ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ನೀರಿಗೆ ಎಷ್ಟು ಹಣ ನೀಡುತ್ತೀರಿ?

|
Google Oneindia Kannada News

ಬೆಂಗಳೂರು, ಜ. 16 : ಬೆಂಗಳೂರಿನ ನೀರು ಉಪಯೋಗ ಮತ್ತು ವಿಭಿನ್ನ ದರಗಳ ಕುರಿತು ಸರ್ವೆ ಮಾಡಲಾಗುತ್ತಿದ್ದು ನೀವು ಭಾಗವಹಿಸಬಹುದು. ಆದರೆ ಇದು ಯಾವುದೆ ಸರ್ಕಾರಿ ಸಮೀಕ್ಷೆಯಲ್ಲ.

ಐಐಎಂn ವಿದ್ಯಾರ್ಥಿ ಅನುರುದ್ಧ್ ರಾಜಶೇಖರ್ ಇಂಥದ್ದೊಂದು ಸರ್ವೆ ಮಾಡಲು ಮುಂದಾಗಿದ್ದಾರೆ. ಬೆಂಗಳೂರು ನಗರದ ದಿನಬಳಕೆಯ ನೀರಿನ ಪ್ರಮಾಣ, ನಕ್ಷೆ ಮತ್ತು ನೀರಿನ ಟ್ಯಾಂಕರ್ ಗೆ ನೀಡುತ್ತಿರುವ ಬೆಲೆಗಳ ಮೇಲೆ ಸರ್ವೆ ಗಮನ ನೀಡಲಿದೆ.[ಅಕ್ರಮ ನೀರಿನ ಸಂಪರ್ಕ ಪಡೆದಿದ್ದರೆ ಕ್ರಿಮಿನಲ್ ಕೇಸ್]

bengaluru

ಸರ್ವೆ ನಂತರ ನೀಡುವ ವರದಿ ಬೆಂಗಳೂರಿನ ನೀರು ಸರಬರಾಜು ಲೋಪಗಳನ್ನು ಬಯಲಿಗೆಳೆಯಲಿದೆ. ಇದು ಸಕಾರಾತ್ಮಕ ಪರಿಹಾರ ಕಲ್ಪಿಸಿಕೊಡಲು ನೆರವಾಗುತ್ತದೆ ಎಂದು ಅನಿರುದ್ಧ್ ತಿಳಿಸಿದ್ದಾರೆ.

ನೀವು ಯಾವುದೇ ಒಂದು ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರೆ ಈ ಚಿಕ್ಕದಾದ ಮಾಹಿತಿ ನೀಡಲು 10 ನಿಮಿಷದ ಕಾಲ ಹಿಡಿಯುವುದು. ಬೆಂಗಳೂರಿನ ನೀರು ಸರಬರಾಜು ಪದ್ಧತಿ ಜತೆಗೆ ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಅಲ್ಲದೇ ಸರ್ವೆಯಲ್ಲಿ ಭಾಗವಹಿಸಿದವರಿಗೆ ಲಕ್ಕಿ ಡ್ರಾ ಮೂಲಕ ಐಐಎಂ ಬಹುಮಾನ ನೀಡಲಿದೆ. ಜತೆಗೆ ಪಿವಿಆರ್ ಗೆ ಸಿನಿಮಾ ಟಿಕೆಟ್ ಕೂಡಾ ಪಡೆದುಕೊಳ್ಳಬಹುದು.[ನೀರಿನ ಬೆಲೆ ಏರಿದೆ, ವಿವರಗಳು ಇಲ್ಲಿದೆ]

ಇಲ್ಲಿ ನಿಮ್ಮ ಮತ್ತು ನೀವು ನೀಡುವ ಮಾಹಿತಿ ಬಹಿರಂಗ ಮಾಡುವುದಿಲ್ಲ. ಬದಲಾಗಿ ಸರ್ವೆಯ ವರದಿನ್ನು ಸಾರ್ವಜನಿಕವಾಗಿ ಮಂಡಿಸಿ ಸಂಬಂಧಿಸಿದವರಿಗೆ ಸಲಹೆ ನೀಡಲಾಗುತ್ತದೆ.[ಹೆಚ್ಚಿನ ವಿವರಗಳು]

English summary
Anirudh Rajashekar, a student from MIT's Department of Urban Studies and Planning, alongwith IIM Bangalore's New Real Estate initiative, is conducting a study to map out water tanker prices in Bangalore to understand the dynamics of the water tanker industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X