ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಮಹಾಸವಾಲುಗಳ ನಡುವೆಯೂ ಪಿಯು ಫಲಿತಾಂಶ: ಸುರೇಶ್ ಕುಮಾರ್

|
Google Oneindia Kannada News

ಬೆಂಗಳೂರು, ಜುಲೈ 14: ಲಾಕ್‌ಡೌನ್ ಸಂದರ್ಭದಲ್ಲೂ ಹಲವು ಸವಾಲುಗಳ ನಡುವೆ ದ್ವಿತೀಯ ಪಿಯುಸಿಯ ಪರೀಕ್ಷೆಯನ್ನು ನಡೆಸಲಾಗಿದೆ ಇದೀಗ ಫಲಿತಾಂಶ ಬಂದಿದ್ದು ಸಂತಸವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕಳೆದ ಬಾರಿ ಒಟ್ಟು 6,71,653 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 4,14,587 ಮಂದಿ ತೇರ್ಗಡೆಯಾಗಿದ್ದರು. ಕಳೆದ ವರ್ಷ ದಾಖಲಾದ ಒಟ್ಟಾರೆ ಶೇಕಡಾವಾರು ಫಲಿತಾಂಶ 61.71. ಈ ವರ್ಷ 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 3,84,937 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಖಡಾವಾರು ಫಲಿತಾಂಶ ಶೇ. 61.80.

ಕರ್ನಾಟಕ 2ನೇ ಪಿಯು ಫಲಿತಾಂಶ: 88 ಕಾಲೇಜುಗಳಲ್ಲಿ ಶೂನ್ಯ ಸಾಧನೆಕರ್ನಾಟಕ 2ನೇ ಪಿಯು ಫಲಿತಾಂಶ: 88 ಕಾಲೇಜುಗಳಲ್ಲಿ ಶೂನ್ಯ ಸಾಧನೆ

ಈ ವರ್ಷ ಒಟ್ಟಾರೆ 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 3,84,937 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಖಡಾವಾರು ಫಲಿತಾಂಶ ಶೇ. 61.80 ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ76.80 ವಾಣಿಜ್ಯ ಶೇ.65.52 ಹಾಗೂ ಕಲಾ ವಿಭಾಗದಲ್ಲಿ ಶೇ.41.27 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Suresh Kumar Expressed His Happiness Over 2nd PU Result

ಇನ್ನೂ ಕಳೆದ ವರ್ಷ ಶೇ. 61.38 ರಷ್ಟು ನಗರ ಭಾಗದ ವಿದ್ಯಾರ್ಥಿಗಳು ಪಾಸ್‌ ಆಗಿದ್ದರೆ, ಈ ವರ್ಷ ಶೇ.62.60 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಳೆದ ಬಾರಿ ಶೇ.62.88 ರಷ್ಟು ಫಲಿತಾಂಶ ದಾಖಲಾಗಿತ್ತು. ಈ ವರ್ಷ ಈ ಪ್ರಮಾಣ ಶೇ.58.99ಕ್ಕೆ ಇಳಿದಿದೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಕಳೆದ ವರ್ಷ ಶೇ.92.20 ಅಂಕದೊಂದಿಗೆ ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಶೇ.51.42 ಅಂಕದೊಂದಿಗೆ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿತ್ತು.

ಈ ವರ್ಷವೂ ಶೇ. 90.71ರಷ್ಟು ಫಲಿತಾಂಶದೊಂದಿಗೆ ಉಡುಪಿ ಮತ್ತೆ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಹಾಗೂ ಕೊಡಗು ಮೂರನೇ ಸ್ಥಾನ ಪಡೆದುಕೊಂಡಿದೆ. ಆದರೆ, ವಿಜಯ ನಗರ ಜಿಲ್ಲೆ ಈ ಭಾರಿ ಕೊನೆಯ ಸ್ಥಾನ ಗಳಿಸಿಕೊಂಡಿದೆ" ಎಂದು ಸುರೇಶ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಲ್ಲಾ ವರ್ಷದಂತೆ ಕಳೆದ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿದಿದ್ದರು. 3,33,985 ಬಾಲಕಿಯರು ಪರೀಕ್ಷೆ ಬರೆದಿದ್ದು ಈ ಪೈಕಿ 2,27,897 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರೆ, 3,37,668 ಬಾಲಕರು ಪರೀಕ್ಷೆ ಎದುರಿಸಿದ್ದು ಇವರಲ್ಲಿ 1,86,690 ಮಂದಿ ಪಾಸಾಗಿದ್ದರು. ಈ ವರ್ಷವೂ ಸಹ ಬಾಲಕಿಯರೇ ಮುಂದಿದ್ದು, ಶೇ.68.73 ರಷ್ಟು ಪಾಸ್‌ ಆಗಿದ್ದರೆ, ಬಾಲಕರ ಶೇ. 54.77 ರಷ್ಟು ಉತ್ತೀರ್ಣರಾಗಿದ್ದಾರೆ.

English summary
Education minister Suresh Kumar claimed that government announced the 2nd PU result with many challenges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X