತ್ತೊಮ್ಮೆ ಪರಿಶೀಲಿಸುತ್ತಾರೆ. ಈ ಬಗ್ಗೆ ನಗರವಾಸಿಗಳು ಆತಂಕ, ಭಯಪಡುವ ಅಗತ್ಯ ಇಲ್ಲ. ಬ್ಯಾಗ್ ಅನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು" ಎಂದು ಶ್ರೀನಿವಾಸ್ ಗೌಡ ಹೇಳಿದರು.

Recommended Video

ಜೈ ಜವಾನ್, ಜೈ ಕಿಸಾನ್ ಹರಿಕಾರ | Stories of lal Bahadur Shastri | OneIndia Kannada

ಬೆಂಗಳೂರಿನಲ್ಲಿ ಕೆಲವೇ ದಿನಗಳ ಹಿಂದೆ ತಿಲಕ್ ನಗರ ಪೊಲೀಸರು ಶಂಕಿತ ಉಗ್ರನನ್ನು ಬಂಧಿಸಿದ್ದರು. ನಂತರ ಆತನೊಂದಿಗೆ ಸಂಪರ್ಕದಲ್ಲಿದ್ದ ಮತ್ತೋರ್ವ ಶಂಕಿತ ಉಗ್ರನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಲೈಟ್ ಬ್ಲಿಂಕ್ ಆಗುವುದನ್ನು ಕಂಡು ಜನ ಸಹಜವಾಗೇ ಭಯಗೊಂಡಿದ್ದಾರೆ.

English summary
Suspicious bag found in Richmond road of Bengaluru City on Tuesday. Police visit to spot and declared suspicious object safe
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X