ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಧುನಿಕ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗೆ ಉದ್ಘಾಟಿಸಿದ ಸುರೇಶ್ ಕುಮಾರ್

|
Google Oneindia Kannada News

ಬೆಂಗಳೂರು, ಫೆಬ್ರುವರಿ 26: ಅತ್ಯಾಧುನಿಕ ಸೌಲಭ್ಯದ, ನೂತನ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡ ಬಾಣಸವಾಡಿಯಲ್ಲಿ ಉದ್ಘಾಟಿಸಿದ್ದಾರೆ, ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಮತ್ತು ಇತರೆ ಸರ್ಕಾರಿ ಅಧಿಕಾರಿಗಳು, ಅತಿಥಿಗಳು, ಶಿಕ್ಷಣ ಇಲಾಖೆಯ ಪ್ರಮುಖರು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಅವರು, 'ಈಗಿನ ಸವಾಲಿನ ಸಂದರ್ಭದಲ್ಲಿ ನಾವು ಮಕ್ಕಳು ಮರಳಿ ಶಾಲೆಗೆ ಬರಲು ಅತ್ಯಾಧುನಿಕ ಸೌಲಭ್ಯಗಳಿರುವ ಶಾಲೆಯನ್ನು ಒದಗಿಸಿದ್ದೇವೆ. ಈ ಶಾಲೆ ಮತ್ತು ಅದರ ಸೌಲಭ್ಯಗಳು 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಉನ್ನತ ಹಂತದ ಶಿಕ್ಷಣಕ್ಕೆ ಪೂರ್ವಭಾವಿಯಾಗಿ ಗುಣಮಟ್ಟದ ಶಿಕ್ಷಣ ಪಡೆಯಲು ನೆರವಾಗಲಿವೆ. ಈ ಶಾಲೆಯಲ್ಲಿ ವೃತ್ತಿಪರ ತಂಡ ನಿತ್ಯದ ಸೌಲಭ್ಯಗಳನ್ನು ನಿರ್ವಹಣೆ ಮಾಡಲಿದ್ದು, ವಿದ್ಯಾರ್ಥಿಗಳು ದೇಹಾರೋಗ್ಯ ರಕ್ಷಣೆಯ ಸೌಲಭ್ಯಗಳನ್ನು ಪಡೆಯಲು ಅನುಕೂಲಕವಾಗಲಿದೆ. ಇದು, ದೀರ್ಘಕಾಲದಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ' ಎಂದರು.

ಹೆಚ್ಚುವರಿಯಾಗಿ ಸರ್ವಜ್ಞ ನಗರ ಆರೋಗ್ಯ ಆರೈಕೆ ಸಂಸ್ಥೆಯು ಇದ್ದು, ಗುಣಮಟ್ಟದ ಚಿಕಿತ್ಸಾ ಸೇವೆಯನ್ನು ಕೆಳಹಂತ, ಕೆಳಸ್ತರದ ಜನರಿಗೆ ಒದಗಿಸಲಿದೆ. ಅತ್ಯಾಧುನಿಕ ಸೌಲಭ್ಯದ ಕೌಶಲ ಅಭಿವೃದ್ಧಿ ಕೇಂದ್ರವನ್ನು ಜೀವನಹಳ್ಳಿಯಲ್ಲಿ ಸ್ಥಾಪಿಸಲಾಗುತ್ತದೆ. ಇದು, ಸರ್ವಜ್ಞನಗರ ಕ್ಷೇತ್ರದ ಯುವಜನರಿಗೆ ಜೀವನ ಕಟ್ಟಿಕೊಳ್ಳಲು ಅಗತ್ಯ ಕೌಶಲವನ್ನು ಒದಗಿಸುವಂತೆ ರೂಪಿಸಲಾಗಿದೆ.

ಎಸ್.ಸುರೇಶ್ ಕುಮಾರ್ ಮಾತನಾಡಿ

ಎಸ್.ಸುರೇಶ್ ಕುಮಾರ್ ಮಾತನಾಡಿ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ''ಕರ್ನಾಟಕ ಪಬ್ಲಿಕ್ ಸ್ಕೂಲ್ ಅನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಅನ್ನು 1 ರಿಂದ 12ನೇ ತರಗತಿವರೆಗಿನ ಮಕ್ಕಳಿಗ ಗುಣಮಟ್ಟದ ಸೌಲಭ್ಯವನ್ನು ನಿಯಮಿತವಾಗಿ ಒದಗಿಸುವಂತೆ ರೂಪಿಸಲಾಗಿದೆ. ಅತ್ಯುತ್ತಮ ಕಲಿಕಾ ತಾಣವಾಗಿ ಶಾಲೆ ರೂಪಿಸಲು ಶಾಸಕ ಕೆ.ಜೆ.ಜಾರ್ಜ್ ಅವರು ಒತ್ತು ನೀಡಿರುವುದು ಶ್ಲಾಘನೀಯ'' ಎಂದು ಹೇಳಿದರು.

ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ

ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ

ನೂತನ ಶಾಲಾ ಕಟ್ಟಡವು 12 ತರಗತಿಗಳು, 1 ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ರೂಂ, ಕೆಫೆಟೇರಿಯಾ, ಸೋಲಾರ್ ಪವರ್ ಸೌಲಭ್ಯ, ಮಳೆ ನೀರು ಸಂರಕ್ಷಣೆ, ಹ್ಯಾಂಡ್‍ವಾಷ್ ಮತ್ತು ಕುಡಿಯುವ ನೀರು ಸೌಲಭ್ಯವನ್ನು ಒಳಗೊಂಡಿದೆ. ಬಾಲಕರು, ಬಾಲಕಿಯರು ಹಾಗೂ ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ.

ಹೊಸ ರೂಪ ನೀಡುವ ಕಾರ್ಯವೂ ನಡೆದಿದೆ

ಹೊಸ ರೂಪ ನೀಡುವ ಕಾರ್ಯವೂ ನಡೆದಿದೆ

ಅಲ್ಲದೆ, ಪಕ್ಕದಲ್ಲಿಯೇ ಇರುವ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಹೊಸ ರೂಪ ನೀಡಲು ಒತ್ತು ನೀಡಲಾಗಿದೆ. ನೀರು ಸೋರದಂತೆ ಇಡೀ ಚಾವಣಿ ದುರಸ್ತಿ ಪಡಿಸಲಾಗುತ್ತಿದೆ. ಹಳೆಯ ಕೊಠಡಿಗಳಿಗೆ ಒಳಗೆ ಮತ್ತು ಹೊರಗೆ ಬಣ್ಣ ಬಳಿಯುವುದು, ಕಾರಿಡಾರ್ ಮತ್ತು ಮೆಟ್ಟಿಲುಗಳಿಗೆ ಹೊಸ ರೂಪ ನೀಡುವ ಕಾರ್ಯವೂ ನಡೆದಿದೆ. ನೂತನ ಸ್ಕೂಲ್ ಕಟ್ಟಡದಲ್ಲಿ ಅಗತ್ಯ ಪರಿಕರಗಳನ್ನು ಜೋಡಣೆ ಮಾಡಲಾಗುತ್ತಿದೆ.

Recommended Video

ಅಂಬಾನಿ ನಿವಾಸದ ಎದುರು ಪತ್ತೆಯಾದ ವಾಹನದಲ್ಲಿ ಸ್ಫೋಟಕದ ಜೊತೆ ಇತ್ತು 'ಎಚ್ಚರಿಕೆ ಪತ್ರ'! | Oneindia Kannada
ಶಾಲೆ ಕಟ್ಟಡಗಳಲ್ಲಿ ಇ-ಲರ್ನಿಂಗ್ ಕಾರ್ಯಕ್ರಮ

ಶಾಲೆ ಕಟ್ಟಡಗಳಲ್ಲಿ ಇ-ಲರ್ನಿಂಗ್ ಕಾರ್ಯಕ್ರಮ

ಕೆ.ಜೆ.ಜಾರ್ಜ್ ಅವರ ನಾಯಕತ್ವದಲ್ಲಿ ನೂತನ ಸರ್ಕಾರಿ ಶಾಲೆ ಕಟ್ಟಡವನ್ನು ದೊಡ್ಡ ಪ್ರಮಾಣದ ಆದ್ಯತೆಯೊಂದಿಗೆ ನಿರ್ಮಿಸಲಾಗಿದೆ. ಈ ಮೂಲಕ ಸರ್ವಜ್ಞ ನಗರದಲ್ಲಿ ದೊಡ್ಡ ಪ್ರಮಾಣದ ಮೂಲಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ನವೀಕರಣ ಕಾರ್ಯಕ್ರಮಗಳ ಪಟ್ಟಿಯಲ್ಲಿ 14 ಸರ್ಕಾರಿ ಶಾಲೆಗಳು, 37 ಅಂಗನವಾಡಿ ಕಟ್ಟಡಗಳು ಸೇರಿದ್ದು, ಸರ್ಕಾರಿ ಶಾಲೆ ಕಟ್ಟಡಗಳಲ್ಲಿ ಇ-ಲರ್ನಿಂಗ್ ಕಾರ್ಯಕ್ರಮವು ಸೇರಿದೆ.

English summary
Minister for Primary & Secondary Education S Suresh Kumar inaugurated a brand new Karnataka Public School at Dodda Banaswadi in the Sarvagna Nagar constituency, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X