ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಪ್ತಚರ ವರದಿ ಎಂದ ನಿಖಿಲ್ ಕುಮಾರಸ್ವಾಮಿಗೆ ಸುರೇಶ್ ಕುಮಾರ್ ತರಾಟೆ

|
Google Oneindia Kannada News

ಬೆಂಗಳೂರು, ನವೆಂಬರ್ 21: "ನಮಗೆ ಬಂದಿರುವ ಗುಪ್ತಚರ ವರದಿ ಪ್ರಕಾರ..." ಹೀಗೆಂದು ಮಾತು ಆರಂಭಿಸಿದವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ! 'ಅಷ್ಟಕ್ಕೂ ಗುಪ್ತಚರ ವರದಿ ಅಂದ್ರೆ ಅಷ್ಟೆಲ್ಲ ಸಲೀಸಾ?' ಎಂದು ಪ್ರಶ್ನಿಸಿ ನಿಖಿಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಬಿಜೆಪಿ ಮುಖಂಡ ಸುರೇಶ್ ಕುಮಾರ್.

"ಗುಪ್ತಚರ ವರದಿ ಏನು ಅಷ್ಟು ಸಲೀಸಾ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಅಧಿಕಾರವೇನು?" ಎಂದು ರಾಜಾಜೀನಗರ ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿಗಳ ಸ್ಪಷ್ಟನೆ ಕೇಳಿದ್ದಾರೆ.

ಮಂಗಳವಾರ ರಾಜ್ಯದಲ್ಲಿ ನಡೆದ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ನಿಖಿಲ್ ಕುಮಾರಸ್ವಾಮಿ, "ನಮಗೆ ಬಂದಿರುವ ಗುಪ್ತಚರ ವರದಿ, ಮಾಹಿತಿಯ ಪ್ರಕಾರ ನಿನ್ನೆ ಬಂದಿರುವ ವ್ಯಕ್ತಿಗಳೇನಿದ್ದಾರೆ ಅಲ್ಲಿ.... ರೈತರು ಗೂಂಡಾ ವರ್ತನೆ ಮಾಡ್ತಾರಾ? ನೀವೇ ಹೇಳಿ. ನಿಮಗೇ ಗೊತ್ತು ನಾವು ಸರ್ಕಾರ ರಚಿಸ್ತಾ ಇದ್ದೀವಿ... " ಎಂದರು.

ಅನಿತಾ ಕುಮಾರಸ್ವಾಮಿಗೆ ಸುರೇಶ್ ಟ್ವೀಟಾಸ್ತ್ರ: ತರಹೇವಾರಿ ಪ್ರತಿಕ್ರಿಯೆ ಅನಿತಾ ಕುಮಾರಸ್ವಾಮಿಗೆ ಸುರೇಶ್ ಟ್ವೀಟಾಸ್ತ್ರ: ತರಹೇವಾರಿ ಪ್ರತಿಕ್ರಿಯೆ

ನಿನ್ನೆಯ ಪ್ರತಿಭಟನೆಯ ಹಿಂದೆ ಬೇರೆಯದೇ ಶಕ್ತಿಗಳ ಕೈವಾಡವಿದೆ, ರೈತರು ಗೂಂಡಾವರ್ತನೆ ಮಾಡೋಲ್ಲ ಎಂದ ನಿಖಿಲ್ ಅವರು, 'ಗುಪ್ತಚರ ವರದಿ' ಎಂಬ ಪದ ಬಳಕೆ ಮಾಡಿರುವುದು ಇದೀಗ ವಿವಾದ ಸೃಷ್ಟಿಸಿದೆ.

ನಿಖಿಲ್ ಅಧಿಕಾರವೇನು?

"ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಕುಮಾರಸ್ವಾಮಿಯವರ "ಅಧಿಕಾರ" ಏನು? ಮುಖ್ಯಮಂತ್ರಿಗಳ ಮಗನಾಗಿದ್ದಕ್ಕೆ ಈ ಮಹದವಕಾಶವೇ? ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು" ಎಂದು ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಅನಿತಾ ಕುಮಾರಸ್ವಾಮಿಗೆ ಸುರೇಶ್ ಕುಮಾರ್ 'ಭಲೇ' ಟ್ವೀಟ್! ಅನಿತಾ ಕುಮಾರಸ್ವಾಮಿಗೆ ಸುರೇಶ್ ಕುಮಾರ್ 'ಭಲೇ' ಟ್ವೀಟ್!

ಕರ್ನಾಟಕ ಜನರ ದುರದೃಷ್ಟ

"ಒಂದು ಕುಟುಂಬಕ್ಕೆ ಮಾತ್ರ ಕರ್ನಾಟಕ ರಾಜಕಾರಣ ಸೀಮಿತವಾಗಿದೆ ಅನ್ನುವುದು ಇದರಲ್ಲೆ ಗೊತ್ತಾಗುತ್ತಾದೆ ಮತ್ತು ಮುಖ್ಯಮಂತ್ರಿಗಿಂತ ಹೆಚ್ಚಾಗಿ ಸರ್ಕಾರಿ ಯಂತ್ರನ ಅವರ ಕುಟುಂಬವೇ ದುರುಪಯೋಗ ಪಡಿಸಿಕೊಳ್ಳುತ್ತಿರವುದು ಕರ್ನಾಟಕದ ಜನರ ದುರದೃಷ್ಟ" ಎಂದು ಮಂಜುನಾಥ್ ಬಿಲ್ಲವ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದತ್ತ ನಿಖಿಲ್ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರಾ?ಮಂಡ್ಯ ಲೋಕಸಭಾ ಕ್ಷೇತ್ರದತ್ತ ನಿಖಿಲ್ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರಾ?

ಕುಟುಂಬ ರಾಜಕಾರಣದ ಆರೋಪ ಒಪ್ಪಿಕೊಂಡರು!

"ನಿನ್ನೆ ಇವರಾಡಿದ ಮಾತಿನ ಪ್ರಕಾರ "ನಾವು" ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದ್ದೇವೆ ಎನ್ನುವುದರಿಂದ ಕುಟುಂಬ ರಾಜಕಾರಣದ ಆರೋಪವನ್ನು ಇವರೇ ಒಪ್ಪಿಕೊಂಡಂತಾಗಿದೆ!" ಎಂದಿದ್ದಾರೆ ಚೈತನ್ಯ ಭಟ್.

ಆಡಳಿತಕ್ಕೆ ಬೇಕಾದಂತಹ ಲವಲೇಶ ಜ್ಞಾನವಿಲ್ಲ!

"ಗೊತ್ತು ಗುರಿ ಇಲ್ಲದ ಸರ್ಕಾರ ಹೇಗೆ ಇರುತ್ತೆ, ನಡೆಯುತ್ತೆ ಅನ್ನೋದಕ್ಕೆ ಇದೊಂದು ಉದಾಹರಣೆ. ಈ ಅಪ್ಪ ಮಕ್ಕಳು ಮೊಮ್ಮಕ್ಕಳಿಗೆ ಅಧಿಕಾರದ ದಾಹ. ಆಡಳಿತಕ್ಕೆ ಬೇಕಾದಂತಹ ಲವಲೇಶ ಜ್ಞಾನವೂ ಅವರಿಗಿಲ್ಲ. ಕರ್ನಾಟಕದ ದುರಾದೃಷ್ಟ ಇವರು" ಎಂದಿದ್ದಾರೆ ಯೋಗೇಂದ್ರ ಬಿ ಇ.

English summary
BJP MLA Suresh Kumar by his tweet attacks CM HD Kumaraswamy's son Nikhil Kumaraswamy for his comment on intelligence report on Farmers' protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X