• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬರಾಕ್ ಒಬಾಮಾ ಸರಳತೆ ಮೆಚ್ಚಿಕೊಂಡ ಸಚಿವ ಸುರೇಶ್ ಕುಮಾರ್

|

ಬೆಂಗಳೂರು, ನವೆಂಬರ್ 2: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಕದನ ಅಂತಿಮ ಹಂತಕ್ಕೆ ತಲುಪಿದೆ. ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ನಡುವೆ ಯಾರು ಅಧ್ಯಕ್ಷ ಸ್ಥಾನದ ಗಾದಿ ಏರಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಏಕೆಂದರೆ ಅಮೆರಿಕದ ಅಧ್ಯಕ್ಷಗಿರಿ ಭಾರತ ಮತ್ತು ಅಮೆರಿಕ ಸಂಬಂಧದ ವಿಚಾರದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಪರ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಅನೇಕ ಪ್ರಮುಖರು ವಿವಿಧ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲಿ ಒಬಾಮಾ ಅವರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮತದಾರರಿಗೆ ಫೋನ್ ಮೂಲಕ ಮನವಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ರಾಜ್ಯದ ಸರಳ ವ್ಯಕ್ತಿತ್ವದ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಂಚಿಕೊಂಡಿದ್ದು, ಒಬಾಮಾ ಅವರ ಪ್ರಚಾರದ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ.

ಟ್ರಂಪ್ ಎಡವಟ್ಟಿನಿಂದಲೇ ವೈಟ್‌ಹೌಸ್ ಕೊರೊನಾ ಹಾಟ್‌ಸ್ಪಾಟ್ ಆಗಿದೆ: ಒಬಾಮಾ

'ಅಮೇರಿಕಾದ ಮಾಜಿ ರಾಷ್ಟ್ರಪತಿ ಈ ಚುನಾವಣೆಯ ರಾಷ್ಟ್ರಪತಿ ಚುನಾವಣೆಯಲ್ಲಿನ ತನ್ನ ಪಕ್ಷದ ಅಭ್ಯರ್ಥಿಗೆ ಫೋನ್ ಮೂಲಕ‌ ಮತಯಾಚನೆ ಮಾಡುತ್ತಿರುವ ರೀತಿ ಇದು.‌ ಈ ಸರಳತೆ ಖುಷಿ ಕೊಡುತ್ತದೆ' ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಮುಂದೆ ಓದಿ.

ನಾನು ಅಧ್ಯಕ್ಷನಾಗಿದ್ದೆ, ನೆನಪಿದೆಯೇ?

ನಾನು ಅಧ್ಯಕ್ಷನಾಗಿದ್ದೆ, ನೆನಪಿದೆಯೇ?

ಅಲಿಸ್ಸಾ ಎಂಬ ಮಹಿಳೆಗೆ ಟೆಲಿಫೋನ್ ಕರೆ ಮಾಡುವ ಬರಾಕ್ ಒಬಾಮಾ, 'ನಾನು ಅಧ್ಯಕ್ಷನಾಗಿದ್ದೆ ನೆನಪಿದೆಯೇ' ಎಂದು ಕೇಳುತ್ತಾರೆ. ಬೈಡನ್ ಅವರ ಪರವಾಗಿ ನಾನು ಫೋನ್ ಬ್ಯಾಂಕಿಂಗ್ ಮಾಡುತ್ತಿದ್ದೇನೆ. ನಾನು ಕರೆ ಮಾಡುತ್ತಿರುವ ಜನರಲ್ಲಿ ನೀವೂ ಒಬ್ಬರು. ಹೇಗಿದ್ದೀರಿ?' ಎಂದು ಕೇಳುತ್ತಾರೆ. ಸ್ವತಃ ಒಬಾಮಾ ಅವರು ಕರೆ ಮಾಡುವುದನ್ನು ನಿರೀಕ್ಷಿಸದ ಮಹಿಳೆ, ತಾವು ಆಘಾತಗೊಂಡಿರುವುದಾಗಿ ಹೇಳುತ್ತಾರೆ.

60 ನಿಮಿಷ ಸಂದರ್ಶನ ಎದುರಿಸಲಾಗದ ಟ್ರಂಪ್ ಕೈಗೆ ದೇಶ ಕೊಡಬೇಕೇ?: ಒಬಾಮಾ

ಬೈಡನ್, ಕಮಲಾಗೆ ಮತ ಹಾಕಿ

ಬೈಡನ್, ಕಮಲಾಗೆ ಮತ ಹಾಕಿ

'ಮಂಗಳವಾರ ಚುನಾವಣಾ ದಿನ. ಇದು ಬಹಳ ಸಮೀಪದ ಚುನಾವಣೆಯಾಗಲಿದೆ. ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರ ಪರವಾಗಿ ಪತ ಚಲಾಯಿಸುವಂತೆ ಕೋರುತ್ತೇನೆ' ಎನ್ನುವ ಒಬಾಮಾ, ಹಿನ್ನೆಲೆಯಲ್ಲಿ ಕೇಳಿಬರುವ ಮಗುವಿನ ಅಳುವಿನ ಬಗ್ಗೆ ವಿಚಾರಿಸುತ್ತಾನೆ. ಆತನಿಗೆ ಹಸಿವಾಗಿರಬೇಕು, ಇಲ್ಲವೇ ಡೈಪರ್ ಬದಲಿಸಬೇಕಿರಬಹುದು' ಎಂದು ತಮಾಷೆ ಮಾಡುತ್ತಾರೆ.

ಮಗುವಿನೊಂದಿಗೆ ಸಂಭಾಷಿಸಿದ ಒಬಾಮಾ

ಮಗುವಿನೊಂದಿಗೆ ಸಂಭಾಷಿಸಿದ ಒಬಾಮಾ

'ನಾನು ಫೋನ್‌ನಲ್ಲಿ ಮಾತನಾಡುವಾಗಲೆಲ್ಲಾ ಅವನು ಅಳುತ್ತಾನೆ' ಎಂದು ಅಲಿಸಾ ಹೇಳಿದಾಗ, 'ಹಾಗಾದರೆ ನಾನೇ ಅವನೊಂದಿಗೆ ಮಾತನಾಡುತ್ತೇನೆ, ಹಾಯ್ ಜಾಕ್ಸ್ ಏನು ಮಾಡುತ್ತಿದ್ದೀ?' ಎಂದು ಕೇಳುತ್ತಾರೆ. 'ನೀನಿನ್ನೂ ಎಂಟು ತಿಂಗಳ ಮಗು. ಹೀಗಾಗಿ ಹೆಚ್ಚು ಸಮಯ ಫೋನ್‌ನಲ್ಲಿ ಮಾತನಾಡಲು ಆಗುವುದಿಲ್ಲ' ಎಂದು ಒಬಾಮಾ ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.

  MuniRathna RRNagar : ನಾನು ಜನರಲ್ಲಿ ಮತ ಭಿಕ್ಷೆ ಬೇಡಿದ್ದೆನೆ, ಮತದಾರನ ನಿರ್ಧಾರಕ್ಕೆ ಬದ್ಧ | Oneindia Kannada
  ನಮ್ಮ ರಾಜಕಾರಣಿಗಳಲ್ಲಿ ಯಾವಾಗ?

  ನಮ್ಮ ರಾಜಕಾರಣಿಗಳಲ್ಲಿ ಯಾವಾಗ?

  ಸುರೇಶ್ ಕುಮಾರ್ ಅವರು ಹಂಚಿಕೊಂಡ ವಿಡಿಯೋಕ್ಕೆ ನೂರಾರು ಮಂದಿ ವಿವಿಧ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ರೀತಿಯ ಸರಳತೆ ನಮ್ಮ ರಾಜಕಾರಣಿಗಳಲ್ಲಿ ಯಾವಾಗ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ. ನಮ್ಮಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೆದ್ದವರನ್ನೇ ಮಾತನಾಡಿಸುವುದು ಕಷ್ಟ. ಹೀಗಿರುವಾಗ ನಮ್ಮ ರಾಜಕಾರಣಿಗಳಿಂದ ಇದನ್ನೆಲ್ಲ ಅಪೇಕ್ಷಿಸುವುದು ತಪ್ಪು ಎಂದಿದ್ದಾರೆ.

  ಟ್ರಂಪ್‌ಗೆ ಸಣ್ಣ ವಿಷಯವೂ ಅರ್ಥವಾಗಲ್ಲ, ಆದರೆ ಕೋಪ ಚೆನ್ನಾಗಿ ಬರುತ್ತೆ: ಒಬಾಮಾ

  English summary
  US Elections: Minister S Suresh Kumar has praised former US president Barack Obama's simplicity and shared a video of him.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X