ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಯಕಿ ಸುಶ್ಮಿತಾ ಆತ್ಮಹತ್ಯೆ; ಪತಿ, ಕುಟುಂಬದವರು ನಾಪತ್ತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 18 : ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಸುಶ್ಮಿತಾ ಪತಿ ಮತ್ತು ಕುಟುಂಬ ಸದಸ್ಯರು ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರೆದಿದೆ.

ಸುಶ್ಮಿತಾ ಪತಿ ಶರತ್ ಕುಮಾರ್, ಆತನ ದೊಡ್ಡಮ್ಮ ವೈದೇಹಿ, ಸಹೋದರಿ ಗೀತಾ ಸಾವಿನ ಸುದ್ದಿ ತಿಳಿದ ಬಳಿಕ ನಾಪತ್ತೆಯಾಗಿದ್ದಾರೆ. ಸುಶ್ಮಿತಾ ಅವರು ಸಾವಿಗೂ ಮುನ್ನ ಬರೆದಿದ್ದಾರೆ ಎಂಬ ಡೆತ್‌ ನೋಟ್‌ನಲ್ಲಿ ಮೂವರ ಹೆಸರು ಉಲ್ಲೇಖಿಸಿದ್ದಾರೆ.

ವರದಕ್ಷಿಣೆ ಕಿರುಕುಳಕ್ಕೆ ಗಾಯಕಿ ಸುಶ್ಮಿತಾ ಆತ್ಮಹತ್ಯೆ, ಪತಿ ನಾಪತ್ತೆವರದಕ್ಷಿಣೆ ಕಿರುಕುಳಕ್ಕೆ ಗಾಯಕಿ ಸುಶ್ಮಿತಾ ಆತ್ಮಹತ್ಯೆ, ಪತಿ ನಾಪತ್ತೆ

Sushmita Suicide Case Husband Family Members Missing

ಆತ್ಮಹತ್ಯೆಗೆ ಶರಣಾಗುವ ಮುನ್ನ ತಾಯಿಗೆ ಸುಶ್ಮಿತಾ ತಾಯಿಗೆ ವಾಟ್ಸಪ್ ಸಂದೇಶ ಕಳಿಸಿದ್ದರು. ಅದರಲ್ಲಿ ಪತಿ ಮತ್ತು ಅವರ ಕುಟುಂಬದವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದ್ದರಿಂದ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ರಾಮನಗರದ SRS ಬೆಟ್ಟದಿಂದ ಜಿಗಿದು ಹೆಲ್ತ್ ಇನ್ಸ್ ಪೆಕ್ಟರ್ ಆತ್ಮಹತ್ಯೆರಾಮನಗರದ SRS ಬೆಟ್ಟದಿಂದ ಜಿಗಿದು ಹೆಲ್ತ್ ಇನ್ಸ್ ಪೆಕ್ಟರ್ ಆತ್ಮಹತ್ಯೆ

ಸುಗಮ ಸಂಗೀತ ಗಾಯಕಿಯಾದ ಸುಶ್ಮಿತಾ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿಯೂ ಹಾಡಿದ್ದರು. ಶರತ್ ಎಂಬುವವರನ್ನು ಪ್ರೀತಿಸಿ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ಸೋಮವಾರ ಮಾಳಗಾದಲ್ಲಿರುವ ತಾಯಿ ಮನೆಯಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಪ್ರೇಮಿಗಳ ದಿನವೇ ಹಾರಂಗಿ ಹಿನ್ನೀರಿಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆಪ್ರೇಮಿಗಳ ದಿನವೇ ಹಾರಂಗಿ ಹಿನ್ನೀರಿಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

ಸುಶ್ಮಿತಾ ಪತಿಯ ಜೊತೆ ನಾಗರಭಾವಿಯಲ್ಲಿನ ನಿವಾಸದಲ್ಲಿ ನೆಲೆಸಿದ್ದರು. ಸುಶ್ಮಿತಾ ಅವರು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕ ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

English summary
Bengaluru Annapoorneshwari nagar police searching for the husband and family members of Sushmita. 26 year old Sushmita committed suicide. It is alleged that husband's family torturing her for dowry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X